ವೀಡಿಯೊ…: ಕೆನಡಾದ ಭಾರತದ ಕಾನ್ಸುಲೇಟ್‌ ಹೊರಗೆ ತ್ರಿವರ್ಣ ಧ್ವಜ ಹಿಡಿದು ಖಲಿಸ್ತಾನಿ ಪ್ರತಿಭಟನಾಕಾರರನ್ನು ಎದುರಿಸಿದ ಭಾರತೀಯ ಸಮುದಾಯ | ವೀಕ್ಷಿಸಿ

ಟೊರೊಂಟೊ: ತ್ರಿವರ್ಣ ಧ್ವಜ ಹಿಡಿದಿರುವ ಭಾರತೀಯ ಸಮುದಾಯದ ಸದಸ್ಯರು ಶನಿವಾರ (ಸ್ಥಳೀಯ ಕಾಲಮಾನ) ಭಾರತೀಯ ಕಾನ್ಸುಲೇಟ್ ಹೊರಗೆ ಜಮಾಯಿಸಿದರು ಮತ್ತು ಟೊರೊಂಟೊದಲ್ಲಿ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಒಗ್ಗಟ್ಟಿನಿಂದ ಎದುರಿಸಿದರು.
ಭಾರತೀಯ ವಲಸಿಗರು “ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ”, “ಲಾಂಗ್ ಲಿವ್ ಇಂಡಿಯಾ” ಮತ್ತು “ಖಲಿಸ್ತಾನ್ ಮುರ್ದಾಬಾದ್” ಎಂಬ ಘೋಷಣೆಗಳನ್ನು ಕೂಗಿದರು. ಮತ್ತು “ಖಾಲಿಸ್ತಾನಿಗಳು ಸಿಖ್ಖರಲ್ಲ ” ಮತ್ತು “ಕೆನಡಾ ಖಲಿಸ್ತಾನಿಗಳನ್ನು ಬೆಂಬಲಿಸುವುದನ್ನು ನಿಲ್ಲಿಸಲಿ” ಎಂದು ಬರೆದ ಫಲಕಗಳನ್ನು ಹಿಡಿದುಕೊಂಡು ಪ್ರದರ್ಶನ ನಡೆಸಿದರು. ವೀಡಿಯೊದಲ್ಲಿ ಖಲಿಸ್ತಾನಿ ಪರ ಪ್ರತಿಭಟನಾಕಾರರು ತ್ರಿವರ್ಣ ಧ್ವಜವನ್ನು ಅಗೌರವಗೊಳಿಸುವುದನ್ನೂ ಕಾಣಬಹುದು.
ಕೆನಡಾದಲ್ಲಿರುವ ಭಾರತೀಯ ವಲಸೆಗಾರರಲ್ಲಿ ಒಬ್ಬರಾದ ಸುನಿಲ ಅರೋರಾ ಅವರು, “ನಾವು ಖಲಿಸ್ತಾನಿಗಳನ್ನು ಎದುರಿಸಲು ಇಲ್ಲಿ ಕಾನ್ಸುಲೇಟ್ ಮುಂದೆ ನಿಂತಿದ್ದೇವೆ. ನಾವು ಖಲಿಸ್ತಾನಿಗಳ ಅಸಂಬದ್ಧತೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಭಾರತ ಮತ್ತು ಕೆನಡಾದ ಒಗ್ಗಟ್ಟಿಗಾಗಿ ಇಲ್ಲಿದ್ದೇವೆ. ಅವರು ನಮ್ಮ ರಾಜತಾಂತ್ರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ನಾವು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಭಾರತೀಯ ಒಕ್ಕೂಟದ ಇನ್ನೊಬ್ಬ ಸದಸ್ಯ, ಅನಿಲ ಶಿರಿಂಗಿ ಅವರು, ಭಾರತೀಯ ದೂತಾವಾಸವನ್ನು ಬೆಂಬಲಿಸಲು ಸೇರಿದ್ದೇವೆ ಮತ್ತು ಭಾರತೀಯ ರಾಜತಾಂತ್ರಿಕರಿಗೆ ಖಲಿಸ್ತಾನಿಗಳು ನೀಡಿರುವ ಬೆದರಿಕೆಯ ವಿರುದ್ಧ ಸೆಟೆದು ನಿಂತಿದ್ದೇವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಕಾನ್ಸುಲೇಟ್ ಹೊರಗೆ ಪ್ರತಿಭಟನೆಯಲ್ಲಿ ನಿಂತಿದ್ದ ಭಾರತೀಯ ಸಮುದಾಯದ ಇನ್ನೊಬ್ಬ ಸದಸ್ಯ ವಿದ್ಯಾಭೂಷಣ ಧರ್ ಅವರು, “ಕೆನಡಾ ಶಾಂತಿಯುತ ದೇಶವಾಗಿದೆ ಮತ್ತು ನಾವು ಶಾಂತಿಯುತವಾಗಿರಲು ಬಯಸುತ್ತೇವೆ. ಮೂಲಭೂತವಾಗಿ, ಈ ರೀತಿ ಭಾರತದ ರಾಜತಾಂತರಿಕರಿಗೆ ಬೆದರಿಕೆ ಒಡ್ಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಎಂದು ಕೆನಡಾ ಸರ್ಕಾರಕ್ಕೆ ಹೇಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಖಂಡಿತವಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಎಂದರು.
ಕಳೆದ ತಿಂಗಳು ಕೆನಡಾದಲ್ಲಿ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾದ ನಂತರ ಶನಿವಾರ ಬ್ರಿಟನ್, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತೀಯ ಮಿಷನ್‌ಗಳ ಹೊರಗೆ ರ್ಯಾಲಿಗಳನ್ನು ನಡೆಸುವುದಾಗಿ ಖಲಿಸ್ತಾನಿ ಪರ ಬೆಂಬಲಿಗರು ಘೋಷಿಸಿದ್ದರು.ಇದರ ನಂತರ ಕೆನಡಾ ಮತ್ತು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿಗಳು ಮತ್ತು ಟೊರೊಂಟೊದಲ್ಲಿನ ಕಾನ್ಸುಲೇಟ್ ಜನರಲ್‌ಗೆ ಬೆದರಿಕೆ ಹಾಕುವ ಪೋಸ್ಟರ್‌ಗಳು ಕಾಣಿಸಿಕೊಂಡವು.

ಕಳೆದೆರಡು ತಿಂಗಳುಗಳಲ್ಲಿ, ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಒಳಗೊಂಡ ಮೂರು ಪ್ರಮುಖ ಭಾರತ ವಿರೋಧಿ ಘಟನೆಗಳು ವರದಿಯಾಗಿವೆ. ಮೂಲಗಳ ಪ್ರಕಾರ, ಜುಲೈ 8 ರಂದು ನಡೆಯಲಿರುವ ಖಲಿಸ್ತಾನ್ ಪರ ರ್ಯಾಲಿಯ ಮಾಹಿತಿ ದೊರೆತ ನಂತರ ಕೆನಡಾದಲ್ಲಿ ಪ್ರದರ್ಶಿಸುತ್ತಿರುವ ಪೋಸ್ಟರ್‌ಗಳಲ್ಲಿ ತನ್ನ ರಾಜತಾಂತ್ರಿಕರಿಗೆ ಹಾಕಿದ ಬೆದರಿಕೆಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಪೋಸ್ಟರ್‌ಗಳಲ್ಲಿ ಕೆನಡಾದ ಟೊರೊಂಟೋದಲ್ಲಿನ ಭಾರತೀಯ ರಾಯಭಾರಿ ಮತ್ತು ಕಾನ್ಸುಲೇಟ್ ಜನರಲ್‌ಗೆ ಬೆದರಿಕೆ ಇದೆ.
ಸಿಖ್ ಉಗ್ರಗಾಮಿಗಳು ಪ್ರದರ್ಶನ ಮಾಡಿರುವ ಪೋಸ್ಟರ್‌ಗಳಲ್ಲಿ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಸಂಜಯಕುಮಾರ ವರ್ಮಾ ಮತ್ತು ಟೊರೊಂಟೊದ ಭಾರತದ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಅವರು ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ನಿಜ್ಜರ್ ಹತ್ಯೆಯಲ್ಲಿ ಪಾತ್ರವನ್ನು ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement