ಪತ್ನಿಯ ಜೊತೆ ಅಕ್ರಮ ಸಂಬಂಧದ ಶಂಕೆ : ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಗಂಡ…!

ಚಿಕ್ಕಬಳ್ಳಾಪುರ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಭೀಭತ್ಸ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ ಎಂಬವರು ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ ಎಂಬಾತನ ಕತ್ತು ಸೀಳಿ ಅದರ ರಕ್ತ ಕುಡಿದಿದ್ದಾನೆ ಎಂದು ವರದಿ ಹೇಳಿದೆ. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಚಿಂತಾಮಣಿಯ ಗಾಂಧಿನಗರದ ವಿಜಯ ಎಂಬಾತ ಚೇಳೂರು ತಾಲ್ಲೂಕಿನ ಮಂಡಪಲ್ಲಿಯ ಮಾರೇಶ ಎಂಬವರ ಕತ್ತನ್ನು ಕೊಯ್ದು ರಕ್ತ ಕುಡಿದ್ದಾನೆ ಹಾಗೂ ಕೃತ್ಯವನ್ನು ವಿಜಯ್ ವೀಡಿಯೊ ಮಾಡಿಸಿದ್ದಾನೆ ಎಂದು ವರದಿಗಳು ತಿಳಿಸಿದೆ.

ವಿಜಯ ಮತ್ತು ಮಾರೇಶ ಎಂಬವರು ಸ್ನೇಹಿತರಾಗಿದ್ದು ಬಟ್ಟೆ ವ್ಯಾಪಾರ ಮಾಡುತಿದ್ದರು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ ಹಲ್ಲೆಗೊಳಗಾದ ವ್ಯಕ್ತಿ. ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್​ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಮಾರೇಶನನ್ನು ​​ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಚಾಕುವಿನಿಂದ ಕತ್ತು ಸೀಳಿ ರಕ್ತ ಕುಡಿದಿದ್ದಾನೆ ಎನ್ನಲಾಗಿದೆ. ಈ ಘಟನೆ ಜೂನ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆದ ನಂತರ ಪೊಲೀಸರ ಗಮನಕ್ಕೂ ಬಂದಿದ್ದು, ಆರೋಪಿ ವಿಜಯನನ್ನು ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಮಾರೇಶ್ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾನೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement