ವೀಡಿಯೊ…: ‘ಜನ ಗಣ ಮನ’ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕನ್‌ ಗಾಯಕಿ ಮೇರಿ ಮಿಲ್ಬೆನ್ | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅಮೆರಿಕ ಮತ್ತು ಭಾರತ ಸಂಬಂಧವನ್ನು ಗಟ್ಟಿಗೊಳಿಸುವ ಅನೇಕ ಒಪ್ಪಂದುಗಳು ನಡೆದಿವೆ. ಅಲ್ಲಿನ ಅನೇಕ ತಜ್ಙರ ಜತೆಗೆ, ಆರ್ಥಿಕ, ಭದ್ರತೆ ವಿಚಾರವಾಗಿ ಸಭೆ ಜತೆಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Milben) ಮೋದಿ ಜತೆಗೆ ನಡೆದುಕೊಂಡ ರೀತಿ ಭಾರತ ಕಲಿಸಿದ ಸಂಸ್ಕೃತಿ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ ಅಮೆರಿಕದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಭಾರತದ ರಾಷ್ಟ್ರಗೀತೆ (ಜನಗಣ ಮನ) ಹಾಡಿದ ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. 38 ವರ್ಷದ ಮೇರಿ ಮಿಲ್ಬೆನ್ ಅವರು ವಾಷಿಂಗ್ಟನ್ DCಯಲ್ಲಿನ ರೊನಾಲ್ಡ್ ರೇಗನ್ ಬಿಲ್ಡಿಂಗ್ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯುನಿಟಿ ಫೌಂಡೇಶನ್ (USICF) ಆಯೋಜಿಸಿದ ಆಹ್ವಾನ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಆಫ್ರಿಕನ್-ಅಮೆರಿಕನ್‌ ಹಾಲಿವುಡ್ ನಟಿ ಮತ್ತು ಗಾಯಕಿ, ಮೇರಿ ಮಿಲ್ಬೆನ್ ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಗೀತೆಗಳ ಗಾಯನದಿಂದ ಭಾರತದಲ್ಲಿಯೂ ಜನಪ್ರಿಯರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಹಾಡುವ ಮೊದಲು, ಮಿಸ್ ಮಿಲ್ಬೆನ್ ಅವರು ಪ್ರಧಾನಿ ಮೋದಿಯವರ ಬಗ್ಗೆ ಗೌರವದ ಮಾತಗಳನ್ನು ಆಡಿದ್ದರು.
ಅಮೆರಿಕದ ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ಹಾಡುಗಳನ್ನು ಸತತ ನಾಲ್ಕು ಅಮೆರಿಕ ಅಧ್ಯಕ್ಷರ ಮುಂದೆ ಹಾಡಿರುವ ನಾನು ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕದ ಗೌರವಾರ್ಥದ ಪ್ರದರ್ಶನಕ್ಕೆ ನನ್ನ ಕುಟುಂಬವನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯ ಹಾಡಿದ ನಂತರ ಅವರು ಪ್ರಧಾನಿ ಮೋದಿ ಪಾದಮುಟ್ಟಿ ನಮಸ್ಕರಿಸಿರುವುದು ಈಗ ವೈರಲ್‌ ಆಗಿದೆ.

ಪ್ರಮುಖ ಸುದ್ದಿ :-   ನೀಟ್ ಯುಜಿ 2024 ಮರು ಪರೀಕ್ಷೆ ಇಲ್ಲ: ಸುಪ್ರೀಂ ಕೋರ್ಟ್

ಅಮೆರಿಕನ್ ಮತ್ತು ಭಾರತದ ರಾಷ್ಟ್ರಗೀತೆಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಹೇಳುತ್ತವೆ ಮತ್ತು ಇದು ಅಮೆರಿಕ-ಭಾರತದ ಸಂಬಂಧದ ನಿಜವಾದ ಸಾರವಾಗಿದೆ. ಸ್ವತಂತ್ರ ರಾಷ್ಟ್ರವನ್ನು ಸ್ವತಂತ್ರ ಜನರಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ” ಎಂದು ಮೇರಿ ಮಿಲ್ಬೆನ್ ಹೇಳಿದರು.
ಪ್ರಧಾನಿ ಮೋದಿಯವರ ಪ್ರಬಲ ಆಧ್ಯಾತ್ಮಿಕ ಸೆಳವು ಮತ್ತು ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯಲ್ಲಿ ಬೇರೂರಿದೆ ಪ್ರಪಂಚದಾದ್ಯಂತ ಬಹಳವಾಗಿ ಗೌರವಿಸಲ್ಪಟ್ಟಿದೆ.

ಪ್ರಮುಖ ಸುದ್ದಿ :-   ಕೇಂದ್ರ ಬಜೆಟ್ 2024 | ಕೌಶಲ್ಯ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ ; 500 ಉನ್ನತ ಕಂಪನಿಗಳಲ್ಲಿ 1 ಕೋಟಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement