ದೆಹಲಿ ಮದ್ಯ ಹಗರಣ : ಮನೀಶ್ ಸಿಸೋಡಿಯಾ ಆಪ್ತನ ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಎಪಿ ನಾಯಕ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆಪ್ತ ಎಂದು ಪರಿಗಣಿಸಲಾದ ಉದ್ಯಮಿ ದಿನೇಶ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಬಂಧಿಸಿದೆ.
ಕಳೆದ ವರ್ಷ, ಸಿಟಿ ನ್ಯಾಯಾಲಯವು ಪ್ರಕರಣದಲ್ಲಿ ದಿನೇಶ ಅರೋರಾ ಅವರನ್ನು ಅನುಮೋದಕರನ್ನಾಗಿ ಮಾಡುವಂತೆ ಸಿಬಿಐ ಕೋರಿಕೆಯನ್ನು ಅನುಮತಿಸಿತ್ತು.
ಆದರೆ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಹಣಕಾಸು ತನಿಖಾ ಸಂಸ್ಥೆ ಇ.ಡಿ. ಅವರನ್ನು ಬಂಧಿಸಿದೆ.
ಈ ಹಿಂದೆ ಇ.ಡಿ. ಅವರನ್ನು ಹಲವು ಸಂದರ್ಭಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು ಆದರೆ ಗುರುವಾರ, ಅವರು ವಿಚಾರಣೆ ಎದುರಿಸಿದಾಗ, ಫ್ಯಾಕ್ಟ್‌ಗಳನ್ನು ವಿವರಿಸಲು ವಿಫಲರಾದರು, ನಂತರ ಅವರನ್ನು ಬಂಧಿಸಲಾಯಿತು. ಅರೋರಾ ಅವರನ್ನು ಶುಕ್ರವಾರ ಗೊತ್ತುಪಡಿಸಿದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಉದ್ಯಮಿ ದಿನೇಶ ಅರೋರಾ ಅವರು ಎಎಪಿಯ ಸಂವಹನ ಉಸ್ತುವಾರಿ ವಿಜಯ ನಾಯರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಅದರ ಆರೋಪಪಟ್ಟಿಯಲ್ಲಿ ಇ.ಡಿ. ಈ ಹಿಂದೆ ತಿಳಿಸಿತ್ತು. ಇಡಿ ಪ್ರಕಾರ, ಅರೋರಾ, ಅಬಕಾರಿ ನೀತಿಯ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement