ಹೊನ್ನಾವರ: ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆ ತಂದ ವೇಳೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಹಾರ ಮೂಲದ ದಿಲೀಪ ಎಂದು ಗುರುತಿಸಲಾಗಿದೆ. ಈತ ಹೊನ್ನಾವರದ ಮನೆಯೊಂದರಲ್ಲಿ ಬಂಗಾರ ತೊಳದುಕೊಡುತ್ತೇನೆಂದು ವಂಚನೆ ನಡೆಸಿದ್ದಾನೆಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶನಿವಾರ ಹೊನ್ನಾವರ ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ನೀರು ಕುಡಿಯುತ್ತೇನೆ ಎಂದು ಹೇಳಿದ ವ್ಯಕ್ತಿ ತನ್ನ ಬ್ಯಾಗಿನಲ್ಲಿ ತಂದಿದ್ದ ವಿಷ ಕುಡಿದು ಮೃತಪಟ್ಟಿದ್ದಾನೆ ಎಂದು ಸಿಪಿಐ ಮಂಜುನಾಥ ತಿಳಿಸಿದ್ದಾರೆ
ಪ್ರಕರಣ ಗಂಭೀರತೆ ಪಡೆದಿರುವ ಹಿನ್ನೆಲೆಯಲ್ಲಿ ಎಸ್.ಪಿ. ವಿಷ್ಣುವರ್ಧನ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ