ಮುಂಬೈ: ಯುವ ಕಾಂಗ್ರೆಸ್ ಸಮಾವೇಶದಲ್ಲಿ ಗಲಾಟೆ; ಕುರ್ಚಿಗಳನ್ನು ಎಸೆದರು | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್‌ನ ಪಕ್ಷದ ಕೇಂದ್ರ ಕಚೇರಿಯಾದ ಮುಂಬೈ ತಿಲಕ ಭವನದಲ್ಲಿ ಸಭೆ ನಡೆಯುತ್ತಿದ್ದ ವೇಳೆ ರಾಷ್ಟ್ರೀಯ ಯುವ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಾಟೋಳೆ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಅವರ ಸಮ್ಮುಖಲ್ಲೇ ಕೋಲಾಹಲದ ದೃಶ್ಯಗಳು ಕಂಡುಬಂದವು ಎಂದು ವರದಿಯಾಗಿದೆ.
ಮುಂಬೈನಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯು ಜಗಳ ಮತ್ತು ಘರ್ಷಣೆಯಲ್ಲಿ ಕೊನೆಗೊಂಡಿತು, ಕುರ್ಚಿಗಳನ್ನು ಎಸೆಯಲಾಯಿತು.
ಮಹಾರಾಷ್ಟ್ರ ಯುವ ಕಾಂಗ್ರೆಸ್ ಮುಖ್ಯಸ್ಥ ಕುನಾಲ್ ನಿತಿನ್ ರಾವತ್ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಎರಡು ಬಣಗಳ ನಡುವಿನ ವಿವಾದದಿಂದ ಘರ್ಷಣೆ ಉಂಟಾಗಿದೆ ಎಂದು ಹೇಳಲಾಗಿದೆ. ಪರಿಸ್ಥಿತಿ ಉಲ್ಬಣಗೊಂಡಿತು, ಪರಿಣಾಮವಾಗಿ ಎರಡೂ ಗುಂಪುಗಳು ಪರಸ್ಪರ ಕುರ್ಚಿಗಳನ್ನು ಎಸೆದರು. ಕೈ ಕೈ ಮಿಲಾಯಿಸಿದರು.
ಆರೋಪಿತ ಈ ಘಟನೆಯ  ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಗುಂಪು ರಾವುತ್ ವಿರುದ್ಧ ಘೋಷಣೆಗಳನ್ನು ಕೂಗಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರೆ ಮತ್ತೊಂದು ಗುಂಪು ಅಲ್ಲಿದ್ದ ಕುಚಿಗಳನ್ನು ತೂರಾಡಿತು. ಇದು ಪರಿಸ್ಥಿತಿ ಉಲ್ಬಣಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
https://twitter.com/i/status/1670059686232735744

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ಎರಡೂ ಘಟನೆಗಳು ಒಂದೇ ಸಮಯದಲ್ಲಿ ಸಂಭವಿಸಿದವು ಮತ್ತು ಇದು ಸಮ್ಮೇಳನದ ಸಮಯದಲ್ಲಿ ಕೆಲವು ಗೊಂದಲಗಳಿಗೆ ಕಾರಣವಾಯಿತು.
ದಾದರ್ ತಿಲಕ್ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಉದ್ದೇಶಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಬಿ.ವಿ.ಶ್ರೀನಿವಾಸ್ ಅವರು ಯಾವುದೇ ಹೇಳಿಕೆ ನೀಡದೆ ನಿರ್ಗಮಿಸಿದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement