ಪ್ರಜ್ಞೆ ಇಲ್ಲದೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಜೀವ ಉಳಿಸಿದ ಪರಿಸರ ಕಾರ್ಯಕರ್ತ | ವೀಕ್ಷಿಸಿ

ಪರಿಸರ ಹೋರಾಟಗಾರನ ಸಹಾನುಭೂತಿ ಮತ್ತು ಧೈರ್ಯಶಾಲಿ ಕಾರ್ಯವು ನಾಗರಹಾವಿಗೆ ಮರುಜೀವ ನೀಡಿದೆ. ಸತ್ತಂತೆ ನಿತ್ರಾಣವಾಗಿ ಜೀವವಿಲ್ಲದಂತೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಮತ್ತೆ ನಾಹರಹಾವು ಮೊದಲಿನ ಚಟುಚಟಿಕೆಗೆ ಬರಳುವಂತೆ ಮಾಡಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚೋಪರೂರಿನಲ್ಲಿ ನಡೆದಿದೆ.
ಸೆರೆಹಿಡಿಯಲಾದ ವೀಡಿಯೊ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ. ವೀಡಿಯೊದಲ್ಲಿ, ಪರಿಸರ ಕಾರ್ಯಕರ್ತ ನಾಗರಹಾವಿಗೆ ಬಾಟಲಿಯಿಂದ ನೀರು ನೀಡುವ ಮೂಲಕ ಅದನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ನಟರಾಜನ್ ಎಂಬವರು ತಮ್ಮ ಮನೆಯ ಸಮೀಪ ನಿತ್ರಾಣಗೊಂಡು ಸತ್ತ ಸ್ಥಿತಿಯಲ್ಲಿದ್ದ ನಾಗರಹಾವನ್ನು ಕಂಡರು. ನಟರಾಜನ್ ಅವರು ತಕ್ಷಣವೇ ತನ್ನ ಸ್ನೇಹಿತ ಎಜುಮಲೈ ಅವರಿಗೆ ಈ ಮಾಹಿತಿ ನೀಡಿದರು, ಅವರು ಪರಿಸರ ಕಾರ್ಯಕರ್ತ ಚೆಲ್ಲಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು.

ಚೆಲ್ಲಾ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಹಾವನ್ನು ಪರಿಶೀಲಿಸಿದರು. ಆದರೆ ಹಾವು ಸತ್ತಿರಲಿಲ್ಲ. ಆದರೆ  ಅದು ತೀವ್ರ ನಿರ್ಜಲೀಕರಣದಿಂದ (ಡಿಹೈಡ್ರೇಶನ್‌) ಬಳಲುತ್ತಿದೆ ಎಂದು ತಿಳಿದುಕೊಂಡರು. ಪರಿಸರ ಕಾರ್ಯಕರ್ತ ನಾಗರಹಾವಿಗೆ ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕೊಡಲು ಪ್ರಾರಂಭಿಸಿದರು. ಅದು ತನಗೆ ಯಾವುದೇ ಅಪಾಯ ಮಾಡಬಾರದು ಎಂದು ಅದರ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಅದಕ್ಕೆ ಬಾಟಲಿ ನೀರುಣಿಸಲು ಆರಂಭಿಸಿದರು.
ಹಾವು ನೀರನ್ನು ಕುಡಿಯುತ್ತಲೇ ಇತ್ತು ಹಾಗೂ ಚೆಲ್ಲಾ ಅವರು ನೀರುಣಿಸುವುದನ್ನು ಮುಂದುವರೆಸಿದರು, ನಾಗರಹಾವು ನೀರು ಹೊಟ್ಟೆಯೊಳಗೆ ಹೋದ ನಂತರ ಕ್ರಮೇಣ ತನ್ನ ಶಕ್ತಿಯನ್ನು ಅದು ಮರಳಿ ಪಡೆಯಿತು.

ಪ್ರಮುಖ ಸುದ್ದಿ :-   ರೈತರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ : 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ; ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚು

ನಾಗರಹಾವು ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸಿದ ನಂತರ, ಚೆಲ್ಲಾ ಹಾವನ್ನು ಹಿಡಿಯಲು ಪ್ಲಾಸ್ಟಿಕ್ ಡಬ್ಬ ಬಳಸಿದರು, ನಾಗರಹಾವು ಆ ಪ್ಲಾಸ್ಟಿಕ್‌ ಡಬ್ಬದಲ್ಲಿ ಒಳಹೋಗುವಂತೆ ಮಾಡಿದರು. ನಂತರ ನಾಗರ ಹಾವನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಟ್ಟಿದ್ದಾರೆ.
ನಾಗರ ಹಾವು ವಿಷ ಸೇವಿಸಿದ ಇಲಿಯನ್ನು ನುಂಗಿರಬಹುದು ಎಂದು ಚೆಲ್ಲಾ ಅವರು ನಟರಾಜನ್ ಮತ್ತು ಎಜುಮಲೈ ಅವರಿಗೆ ತಿಳಿಸಿದರು. ವೊಸದ ಇಲಿ ನುಂಗಿದ್ದರ ಪರಿಣಾಮವಾಗಿ ಅದು ನಿರ್ಜಲೀಕರಣಗೊಂಡು “ಪ್ರಜ್ಞೆ” ತಪ್ಪಿದೆ ಎಂದು ಅವರು ಹೇಳಿದರು. ನಾಗರಹಾವಿನ ಜೀವ ಉಳಿಸುವ ಚೆಲ್ಲಾ ಅವರ ಪ್ರಯತ್ನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement