ಕರ್ನಾಟಕ ಆಹಾರ & ನಾಗರಿಕ ಸರಬರಾಜು ನಿಗಮದಲ್ಲಿ 386 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರವು ತನ್ನ ಸಂಸ್ಥೆಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ (Karnataka Food and Civil Supplies Corporation Limited) ನೇರ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 386 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.
ಸಂಸ್ಥೆ-ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ
ಹುದ್ದೆ-ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್
ಒಟ್ಟು ಹುದ್ದೆ 386
ಹುದ್ದೆಗಳ ವಿವರ
ಸಹಾಯಕ ವ್ಯವಸ್ಥಾಪಕರು : 10
ಗುಣಮಟ್ಟ ನಿರೀಕ್ಷಕರು : 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು: 57
ಕಿರಿಯ ಸಹಾಯಕರು: 263
ಉದ್ಯೋಗದ ಸ್ಥಳ-ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 22, 2023
 ಮಾಸಿಕ ವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕರು : 43100-83900 ರೂ.
ಗುಣಮಟ್ಟ ನಿರೀಕ್ಷಕರು : 27650-52650 ರೂ.
ಹಿರಿಯ ಸಹಾಯಕರು (ಲೆಕ್ಕ): 27650-52650 ರೂ.
ಹಿರಿಯ ಸಹಾಯಕರು: 27650-52650 ರೂ.
ಕಿರಿಯ ಸಹಾಯಕರು: 21400-42000 ರೂ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ: ಯಡಿಯೂರಪ್ಪಗೆ ಕೋರ್ಟ್‌ ಹಾಜರಿಗೆ ವಿನಾಯಿತಿ ನೀಡಿದ ಹೈಕೋರ್ಟ್‌

ವಿದ್ಯಾರ್ಹತೆ:
ಸಹಾಯಕ ವ್ಯವಸ್ಥಾಪಕರು : ಎಂಬಿಎ / ಹೆಚ್‌ಆರ್‌ / ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ.
ಗುಣಮಟ್ಟ ನಿರೀಕ್ಷಕರು : ಕೃಷಿ ವಿಜ್ಞಾನ ಪದವಿಯನ್ನು ಸಹಕಾರ / ಕೃಷಿ ಮಾರುಕಟ್ಟೆ ವಿಶೇಷತೆಯೊಂದಿಗೆ ಪಡೆದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ
ಹಿರಿಯ ಸಹಾಯಕರು (ಲೆಕ್ಕ): ವಾಣಿಜ್ಯ ಪದವಿ ಅಥವಾ ತತ್ಸಮಾನ ಪದವಿ.
ಹಿರಿಯ ಸಹಾಯಕರು: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.
ಕಿರಿಯ ಸಹಾಯಕರು: ದ್ವಿತೀಯ ಪಿಯುಸಿ ಉತ್ತೀರ್ಣ
ವಯೋಮಿತಿ…: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ವಯಸ್ಸು 35 ವರ್ಷ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ಮೀರಿರಬಾರದು. ಹಾಗೂ ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂ., ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 750 ರೂ.
ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 250 ರೂ.ಗಳು
KFCSC ಅಧಿಸೂಚನೆ ಪರಿಶೀಲಿಸಲು ಇಲ್ಲಿKFCSC-new notification    ಕ್ಲಿಕ್‌ ಮಾಡಿ…
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ https://cetonline.karnataka.gov.in/kea/   ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜೂನ್ 23, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 22, 2023
ಆನ್​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 25, 2023
ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜುಲೈ 26, 2023

ಪ್ರಮುಖ ಸುದ್ದಿ :-   ಶಿರಸಿ: ಕಚೇರಿಗೆ ತೆರಳಿ ಬಿಜೆಪಿ ಸಂಸದ ಕಾಗೇರಿ ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement