ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಪ್ರಭಾವಿ ಶಯಾನ್ ಅಲಿ: ಐಎಸ್‌ಐ ಚಿತ್ರಹಿಂಸೆ ನೀಡಿದಾಗ ಭಗವಾನ್ ಕೃಷ್ಣ ಕೈ ಹಿಡಿದ ಎಂದ ಪ್ರಭಾವಿ

ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಪ್ರಭಾವಿ ಶಯಾನ್ ಅಲಿ ಇತ್ತೀಚೆಗೆ ಜೀವನ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ, ಅವರು ತಾವು ಇಸ್ಲಾಮಿಕ್ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ನಿರಂತರ ಕಿರುಕುಳದಿಂದಾಗಿ ತಾವು ದೇಶದಿಂದ ಪಲಾಯನ ಮಾಡುವಂತಾಯಿತು ಎಂದು ಶಯಾನ್ ಹೇಳಿದ್ದಾರೆ. ಈ ಸವಾಲಿನ ಅವಧಿಯಲ್ಲಿ, ತನಗೆ ಶ್ರೀಕೃಷ್ಣನಿಂದ ಸಾಂತ್ವನ ಸಿಕ್ಕಿತು. ಆತ ತನ್ನ ಬದುಕಿಗೆ ಮಾರ್ಗದರ್ಶನ ನೀಡಿದ್ದಾನೆ ಎಂದು ಶಯಾನ್‌ ನಂಬುತ್ತಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಐಎಸ್‌ಐನಿಂದ ನಡೆಯುತ್ತಿರುವ ದಬ್ಬಾಳಿಕೆಯಿಂದಾಗಿ ಪಾಕಿಸ್ತಾನವನ್ನು ಶಾಶ್ವತವಾಗಿ ತೊರೆಯುವುದನ್ನು ಬಿಟ್ಟು ತನಗೆ ಬೇರೆ ಮಾರ್ಗವಿರಲಿಲ್ಲ ಎಂದು ಹೇಳಿರುವ ಶಯಾನ್ ಅಲಿ, ತನ್ನ ಜೀವನದ ವಿರುದ್ಧ ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ.

ಟ್ವಿಟರಿನಲ್ಲಿ ಶಯಾನ್ ಅಲಿ ತಮ್ಮ “ಘರ್ ವಾಪ್ಸಿ” ಅನ್ನು ಘೋಷಿಸಿದರು, ಇದು ತಾನು ತನ್ನ ಪೂರ್ವಜರ ಮೂಲ ಮನೆಗೆ ಮರಳುವುದನ್ನು ಸೂಚಿಸುತ್ತದೆ ಎಂದು ಅವರು ಬರೆದಿದ್ದಾರೆ,
ಅವರು 2019 ರಲ್ಲಿ ಪಾಕಿಸ್ತಾನಿ ಏಜೆನ್ಸಿಗಳ ಕೈಯಲ್ಲಿ ಅನುಭವಿಸಿದ ಸಂಕಷ್ಟದ ಅನುಭವಗಳನ್ನು ವಿವರಿಸಿದರು, ಇದು ದೇಶದಿಂದ ಬಲವಂತದ ಹೊರಹೋಗುವಿಕೆಗೆ ಕಾರಣವಾಯಿತು. ಶಯಾನ್ ತಾನು ಖಿನ್ನತೆಯ ಸ್ಥಿತಿಗೆ ಸಿಲುಕಿದೆ ಮತ್ತು ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದೆ, ಆಗ ಕೃಷ್ಣ ತನಗೆ ಭರವಸೆ ನೀಡಿದ ಹಾಗೂ ಮಾರ್ಗದರ್ಶನ ಮಾಡಿದ ಎಂದು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಶಯಾನ್ ಅಲಿ ಅವರು ತಮ್ಮ “ಘರ್ ವಾಪ್ಸಿ” ಯನ್ನು ಘೋಷಿಸುವಾಗ ಸನಾತನ ಧರ್ಮದ ಅನುಯಾಯಿಯಾದರೂ ತಾನು ಯಾವುದೇ ರೀತಿಯ ಧಾರ್ಮಿಕ ದ್ವೇಷವನ್ನು ಅನುಮೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಧರ್ಮಗಳ ನಂಬಿಕೆಗಳು ಮತ್ತು ಆಚರಣೆಗಳಿಗೆ ಅತ್ಯಂತ ಗೌರವವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ಶಯಾನ್ ಅಲಿ ಅವರು ಪಾಕಿಸ್ತಾನದಿಂದ ಪಲಾಯನ ಮಾಡಲು ಕಾರಣವಾದ ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆ (ISI) ಪ್ರಸ್ತಾಪಿಸಿದ ಕಾಶ್ಮೀರದ ಕುರಿತು PR ಸಂಗೀತ ವೀಡಿಯೊದಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ ಅವರು ಯಹೂದಿ ಏಜೆಂಟ್ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ (R&AW) ನ ಸದಸ್ಯ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement