ರಷ್ಯಾದಲ್ಲಿ ಪುತಿನ್‌ ವಿರುದ್ಧ ವ್ಯಾಗ್ನರ್ ಗುಂಪಿನ ಸಶಸ್ತ್ರ ದಂಗೆ: ದಂಗೆ ಹತ್ತಿಕ್ಕಲು ಪುತಿನ್ ಪ್ರತಿಜ್ಞೆ

ಮಾಸ್ಕೋ: ರಷ್ಯಾದಲ್ಲಿ ಸಶಸ್ತ್ರ ದಂಗೆ ಎಂದು ಅಧಿಕಾರಿಗಳ ಹೇಳಿಕೆ ನೀಡಿರುವ ಮಧ್ಯೆಯೇ ದೇಶದ ಮಿಲಿಟರಿ ನಾಯಕತ್ವವನ್ನು ಪದಚ್ಯುತಗೊಳಿಸುವ ಪ್ರಯತ್ನದ ಭಾಗವಾಗಿ ರಷ್ಯಾದ ನಗರವಾದ ರೋಸ್ಟೊವ್-ಆನ್-ಡಾನ್ ಅನ್ನು ತಾನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇನೆ ಎಂದು ಬಂಡಾಯ ಎದ್ದಿರುವ ರಷ್ಯಾದ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಪ್ರಿಗೊಜಿನ್ ಶನಿವಾರ (ಜೂನ್‌ 24 ) ಹೇಳಿದ್ದಾರೆ.
ದಕ್ಷಿಣ ರಷ್ಯಾದ ನಗರವಾದ ರೋಸ್ಟೋವ್-ಆನ್-ಡಾನ್‌ನ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ವ್ಯಾಗ್ನರ್ ಗುಂಪು ನಿಯಂತ್ರಣ ಸಾಧಿಸಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇದನ್ನು “ಆಂತರಿಕ ದೇಶದ್ರೋಹ” ಎಂದು ಕರೆದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ದಂಗೆಕೋರರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಪ್ರತಿಜ್ಞೆ ಮಾಡಿದ್ದಾರೆ. ರೋಸ್ಟೋವ್‌ನಲ್ಲಿನ ಪರಿಸ್ಥಿತಿಯು “ಕಷ್ಟಕರ”ವಾಗಿದೆ ಎಂದು ರಷ್ಯಾ ಅಧ್ಯಕ್ಷರು ಒಪ್ಪಿಕೊಂಡರು.
“ಅತಿಯಾದ ಮಹತ್ವಾಕಾಂಕ್ಷೆಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ದೇಶದ್ರೋಹಕ್ಕೆ ಕಾರಣವಾಗಿವೆ” ಎಂದು ಪುತಿನ್ ಹೇಳಿದರು ಮತ್ತು ದಂಗೆಯನ್ನು “ಬೆನ್ನಿಗೆ ಚೂರಿ ಹಾಕುವುದು” ಎಂದು ಕರೆದಿದ್ದಾರೆ.
“ಇದು ರಷ್ಯಾಕ್ಕೆ, ನಮ್ಮ ಜನರಿಗೆ ಬೆನ್ನಿಗೆ ಚೂರಿ ಹಾಕುವುದಾಗಿದೆ. ಮತ್ತು ಅಂತಹ ಬೆದರಿಕೆಯ ವಿರುದ್ಧ ತಾಯ್ನಾಡು ರಕ್ಷಿಸಲು ನಮ್ಮ ಕ್ರಮಗಳು ಕಠಿಣವಾಗಿರುತ್ತದೆ” ಎಂದು ಪುತಿನ್‌ ಎಚ್ಚರಿಸಿದ್ದಾರೆ. ಮಾಸ್ಕೋ ಮೇಯರ್ ಅವರು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಘೋಷಿಸಿದರು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ತಿಂಗಳುಗಳ ಕಾಲ ರಕ್ಷಣಾ ಸಚಿವಾಲಯದೊಂದಿಗಿನ ಘರ್ಷಣೆಯ ನಂತರ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ಶನಿವಾರ ತನ್ನ ಪಡೆಗಳತ್ತ ಮಾಸ್ಕೋ ಆಡಳಿತ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಲು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು ಮತ್ತು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
ದೇಶದ ಮಿಲಿಟರಿ ನಾಯಕತ್ವವನ್ನು ಉರುಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದರು ಮತ್ತು ಅವರ ಪಡೆಗಳು ತಮ್ಮದೇ ರೀತಿಯಲ್ಲಿ “ಎಲ್ಲವನ್ನೂ ನಾಶಪಡಿಸುತ್ತವೆ” ಎಂದು ಹೇಳಿದರು. ಸುಮಾರು 25,000 ಸೈನಿಕರ ಬಲದೊಂದಿಗೆ, ವ್ಯಾಗ್ನರ್ ಗುಂಪು ರೋಸ್ಟೋವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ಹಿಡಿತ ಸಾಧಿಸಿದೆ ಮತ್ತು ಈಗ ಮಾಸ್ಕೋದತ್ತ ತೆರಳಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಉಕ್ರೇನ್‌ನಲ್ಲಿ ಆಕ್ರಮಣದ ಪ್ರಾರಂಭದಿಂದಲೂ ಅಧ್ಯಕ್ಷ ವ್ಲಾಡಿಮಿರ್ ಪುತಿನ್‌ಗೆ ಸವಾಲಾಗಿದ್ದು, ತನ್ನ ಪಡೆಗಳನ್ನು ಸೇರಲು ಮತ್ತು ಮಾಸ್ಕೋದ ಮಿಲಿಟರಿ ನಾಯಕತ್ವವನ್ನು ಶಿಕ್ಷಿಸಲು ಅವರು ರಷ್ಯನ್ನರನ್ನು ಕೇಳಿಕೊಂಡಿದ್ದಾರೆ.
ರಷ್ಯಾದ ಎಫ್‌ಎಸ್‌ಬಿ ಭದ್ರತಾ ಸರ್ವಿಸ್‌ ವ್ಯಾಗ್ನರ್ ಮುಖ್ಯಸ್ಥನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಮುಂದಾಗಿದೆ ಮತ್ತು ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿ ಪಡೆಗಳಿಗೆ ಅತನ ಆದೇಶಗಳನ್ನು ನಿರ್ಲಕ್ಷಿಸಿ ಆತನನ್ನು ಬಂಧಿಸುವಂತೆ ಕರೆ ನೀಡಿತು.
16 ತಿಂಗಳ ಹಿಂದೆ ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ನಂತರ ಪುತಿನ್ ಅವರ ಅಧಿಕಾರಕ್ಕೆ ದೊಡ್ಡ ಸವಾಲಾಗಿರುವ ಯೆವ್ಗೆನಿ ಪ್ರಿಗೊಜಿನ್ ಮತ್ತು ರಷ್ಯಾದ ರಕ್ಷಣಾ ವ್ಯವಸ್ಥೆಯ ನಡುವಿನ ದೀರ್ಘಾವಧಿಯ ದ್ವೇಷದಲ್ಲಿ ಈ ಮುಖಾಮುಖಿಯು ಅತ್ಯಂತ ನಾಟಕೀಯ ಉಲ್ಬಣ ಕಂಡಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement