ಹೆಬ್ಬಾವುಗಳು ಹೆಚ್ಚಾಗಿ ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ, ಕಾಳಿಂಗ ಸರ್ಪ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ, ಆದರೆ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಹಾವು ಪರಸ್ಪರ ಕಾದಾಟ ನಡೆಸಿದರೆ..? ಹೆಬ್ಬಾವು ಮತ್ತು ಕಾಳಿಂಗ ಸರ್ಪದ ಕಾದಾಟ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಈ ಹೊಡೆದಾಟದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದಿನ ಈ ಘಟನೆಯ ಫೋಟೋವನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಾಂತ ನಂದಾ ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೆಬ್ಬಾವುಗಳು ಮತ್ತು ಕಾಳಿಂಗ ಸರ್ಪಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇವೆರಡೂ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಸೇರಿವೆ.
ಕಾಳಿಂಗ ಸರ್ಪ ತುಂಬಾ ವಿಷಕಾರಿಯಾಗಿದ್ದು, ಅದು ಯಾವುದೇ ಪ್ರಾಣಿಯನ್ನಾದರೂ ಕಚ್ಚಿದರೆ, ಅದು ಕ್ಷಣಗಳಲ್ಲಿ ಸಾಯುತ್ತದೆ. ಆದರೆ ಹೆಬ್ಬಾವುಗಳು ವಿಷಕಾರಿಯಲ್ಲ, ಆದರೆ ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿದರೆ ಉಸಿರುಕಟ್ಟಿ ಸಾಯುವುದು ಖಚಿತ ಎಂದು ಹೇಳಲಾಗುತ್ತದೆ. ಏಕೆಂದರೆ ಅದು ಇಡೀ ದೇಹವನ್ನು ಪುಡಿ ಮಾಡುವ ರೀತಿಯಲ್ಲಿ ಬಿಗಿಯುತ್ತವೆ. ಕೆಲವೊಮ್ಮೆ ಅದು ತನ್ನ ಬೇಟೆಯನ್ನು ನುಂಗುತ್ತದೆ. ಅಂತಹ ಎರಡು ಅಪಾಯಕಾರಿ ಹಾವುಗಳು ಪರಸ್ಪರ ಭೇಟಿಯಾದರೆ ಏನಾಗುತ್ತದೆ..?
ಈ ಫೋಟದಲ್ಲಿ ಹೆಬ್ಬಾವು ಮತ್ತು ಹಾವು ಪರಸ್ಪರರ ತೆಕ್ಕೆಯ ಮೂಲಕ ಬಿಗಿಯಾಗಿ ಹಿಡಿದುಕೊಂಡಿದೆ.
ಟ್ವೀಟ್‌ನ ಶೀರ್ಷಿಕೆಯ ಪ್ರಕಾರ, ಕಾಳಿಂಗ ಸರ್ಪ ಹೆಬ್ಬಾವನ್ನು ಕಚ್ಚಿದೆ. ಹೆಬ್ಬಾವು ಕಾಳಿಂಗ ಸರ್ಪವನ್ನು ಬಿಗಿಯಾಗಿ ಹಿಡಿದಿದೆ. ಬಿಗಿ ಹಿಡಿತವು ಉಸಿರುಗಟ್ಟಿಸಿ ಕಾಳಿಂಗ ಸರ್ಪವನ್ನು ಕೊಂದಿತು. ಹಾಗೂ ಕಾಳಿಂಗ ಸರ್ಪದ ವಿಷವು ಹೆಬ್ಬಾವನ್ನು ಸಾಯಿಸಿದೆ. ಎರಡು ಅಪಾಯಕಾರಿ ಹಾವುಗಳ ನಡುವಿನ ಕಾಳಗದಲ್ಲಿ ಎರಡೂ ಸತ್ತಿವೆ.
ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಕಾಳಿಂಗ ಅಷ್ಟು ಉದ್ದವಾಗಿರದ ಕಾರಣ ಇದು ಕಾಳಿಂಗ ಸರ್ಪ ಅಲ್ಲ, ಅನಕೊಂಡ ಎಂದು ಕೆಲವರು ಹೇಳಿದ್ದಾರೆ. ಕೆಲವರು ಇದನ್ನು ಏಷ್ಯನ್ ಕೋಬ್ರಾ ಎಂದು ಕರೆಯುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ