ಮಲಗಿದ್ದ ಹಸುವಿನ ಮೇಲೆ ಹೊಂಚು ಹಾಕಿ ದಾಳಿ ಮಾಡಿದ ಹುಲಿ: ಹುಲಿಯನ್ನೇ ಹೆದರಿಸಿ ಓಡಿಸಿದ ದನಗಳ ಹಿಂಡು | ವೀಕ್ಷಿಸಿ

ವನ್ಯಜೀವಿಗಳು ಆಗಾಗ ಜನವಸತಿ ಪ್ರದೇಶಗಳಿಗೆ ಆಗಮಿಸುತ್ತವೆ ಹಾಗೂ ಅದರಲ್ಲಿಯೂ ಪರಭಕ್ಷಕಗಳು ಪ್ರಾಣಿಗಳು ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಕೆಲವೊಂದು ಬಾರಿ ಸಾಕು ಪ್ರಾಣಿಗಳು ಹುಲಿ, ಚಿರತೆಗೆ ಚಳ್ಳೆಹಣ್ಣು ತಿನ್ನಿಸುತ್ತವೆ. ಇದೇ ತರಹ ಘಟನೆಯ ವೀಡಿಯೊ ವೈರಲ್‌ ಆಗಿದೆ. ವೀಡಿಯೊದಲ್ಲಿ ಹಸುಗಳ ಹಿಂಡೊಂದು ಹುಲಿಯೊಂದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವುದು ಕಂಡುಬರುತ್ತದೆ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ಈ ಹಸುಗಳು ಅಕ್ಷರಶಃ ನಿಜವಾಗಿಸಿದೆ. ಹಸುಗಳ ಹಿಂಡು ಹುಲಿಯನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಈ ಘಟನೆ ಭೋಪಾಲ್​​ನ ಕೆರ್ವಾ ಎಂಬ ಪ್ರದೇಶದಲ್ಲಿ ನಡೆದಿದ್ದು ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಕೆರ್ವಾದಲ್ಲಿರುವ ಹಸುಗಳ ಫಾರಂ ಒಂದರಲ್ಲಿ ನಡೆದಿದೆ.

ವೀಡಿಯೋದಲ್ಲಿ ಮಲಗಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ಮಾಡುವುದು ಕಂಡುಬರುತ್ತದೆ. ಈ ಹಸು ಒಂದು ಕಡೆ ಹೋಗಿ ಮಲಗಿತ್ತು. ಹೊಂಚು ಹಾಕಿದ್ದ ಹುಲಿ ಅದರ ಮೇಲೆ ದಾಳಿ ಮಾಡಿ ಅದರ ಕುತ್ತಿಗೆ ಹಿಡಿದಿದೆ. ಇದನ್ನು ಕಂಡ ಸ್ವಲ್ಪ ದೂರದಲ್ಲಿದ್ದ ಇತರ ಹಸುಗಳು  ಆ ಹಸುವಿನ ರಕ್ಷಣೆಗೆ ಧಾವಿಸಿವೆ. ಎಲ್ಲ ಹಸುಗಳು ಒಮ್ಮೆಲೇ ಹುಲಿಯತ್ತ ನುಗ್ಗಿವೆ. ಇದನ್ನು ಕಂಡ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಸುಮಾರು ಮೂರು ತಾಸುಗಳ ಹುಲಿ ಒಂದು ಬದಿಗೆ ಮಲಗಿದ್ದ ಹಸುವನ್ನು ಹಿಡಿಯಲು ಹೊಂಚು ಹಾಕಿ ಕಿಳಿತದ್ದು ವ್ಯರ್ಥವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಫಾರಂ ಮಾಲೀಕ ಕಳೆದ ಆರು ತಿಂಗಳ ಅವಧಿಯಲ್ಲಿ ಐದು ಬಾರಿ ಹುಲಿ ಕಾಣಿಸಿಕೊಂಡಿದೆ. ಜಮೀನಿನ ಸುತ್ತ ಅಳವಡಿಸಿರುವ 14 ಅಡಿ ಉದ್ದದ ತಂತಿ ಬೇಲಿಯನ್ನು ಅದು ನಾಶ ಮಾಡಿದೆ. ಈ ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
76 ಎಕರೆ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿ ದಾಳಿಗೆ ತುತ್ತಾಗಿರುವ ಹಸುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement