ಹೆಂಡತಿಯನ್ನು ಕೊಲೆ ಮಾಡಿ ಅವಳ ಮೆದುಳು ತಿಂದ ಗಂಡ…!

ಪ್ಯೂಬ್ಲೊ: ಪತ್ನಿಯನ್ನು ಕೊಂದ ನಂತರ ಆಕೆಯ ಮೆದುಳನ್ನು ತಿಂದ ಆರೋಪದ ಮೇಲೆ ಅಲ್ವಾರೊ ಎಂಬ ವ್ಯಕ್ತಿಯೊಬ್ಬನನ್ನು ಮೆಕ್ಸಿಕೊದಲ್ಲಿ ಬಂಧಿಸಲಾಗಿದೆ.
ಜುಲೈ 2 ರಂದು 32 ವರ್ಷದ ಆತನನ್ನು ಪ್ಯೂಬ್ಲೋದಲ್ಲಿನ ಮನೆಯಿಂದ ಬಂಧಿಸಲಾಯಿತು ಎಂದು ದಿ ಮಿರರ್ ವರದಿ ಮಾಡಿದೆ.
ವೃತ್ತಿಯಲ್ಲಿ ಬಿಲ್ಡರ್ ಆಗಿರುವ ಅಲ್ವಾರೊ, ಜೂನ್ 29 ರಂದು ನಿಷೇಧಿತ ಮಾದಕ ವಸ್ತು ಸೇವಿಸಿದ ನಂತರ ತನ್ನ ಹೆಂಡತಿಯನ್ನು ಕೊಂದಿದ್ದಾನೆ. ಆರೋಪಿಯು ಪೊಲೀಸರಿಗೆ ಸಾಂತಾ ಮುರ್ಟೆ (ಅವರ್ ಲೇಡಿ ಆಫ್ ಹೋಲಿ ಡೆತ್) ಮತ್ತು ದೆವ್ವವು ಅಪರಾಧವನ್ನು ಮಾಡಲು ಆದೇಶಿಸಿದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಅಲ್ವಾರೊ ಒಂದು ವರ್ಷದ ಹಿಂದೆ ಮಾರಿಯಾ ಮೊಂಟ್ಸೆರಾಟ್, 38, ಅವರನ್ನು ವಿವಾಹವಾಗಿದ್ದ. ಅವಳಿಗೆ 12 ರಿಂದ 23 ವರ್ಷ ವಯಸ್ಸಿನ ಐದು ಹೆಣ್ಣು ಮಕ್ಕಳಿದ್ದಾರೆ. ಆರೋಪಿಯು ಅವಳ ದೇಹವನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ನಂತರ ತನ್ನ ಪತ್ನಿಯ ಮಿದುಳಿನ ಭಾಗವನ್ನು ತಿಂದು ಆಕೆಯ ಒಡೆದ ತಲೆಬುರುಡೆಯನ್ನು ಬೂದಿಪಾತ್ರೆಯಾಗಿ ಬಳಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಿರರ್ ವರದಿ ಹೇಳಿದೆ.
ಕೊಲೆಯಾದ ಎರಡು ದಿನಗಳ ನಂತರ, ಆರೋಪಿಯು ತನ್ನ ಮಲ ಮಗಳೊಬ್ಬಳಿಗೆ ತನ್ನ ಅಪರಾಧವನ್ನು ಒಪ್ಪಿಕೊಳ್ಳಲು ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ. “ಅವನು ತನ್ನ ಮಗಳಲ್ಲಿ ಒಬ್ಬಳಿಗೆ ಕರೆ ಮಾಡಿ, ಅವಳ ತಾಯಿ ದೇಹವನ್ನು ತೆಗೆದುಕೊಂಡು ಹೋಗಲು ಹೇಳಿದ್ದಾನೆ. ನಾನು ಈಗಾಗಲೇ ಅವಳನ್ನು ಕೊಂದು ಚೀಲಗಳಲ್ಲಿ ಹಾಕಿಟ್ಟದ್ದೇನೆ’ ಎಂದು ತಿಳಿಸಿದ್ದಾನೆ ಎಂದು ಮೃತಳ ತಾಯಿ ಮಾರಿಯಾ ಅಲಿಸಿಯಾ ಮೊಂಟಿಯೆಲ್ ಸೆರಾನ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆ ವ್ಯಕ್ತಿ ತನ್ನ ಮಗಳ ದೇಹವನ್ನು “ಮಚ್ಚು, ಉಳಿ ಮತ್ತು ಸುತ್ತಿಗೆ ಉಪಯೋಗಿಸಿ ಕತ್ತರಿಸಿದ್ದಾನೆ ಎಂದು ಮಾರಿಯಾ ಸೆರಾನ್ ತಿಳಿಸಿದ್ದಾರೆ. ಆತ ಕೊಕೇನ್ ಮತ್ತು ಎಲ್ಲ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದ, ಆತನಿಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ನಾನು ಭಾವಿಸುತ್ತೇನೆ ಎಂದು ಮಾರಿಯಾ ಸೆರಾನ್ ಹೇಳಿದ್ದಾರೆ.
ಆತ ಹೆಣ್ಣುಮಕ್ಕಳಿಗೆ ದೈಹಿಕವಾಗಿ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ. ಏತನ್ಮಧ್ಯೆ, ತನಿಖೆಯ ಸಮಯದಲ್ಲಿ ಪೊಲೀಸರಿಗೆ ಅವರ ಮನೆಯಲ್ಲಿ ಮಾಂತ್ರಿಕ ಬಲಿಪೀಠವೂ ಕಂಡುಬಂದಿದೆ.

ಇಂದಿನ ಪ್ರಮುಖ ಸುದ್ದಿ :-   ಕೆನಡಾದ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ: ಭಾರತ-ಕೆನಡಾ ಬಿಕ್ಕಟ್ಟಿನ ವೇಳೆ ಗ್ಲೋಬಲ್ ನ್ಯೂಸ್-ಇಪ್ಸೋಸ್ ಸಮೀಕ್ಷೆ ಡಾಟಾ ಬಿಡುಗಡೆ ; ಪೊಯ್ಲಿವ್ರೆಯತ್ತ ಒಲವು, ಹಿಂದೆ ಬಿದ್ದ ಪ್ರಧಾನಿ ಟ್ರುಡೊ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement