ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ (ಜೂನ್ ೨೧) ಅಂತಾರಾಷ್ಟ್ರೀಯ ಯೋಗದಿನಾಚರಣೆ ವಿಶ್ವಸಂಸ್ಥೆ ಆವರಣದಲ್ಲಿ ನಡೆದಿದೆ. ಬೃಹತ್ ಕಾರ್ಯಕ್ರಮದಲ್ಲಿ ಮೋದಿ ಯೋಗಭ್ಯಾಸ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಈ ಯೋಗದಿನಾಚರಣೆಯಲ್ಲಿ 180 ರಾಷ್ಟ್ರದ ಜನರು ಪಾಲ್ಗೊಳ್ಳುವ ಮೂಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನೆಸ್ ದಾಖಲೆ ಪುಟ ಸೇರಿದೆ.
ವಿವಿಧ ದೇಶಗಳ ಜನರು ಒಂದೇ ಸಮಯದಲ್ಲಿ ಒಂದೇ ಕಡೆ ಒಟ್ಟಾಗಿ ಯೋಗ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪನೆಯಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರಿಸಿ, ಉಪ ಪ್ರಧಾನ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಮತ್ತು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್, 180 ರಾಷ್ಟ್ರದ ಪ್ರತಿನಿಧಿಗಳು, ನ್ಯೂಯಾರ್ಕ್ ಮೇಯರ್ ಸೇರಿದಂತೆ ಅಧಿಕಾರಿಗಳು, ವಿಶ್ವಸಂಸ್ಥೆ ಪ್ರತಿನಿಧಿಗಳು, ಅನಿವಾಸಿ ಭಾರತೀಯರು, ಇತರ ದೇಶಗಳ ಗಣ್ಯರು ಸೇರಿದಂತೆ ಹಲವು ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಒಂದೇ ವೇದಿಕೆಯಲ್ಲಿ, ಒಂದೇ ಸಮಯದಲ್ಲಿ ಗರಿಷ್ಠ ದೇಶದ ಜನರು ಒಟ್ಟಿಗೆ ಯೋಗಾಭ್ಯಾಸ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸ್ಥಾಪನೆಯಾಗಿದೆ.
ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಯೋಗಾಭ್ಯಾಸದ ಜೊತೆಗೆ ಓಂಕಾರವೂ ಮೊಳಗಿದೆ. ಯೋಗಾಭ್ಯಾಸಕ್ಕೂ ಮೊದಲು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಯೋಗ ಎಲ್ಲರಿಗೂ ಮುಕ್ತವಾಗಿದೆ. ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ ಹಾಗೂ ವಿಶೇಷವಾಗಿ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಯೋಗ ಬಂದಿದ್ದು ಭಾರತದಿಂದ.ಇದು ಬಹಳ ಹಳೆಯ ಸಂಪ್ರದಾಯವಾಗಿದೆ. ಯೋಗವು ಹಕ್ಕುಸ್ವಾಮ್ಯಗಳು, ಪೇಟೆಂಟ್‌ಗಳಿಂದ ಮುಕ್ತವಾಗಿದೆ, ರಾಯಧನ ಪಾವತಿಗಳಿಂದ ಮುಕ್ತವಾಗಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ