ನಿರಾತಂಕವಾಗಿ ನಡೆದು ಬಂದು ತನ್ನ ಹಸುವನ್ನು ಸಿಂಹಿಣಿಯ ಬಲವಾದ ಹಿಡಿತದಿಂದ ಪಾರು ಮಾಡಿದ ರೈತ | ವೀಕ್ಷಿಸಿ

ಗುಜರಾತ್‌ನಲ್ಲಿ ಸಿಂಹಿಣಿ ದಾಳಿಯಿಂದ  ಹೆದರದೆ ರೈತನೊಬ್ಬ ತನ್ನ ಹಸುವನ್ನು ರಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಗುಜರಾತಿನ ಜುನಾಗಢದ ಕೆಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಂಹಿಣಿಯು ಹಸುವಿನ ಮೇಲೆ ದಾಳಿ ಮಾಡಿದ ಘಟನೆ ಸೋಮನಾಥ ಜಿಲ್ಲೆಯ ಗಿರ್‌ ಪ್ರದೇಶದಲ್ಲಿ ನಡೆದಿದೆ ಎಂದು ಅವರ ಟ್ವೀಟ್‌ನಲ್ಲಿ ಹೇಳಲಾಗಿದೆ. ಹಸುವಿನ ದಾಳಿ ನಡೆಸಿದ ಸಿಂಹಿಣಿ ಅದನ್ನು ಬಲವಾಗಿ ಹಿಡಿದ ನಂತರ ಸಿಂಹಿಣಿ ಮತ್ತು ಹಸುವಿನ ಮಧ್ಯೆ ಹೋರಾಟ ಆರಂಭವಾಗಿದೆ. ಈ ವೇಳೆ ರೈತನು ತನ್ನ ಹಸುವಿನ ಬಳಿಗೆ ನಡೆದು ಸಿಂಹಿಣಿಯನ್ನು ಓಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ಕ್ಲಿಪ್‌ನಲ್ಲಿ ಕಾಣಬಹುದು. ಕ್ಲಿಪ್ ಅನ್ನು ಹಾದುಹೋಗುತ್ತಿದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ರೈತ ತನ್ನ ಹಸುವನ್ನು ಉಳಿಸುವಲ್ಲಿ ಮತ್ತು ಸಿಂಹಿಣಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾನೆ.

ವೀಡಿಯೊ ಪ್ರಾರಂಭವಾಗುತ್ತಿದ್ದಂತೆ, ಸಿಂಹ ಹಸುವಿನ ದಾಳಿ ಮಾಡಿರುವುದು ಕಂಡಬರುತ್ತದೆ. ಸಿಂಹಿಣಿಯ ದವಡೆಗಳು ಹಸುವಿನ ಕುತ್ತಿಗೆ ಹಿಡಿದೆ. ಹಸವು ಸಿಂಹಿಣಿಯನ್ನು ಎಳೆಯಲು ಪ್ರಯತ್ನಿಸುತ್ತಿದೆ. ಹಸುವು ಸಿಂಹಿಣಿಯನ್ನು ತುಳಿಯಲು ನೋಡುತ್ತಿರುವುದನ್ನು ಸಹ ಕಾಣಬಹುದು.
ಆದರೆ ಹಸುವು ಪ್ರಯತ್ನಿಸುತ್ತಿದ್ದರೂ ಸಿಂಹಿಣಿಯ ಬಲವಾದ ಹಿಡಿತದಿಂದ ಬಿಡಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಹೋರಾಟದ ಸಮಯದಲ್ಲಿ ಎರಡೂ ಪ್ರಾಣಿಗಳು ರಸ್ತೆಯ ಬದಿಗೆ ಚಲಿಸುತ್ತವೆ.

ಆದರೆ ರೈತ, ಹಸುವನ್ನು ಹಿಡಿದುಕೊಂಡಿದ್ದ ಸಿಂಹಿಣಿಯನ್ನು ಹೆದರಿಸುವ ಪ್ರಯತ್ನದಲ್ಲಿ ಕೈ ಎತ್ತಿ ಪ್ರಾಣಿಗಳ ಕಡೆಗೆ ನಡೆದುಕೊಂಡು ಬರುತ್ತಿರುವುದು ಕಂಡುಬರುತ್ತದೆ. ಬಾಯಲ್ಲಿ ಕೂಗಿ ಹೆದರಿಸಿದರೂ ಸಿಂಹ ಹೆದರದೇ ಇರುವುದನ್ನು ನೋಡಿದ ಆ ವ್ಯಕ್ತಿ ನಂತರ ರಸ್ತೆಯ ಬದಿಯಿಂದ ಕಲ್ಲೊಂದನ್ನು ಎತ್ತಿಕೊಂಡು ವೇಗವಾಗಿ ಹಸುವಿನ ಕಡೆಗೆ ಚಲಿಸುತ್ತಾನೆ.
ಅಷ್ಟೊತ್ತಿಗಾಗಲೇ ಹೋರಾಟದಲ್ಲಿದ್ದ ಎರಡೂ ಪ್ರಾಣಿಗಳು ಪರಸ್ಪರ ದೂಡುತ್ತ ರಸ್ತೆ ಬದಿಗೆ ಬಂದಿರುತ್ತವೆ. ರೈತ ಕಲ್ಲು ಹಿಡಿದು ಮುಂದಕ್ಕೆ ಬರುತ್ತಿದ್ದಂತೆಯೇ ಸಿಂಹಿಣಿ ಹಸುವಿನ ಮೇಲಿರುವ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತದೆ. ರೈತ ಅದರ ಸಮೀಪ ಹೋಗುತ್ತಿದ್ದಂತೆ, ಸಿಂಹಿಣಿ ಹಸುವನ್ನು ಬಿಟ್ಟು ಆ ಸ್ಥಳದಿಂದ ಓಡಿಹೋಗುತ್ತದೆ.

ಇಂದಿನ ಪ್ರಮುಖ ಸುದ್ದಿ :-   ಓಂಕಾರೇಶ್ವರದಲ್ಲಿ108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement