ದೇಶದ ಪ್ರಧಾನಿ ಯಾರೆಂದು ಹೇಳಲು ಬಾರದ ವರನ ಕೈಬಿಟ್ಟು ಆತನ ಸಹೋದರನ ಕೈಹಿಡಿದ ನವವಿವಾಹಿತೆ…!

ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ವೇಳೆ ದೇಶದ ಪ್ರಧಾನಿ ಯಾರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ವಧು ತನ್ನ ಮದುವೆಯನ್ನು ಮುರುದಿಕೊಂಡ ಘಟನೆ ವರದಿಯಾಗಿದೆ..! ನಂತರ ವರನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ..!!
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸೈದಪುರ ಪೊಲೀಸ್ ಠಾಣೆಯಲ್ಲಿ ಕಳೆದ ಶನಿವಾರ ಈ ವಿಚಿತ್ರ ಘಟನೆ ನಡೆದಿದೆ.
ಸೈದಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಸಿರಪುರ ಗ್ರಾಮದ ರಾಂ ಅವತಾರ ಎಂಬುವವರ ಪುತ್ರ ಶಿವಶಂಕರ (27) ಹಾಗೂ ಕರಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇಡು ರಾಮ ಅವರ ಪುತ್ರಿ ರಂಜನಾ ಅವರೊಂದಿಗೆ 6 ತಿಂಗಳ ಹಿಂದೆ ನಿಶ್ಚಯವಾಗಿತ್ತು. ಅಂದಿನಿಂದ ಮೊಬೈಲ್ ಮೂಲಕ ಮಾತನಾಡುತ್ತಿದ್ದರು. ಹಾಗೂ ಜೂನ್‌ 11ರಂದು ವಿವಾಹವಾಗಿದೆ. ಜೂನ್ 12 ರಂದು ಮದುವೆಯ ನಂತರ, ವಧುವಿನ ಮನೆಯವರು ಆಯೋಜಿಸಿದ್ದ ಸಮಾರಂಭದಲ್ಲಿ, ಶಿವಶಂಕರ ಅವರಿಗೆ ತಮಾಷೆಯಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು.
ಆಟದ ಭಾಗವಾಗಿ ದೇಶದ ಪ್ರಧಾನಿಯ ಹೆಸರಿಡುವಂತೆ ಕೇಳಿದಳು. ಆದರೆ ಶಿವಶಂಕರ ಅವರಿಗೆ ಹೆಸರನ್ನು ಹೇಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ವಧುವಿನ ಸಂಬಂಧಿಕರು ಆತನನ್ನು ಅಪಹಾಸ್ಯ ಮಾಡಿದರು ಮತ್ತು ಆತನನ್ನು ಮಂದ ಬುದ್ಧಿಯವನೆಂದು ಪರಿಗಣಿಸಿದರು. ಇದನ್ನು ಅವಮಾನವಾಗಿ ಪರಿಗಣಿಸಿದ ವಧು ಶಿವಶಂಕರ ಜೊತೆಗಿನ ಮದುವೆ ರದ್ದುಪಡಿಸಿದಳು. ಸ್ಥಳದಲ್ಲೇ ಆತನ ಕಿರಿಯ ಸಹೋದರನನ್ನು ಮದುವೆಯಾದಳು. ಮಾವ ರಾಮ ಅವತಾರ್ ಅವರು ತನ್ನ ಸೊಸೆ ತನಗಿಂತ ಚಿಕ್ಕವನನ್ನು ಮದುವೆಯಾಗುವುದನ್ನು ವಿರೋಧಿಸಿದರು. ಹಾಗೂ ವಧುವಿನ ಮನೆಯವರು ಒತ್ತಾಯವಾಗಿ ಈ ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಧು ಮತ್ತು ಕಿರಿಯ ಮಗನ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement