ಭಾರತದಲ್ಲಿ 3 ವರ್ಷಗಳಲ್ಲಿ 10,000 ಕೋಟಿ ರೂ. ಹೂಡಿಕೆ ಮಾಡಲಿರುವ ಲುಲು ಗ್ರೂಪ್ : 50,000 ಜನರಿಗೆ ಉದ್ಯೋಗ ಸೃಷ್ಟಿ ಗುರಿ

ಹೈದರಾಬಾದ್ : ಯುಎಇ ಮೂಲದ ಲುಲು ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಮತ್ತು ಯುಎಇ ಮೂಲದ ಸಂಘಟಿತ ಸಂಸ್ಥೆಯು ಈಗಾಗಲೇ ದೇಶದಲ್ಲಿ 20,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಲುಲು ಅಧ್ಯಕ್ಷ ಯೂಸುಫ್ ಅಲಿ ಹೇಳಿದ್ದಾರೆ. .
ಭಾರತದಲ್ಲಿ 50,000 ಜನರಿಗೆ ಉದ್ಯೋಗ ನೀಡುವುದು ತಮ್ಮ ಗ್ರೂಪ್‌ ಗುರಿಯಾಗಿದೆ. ಮತ್ತು ಇದುವರೆಗೆ ತಮ್ಮ ವಿವಿಧ ಉದ್ಯಮಗಳು 22,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ಹೇಳಿದರು.
ತೆಲಂಗಾಣ ಕೈಗಾರಿಕೆ ಸಚಿವ ಕೆ.ಟಿ. ರಾಮರಾವ್ ಅವರ ಸಮ್ಮುಖದಲ್ಲಿ ಯೂಸುಫ್ ಅಲಿ ಅವರು, ಲುಲು ಗ್ರೂಪ್ ಮುಂದಿನ ಐದು ವರ್ಷಗಳಲ್ಲಿ ತೆಲಂಗಾಣದಲ್ಲಿ ಡೆಸ್ಟಿನೇಶನ್ ಶಾಪಿಂಗ್ ಮಾಲ್‌ಗಳು ( 3,000 ಕೋಟಿ ರೂ.) ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ವಿವಿಧ ಯೋಜನೆಗಳಲ್ಲಿ ಸುಮಾರು 3,500 ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಿದೆ ಎಂದು ಹೇಳಿದರು.
“ನಾವು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಮತ್ತು ಆಹಾರ ಸಂಸ್ಕರಣಾ ಘಟಕಗಳು (ಭಾರತದಲ್ಲಿ) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 20,000 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಹೊಂದಿದ್ದೇವೆ. ಇದನ್ನು ಹೆಚ್ಚಿಸುತ್ತೇವೆ ಎಂದರು.

ಪ್ರಮುಖ ಸುದ್ದಿ :-   ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಮಾಸ್ಟರ್ ಮೈಂಡ್ ಆರೋಪಿ ʼರಾಕಿʼ ಬಂಧಿಸಿದ ಸಿಬಿಐ

“ನಾವು ಅಹಮದಾಬಾದ್‌ನಲ್ಲಿ ಶಾಪಿಂಗ್ ಮಾಲ್ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ಮತ್ತು ಚೆನ್ನೈನಲ್ಲಿ ಮತ್ತೊಂದು ಬರಲಿದೆ. ಆಹಾರ ಸಂಸ್ಕರಣಾ ಘಟಕವು ನೋಯ್ಡಾದಲ್ಲಿ ಮತ್ತು ಇನ್ನೊಂದು ತೆಲಂಗಾಣದಲ್ಲಿ ಬರಲಿದೆ. ಮುಂದಿನ ಮೂರು ವರ್ಷಗಳಲ್ಲಿ ಇದು 10,000 ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಎನ್‌ಆರ್‌ಐ ಹೂಡಿಕೆ ಕಾನೂನುಗಳನ್ನು ಉದಾರಗೊಳಿಸಿದ್ದಾರೆ ಎಂದು ಹೇಳಿದ ಅವರು, ಅನಿವಾಸಿ ಭಾರತೀಯರ ಎಲ್ಲಾ ಹೂಡಿಕೆಗಳನ್ನು ದೇಶೀಯ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ ಎಂದರು.
ಹೈದರಾಬಾದ್‌ನಲ್ಲಿ 300 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಿಸಲಾದ ಐದು ಲಕ್ಷ ಚದರ ಅಡಿ ಲುಲು ಮಾಲ್ ಆಗಸ್ಟ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಮತ್ತು ರಫ್ತು ಆಧಾರಿತ ಆಧುನಿಕ ಸಂಯೋಜಿತ ಮಾಂಸ ಸಂಸ್ಕರಣಾ ಘಟಕ ಮತ್ತು 2.2 ಮಿಲಿಯನ್ ಚದರ ವಿಸ್ತೀರ್ಣದ ಅತ್ಯಾಧುನಿಕ ಡೆಸ್ಟಿನೇಶನ್ ಮಾಲ್ ಅನ್ನು ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.
22 ರಾಷ್ಟ್ರಗಳಾದ್ಯಂತ 250 ಕ್ಕೂ ಹೆಚ್ಚು ಹೈಪರ್‌ಮಾರ್ಕೆಟ್‌ಗಳು ಮತ್ತು 24 ಶಾಪಿಂಗ್ ಮಾಲ್‌ಗಳೊಂದಿಗೆ, ಲುಲು ಗ್ರೂಪ್ ಭಾರತದಲ್ಲಿಯೂ ವೇಗವಾಗಿ ವಿಸ್ತರಿಸುತ್ತಿದೆ, ಅಹಮದಾಬಾದ್, ಚೆನ್ನೈ, ಶ್ರೀನಗರ, ಗ್ರೇಟರ್ ನೋಯ್ಡಾ ಮತ್ತು ವಾರಾಣಸಿಯಲ್ಲಿ ಆಹಾರ ಸಂಸ್ಕರಣೆ ಮತ್ತು ಚಿಲ್ಲರೆ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ.

ಪ್ರಮುಖ ಸುದ್ದಿ :-   ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿ ಏಮ್ಸ್ ಗೆ ದಾಖಲು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement