ಮಸಾಲಾ ದೋಸೆಯೊಂದಿಗೆ ಸಾಂಬಾರ್ ಕೊಡಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ : ರೆಸ್ಟೊರೆಂಟಿಗೆ ಶಾಕ್‌ ಕೊಟ್ಟ ತೀರ್ಪು

ಸಾಂಬಾರ್ ಮತ್ತು ಚಟ್ನಿಯನ್ನು ದೋಸೆ ನೀಡುವುದು ಒಂದು ರೀತಿಯ ರೂಢಿಯಾಗಿದೆ. ಆದರೆ ಬಿಹಾರದ ಬಕ್ಸಾರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 140 ರೂ. ಬೆಲೆಯ ಸ್ಪೆಷಲ್ ಮಸಾಲಾ ದೋಸೆಯೊಂದಿಗೆ ಸಾಂಬಾರ್ ನೀಡುವ ಬದಲು ಸೂಪ್‌ ಕೊಟ್ಟ ತಪ್ಪಿಗೆ ರೆಸ್ಟೊರೆಂಟ್ ಈಗ 3,500 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿದೆ…!
ಗ್ರಾಹಕರು ರೆಸ್ಟೋರೆಂಟ್‌ ಅನ್ನು ನ್ಯಾಯಾಲಯಕ್ಕೆ ಎಳೆದ ನಂತರ ರೆಸ್ಟೋರೆಂಟ್‌ಗೆ 3,500 ರೂ. ದಂಡ ವಿಧಿಸಲಾಗಿದೆ. ಅರ್ಜಿದಾರರಿಗೆ ಸಾಂಬಾರ್ ನಿರಾಕರಣೆಯಿಂದ ಉಂಟಾದ “ಮಾನಸಿಕ, ದೈಹಿಕ ಮತ್ತು ಆರ್ಥಿಕ” ನೋವನ್ನು ಗ್ರಾಹಕ ನ್ಯಾಯಾಲಯವು ಗಮನಿಸಿದೆ. ಹೀಗಾಗಿ ದಂಡ ವಿಧಿಸಿರುವುದಾಗಿ ಹೇಳಿದೆ. ದಂಡ ಪಾವತಿಸಲು ರೆಸ್ಟೋರೆಂಟಿಗೆ 45 ದಿನಗಳ ಕಾಲಾವಕಾಶ ನೀಡಿದೆ. ರೆಸ್ಟೋರೆಂಟ್ ಆ ಸಮಯದಲ್ಲಿ ಗ್ರಾಹಕರಿಗೆ ದಂಡ ಪಾವತಿಸಲು ವಿಫಲವಾದರೆ, ದಂಡದ ಮೊತ್ತದ ಮೇಲೆ 8 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಘಟನೆಯು ಆಗಸ್ಟ್ 15, 2022 ರಂದು ನಡೆದಿದೆ. ವಕೀಲ ಮನೀಶ್ ಗುಪ್ತಾ ಅವರು ತಮ್ಮ ಜನ್ಮದಿನದಂದು ಮಸಾಲಾ ದೋಸೆಯನ್ನು ಸವಿಯಲು ನಿರ್ಧರಿಸಿ ಬಕ್ಸಾರ್‌ನ ನಮಕ್ ರೆಸ್ಟೋರೆಂಟ್ ಹೋಗಿದ್ದರು. 140 ರೂಪಾಯಿ ಮೌಲ್ಯದ ವಿಶೇಷ ಮಸಾಲೆ ದೋಸೆಗೆ ಆರ್ಡರ್‌ ಮಾಡಿ ಪ್ಯಾಕ್‌ ಮಾಡಿಸಿಕೊಂಡು ಬಂದರು.

ಪ್ರಮುಖ ಸುದ್ದಿ :-   1950-2015ರ ಅವಧಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 7.8% ಕುಸಿತ ; ಅಲ್ಪಸಂಖ್ಯಾತರ ಶೇಕಡಾವಾರು ಹೆಚ್ಚಳ : ಪಿಎಂ-ಇಎಸಿ ಅಧ್ಯಯನ

ಆದರೆ, ಸಾಮಾನ್ಯವಾಗಿ ದೋಸೆಯೊಂದಿಗೆ ನೀಡುವ ಸಾಂಬಾರ್ ಅದರಲ್ಲಿ ಇರಲಿಲ್ಲ. ಹೀಗಾಗಿ ಅಸಮಾಧಾನಗೊಂಡ ಅವರು ಸಾಂಬಾರ್ ಇಲ್ಲದ ಬಗ್ಗೆ ವಿಚಾರಿಸಲು ಮತ್ತೆ ರೆಸ್ಟೋರೆಂಟಿಗೆ ಹೋದರು.
ರೆಸ್ಟೋರೆಂಟ್ ಮಾಲೀಕರು ಅವರ ಪ್ರಶ್ನೆಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಮತ್ತು “140 ರೂ.ಗಳಿಗೆ ನೀವು ಸಂಪೂರ್ಣ ರೆಸ್ಟೋರೆಂಟ್ ಅನ್ನು ಖರೀದಿಸಲು ಬಯಸುವಿರಾ ಎಂದೆಲ್ಲ ಉದ್ಧಟತನದ ಮಾತಾಡಿದ್ದಾನೆ.
ಇದರಿಂದ ಕೋಪಗೊಂಡ ಮನೀಶ್ ಅವರು ರೆಸ್ಟೋರೆಂಟಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಅದಕ್ಕೂ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದರು.

11 ತಿಂಗಳ ನಂತರ, ಗ್ರಾಹಕ ಆಯೋಗದ ಅಧ್ಯಕ್ಷ ವೇದ ಪ್ರಕಾಶ ಸಿಂಗ್ ಮತ್ತು ಸದಸ್ಯ ವರುಣಕುಮಾರ ಅವರ ವಿಭಾಗೀಯ ಪೀಠವು ರೆಸ್ಟೋರೆಂಟ್ ಅನ್ನು ತಪ್ಪಿತಸ್ಥರೆಂದು ಪರಿಗಣಿಸಿ 3,500 ರೂ.ಗಳ ದಂಡವನ್ನು ವಿಧಿಸಿತು. ದಂಡವನ್ನು ಎರಡು ಭಾಗಗಳಲ್ಲಿ ವಿಧಿಸಲಾಗಿದೆ – ರೂ 1,500 ರೂ. ವ್ಯಾಜ್ಯದ ವೆಚ್ಚ ಮತ್ತು 2,000 ಮೂಲ ದಂಡವಾಗಿದೆ.
ನಿಗದಿತ ಸಮಯದಲ್ಲಿ ಪಾವತಿ ಮಾಡದಿದ್ದರೆ, ದಂಡದ ಮೊತ್ತಕ್ಕೆ ರೆಸ್ಟೋರೆಂಟ್‌ನಿಂದ ಶೇಕಡಾ 8 ರಷ್ಟು ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ನಿವೃತ್ತ ನ್ಯಾಯಮೂರ್ತಿಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement