8 ವರ್ಷದಲ್ಲಿ 7 ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ : ಪ್ರತಿ ಬಾರಿಯೂ ತಾನೇ ಜಾಮೀನು ನೀಡಿ ಬಿಡಿಸಿಕೊಂಡಳು..!

ಅಹಮದಾಬಾದ್‌ : ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕಾಗಿ ಎಂಟು ವರ್ಷಗಳಲ್ಲಿ ಏಳು ಬಾರಿ ಮಹಿಳೆಯೊಬ್ಬರು ಪತಿಯನ್ನು ಬಂಧಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಗೂ ವಿಶೇಷವೆಂದರೆ ಪ್ರತಿ ಸಲ ತನ್ನ ಪತಿ ಬಂಧಿತನಾದಾಗ ಅವಳೇ ಗ್ಯಾರಂಟಿ ನೀಡಿ ತನ್ನ ಪತಿಯ ಬಿಡುಗಡೆಗೆ ವ್ಯವಸ್ಥೆ ಮಾಡುತ್ತಿದ್ದಳು ಎಂದು ವರದಿಯಾಗಿದೆ.
ಮೆಹ್ಸಾನಾದಲ್ಲಿ ಮಹಿಳೆ ಕೌಟುಂಬಿಕ ಕಲಹಕ್ಕಾಗಿ ಕಳೆದ 10 ವರ್ಷಗಳಲ್ಲಿ ದೂರು ನೀಡಿ ತನ್ನ ಪತಿಯನ್ನು ಏಳು ಬಾರಿ ಬಂಧಿಸಲು ಕಾರಣವಾಗಿದ್ದಾಳೆ. ಕುತೂಹಲದ ಸಂಗತಿಯೆಂದರೆ ಪ್ರತಿಸಲ ಆತ ಬಂಧಿಸಲ್ಪಟ್ಟಾಗಲೂ ಕೆಲವು ತಿಂಗಳುಗಳ ನಂತರ, ಅವಳೇ ಗ್ಯಾರಂಟಿಯಾಗಿ ನಿಂತು ತನ್ನ ಪತಿಗೆ ಜಾಮೀನು ಕೊಡಿಸಿದ್ದಾಳೆ…!
ಪ್ರೇಮಚಂದ ಮಾಲಿ ಎಂಬಾತ ಪಟಾನಿನ ಸೋನು ಮಾಲಿ ಜೊತೆ ವಿವಾಹವಾದರು. ದಂಪತಿ 2001ರಲ್ಲಿ ಮೆಹ್ಸಾನಾದಿಂದ ವಲಸೆ ಬಂದು ಕಾಡಿಯಲ್ಲಿ ನೆಲೆಸಿದರು. ಆರಂಭದಲ್ಲಿ ಜೀವನವು ಯಾವುದೇ ತೊಂದರೆಯಿಲ್ಲದೆ ಸಾಗಿದರೂ, 2014 ರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಪ್ರಾರಂಭವಾದವು. ಸೋನು 2015 ರಲ್ಲಿ ಪ್ರೇಮಚಂದ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದಳು ಮತ್ತು ನ್ಯಾಯಾಲಯವು ಆಕೆಗೆ ತಿಂಗಳಿಗೆ 2,000 ರೂ ಜೀವನಾಂಶವನ್ನು ನೀಡುವಂತೆ ಪತಿಗೆ ಆದೇಶಿಸಿತು.
ದಿನಗೂಲಿಯಾಗಿದ್ದ ಪ್ರೇಮಚಂದ 2015 ರಲ್ಲಿ ಜೀವನಾಂಶ ನೀಡಲು ಹೆಣಗಾಡಿದ್ದಾನೆ ಹಾಗೂ ಅಂತಿಮವಾಗಿ ಸರಿಯಾಗಿ ಪಾವತಿಸಲು ಆತನಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಯಿತು. ನಂತರ ಬಂಧಿಸಲಾಯಿತು ಮತ್ತು ಐದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ನಂತರ ಪತ್ನಿ ಸೋನುವೇ ಜಾಮೀನುದಾರಳಾಗಿ ಮುಂದೆ ಬಂದು ಜಾಮೀನು ನೀಡಿದರು. ಕಾನೂನುಬದ್ಧವಾಗಿ ಬೇರ್ಪಟ್ಟಿದ್ದರೂ, ದಂಪತಿ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಆಗಾಗ್ಗೆ ಜಗಳವಾಡುತ್ತಿದ್ದರು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ದಾಖಲೆಗಳ ಪ್ರಕಾರ, 2016 ರಿಂದ 2018 ರವರೆಗೆ ಪ್ರತಿ ವರ್ಷವೂ ಸೋನು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರೇಮಚಂದನನ್ನು ಬಂಧಿಸಲಾಯಿತು. ಮತ್ತು ಪ್ರತಿ ಬಾರಿಯೂ ಅವಳೇ ಮಧ್ಯಪ್ರವೇಶಿಸಿ ಆತನಿಗೆ ಜಾಮೀನು ನೀಡಲು ವ್ಯವಸ್ಥೆ ಮಾಡುತ್ತಿದ್ದಳು.
2019 ಮತ್ತು 2020ರಲ್ಲೂ, ಪ್ರೇಮಚಂದ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಜೀವನಾಂಶವನ್ನು ಪಾವತಿಸಲು ವಿಫಲವಾದ ಕಾರಣ ಸೆರೆವಾಸದ ಎರಡು ಘಟನೆಗಳಿಗೆ ಕಾರಣವಾಯಿತು. ಮತ್ತೊಮ್ಮೆ, ಸೋನು ಆತನ ರಕ್ಷಕನ ಪಾತ್ರವನ್ನು ನಿರ್ವಹಿಸಿದಳು ಹಾಗೂ ಗ್ಯಾರಂಟಿ ನೀಡಿ ಆತನಿಗೆ ಜಾಮೀನು ಕೊಡಿಸಿದ್ದಾಳೆ.
2023 ರ ಆರಂಭದಲ್ಲಿ ವಿಷಯ ಇನ್ನಷ್ಟು ವಿಕೋಪಕ್ಕೆ ಹೋಯಿತು. ಜೀವನಾಂಶವನ್ನು ಪಾವತಿಸುವಲ್ಲಿ ಪ್ರೇಮಚಂದನ ಪುನರಾವರ್ತಿತ ನಿರ್ಲಕ್ಷ್ಯವು ಆತನನ್ನು ಮತ್ತೊಮ್ಮೆ ಕಂಬಿ ಹಿಂದೆ ಹೋಗುವಂತೆ ಮಾಡಿತು. ಸೋನು

ಮತ್ತೊಮ್ಮೆ ಜುಲೈ 4 ರಂದು ಆತನಿಗೆ ತಾನೇ ಬಿಡುಗಡೆ ಮಾಡಿಸಿದಳು ಹಾಗೂ ಆತ ಕಾಡಿಗೆ ತೆರಳಿದ.
ಆದಾಗ್ಯೂ, ಅವರು ಒಟ್ಟಿಗೆ ಇದ್ದಿದ್ದು ಅಲ್ಪಕಾಲಿಕವಾಗಿತ್ತು. ಜುಲೈ 5 ರಂದು, ಪ್ರೇಮಚಂದನ ವ್ಯಾಲೆಟ್ ಮತ್ತು ಸೆಲ್ ಫೋನ್ ಕಾಣೆಯಾಯಾಯಿತು. ಈ ಬಗ್ಗೆ 43 ವರ್ಷದ ಮಹಿಳೆ ಸೋನುವನ್ನು ಪ್ರಶ್ನಿಸಿದ, ಅವಳು ಅವುಗಳು ಎಲ್ಲಿವೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ ನಂತರ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ದಂಪತಿಯ 20 ವರ್ಷದ ಮಗ ಕೂಡ ಸೇರಿಕೊಂಡು ಪ್ರೇಮಚಂದ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾನೆ.
ಘಟನೆಯಿಂದ ಮನನೊಂದ ಪ್ರೇಮಚಂದ ತನ್ನ ಮನೆಯನ್ನು ತೊರೆದು ಪಟಾನ್‌ನಲ್ಲಿ ತನ್ನ ತಾಯಿಯೊಂದಿಗೆ ವಾಸಿಸಲು ಹೋದ. ನಂತರ ಪತ್ನಿ ಸೋನು ಹಾಗೂ ಮಗ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾನೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement