ಉಡುಪಿ: 35 ಅಡಿ ಎತ್ತರದ ಬೃಹತ್‌ ಮರವೇರಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು…!

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಬಿಡುವಿನ ವೇಳೆ ಶಿಷ್ಯಂದಿರಿಗೆ ಪಾಠ ಪ್ರವಚನ ಮಾಡುವುದಲ್ಲದೆ, ಶ್ರೀಮಠದ ಗೋಶಾಲೆಗೆ ಹೋಗುತ್ತಾರೆ. ಅವರು ಆಗಾಗ ಶಿಷ್ಯಂದಿರೇ ಅಚ್ಚರಿಪಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇದೀಗ ಅವರು ಬೃಹತ್‌ ಗಾತ್ರದ ಹಲಸಿನ ಮರವೇರಿ ಹಲಸಿನ ಕಾಯಿಗಳನ್ನು ಕೊಯ್ದು ಸುದ್ದಿಯಾಗಿದ್ದಾರೆ. ಅವರು ಹಲಸಿನ ಮರ ಏರಿದ ಫೋಟೋಗಳು ಭಾರೀ ವೈರಲ್‌ ಆಗಿವೆ.
ಉಡುಪಿಯ ನೀಲಾವರ ಗೋಶಾಲೆ ಆವರಣದಲ್ಲಿರುವ ಹಲಸಿನ ಹಣ್ಣಿನ ಮರದಲ್ಲಿ ಭಾರೀ ಸಂಖ್ಯೆಯಲ್ಲಿ ಹಲಸಿನ ಹಣ್ಣುಗಳು ಬಿಟ್ಟಿವೆ. ಆದರೆ, ಮರ ಭಾರೀ ಎತ್ತರ ಇರುವುದರಿಂದ ಅವುಗಳನ್ನು ಕೊಯ್ದಿರಲಿಲ್ಲ.
ಮಳೆ ಜೋರಾದರೆ ಹಣ್ಣುಗಳು ಕೂಡಾ ಕೊಳೆಯಬಹುದು ಎಂದು ಮನಗಂಡ ಪೇಜಾವರ ಶ್ರೀಗಳು ಖಾವಿ ಪಂಚೆಯನ್ನ ಕಚ್ಚೆಯಂತೆ ಬಿಗಿದು ಕಟ್ಟಿಕೊಂಡು ಕೈಯ್ಯಲ್ಲಿ ಕತ್ತಿ ಹಿಡಿದು ಸರಸರನೆ ಮರ ಏರಿದರು. ಸುಮಾರು 30 ರಿಂದ 35 ಅಡಿ ಎತ್ತರದ ಮರ ಏರಿದ ಶ್ರೀಗಳು ಪಕ್ವ ಭರಿತ ಎಂಟತ್ತು ಹಲಸಿನ ಹಣ್ಣುಗಳನ್ನು ಕಿತ್ತು ನೆಲಕ್ಕೆ ಹಾಕಿದರು.. ಬಳಿಕ ಶಿಷ್ಯಂದಿರಿಗೆ, ಗೋಶಾಲೆ ಸಿಬ್ಬಂದಿಗೆ ತಿನ್ನಲು ಕೊಟ್ಟರು. ಜೊತೆಗೆ ಗೋಶಾಲೆಯಲ್ಲಿರುವ ಗೋವುಗಳಿಗೂ ತಿನ್ನಲು ಕೊಟ್ಟು ಅವುಗಳ ಸಂತಸದಲ್ಲಿ ಪಾಲ್ಗೊಂಡರು.ಶ್ರೀಗಳು ಮರವೇರಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

4.4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement