ಚಂಡೀಗಢ: ಹರಿಯಾಣದ ಗುಲಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರವಾಹ ವಿಕೋಪಕ್ಕೆ ಹೋದ ಬಗ್ಗೆ ಕೋಪಗೊಂಡ ಮಹಿಳೆಯೊಬ್ಬರು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಹರಿಯಾಣದ ಘಗ್ಗರ್ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿನ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಮಹಿಳೆ ಕೋಪಗೊಂಡಿದ್ದರು.‘ಈಗೇಕೆ ಬಂದಿದ್ದೀರಿ’ ಎಂದು ಶಾಸಕನಿಗೆ ಪ್ರಶ್ನಿಸಿದ ನಂತರ ಮಹಿಳೆ ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ‘ಬಂಡು (ಸಣ್ಣ ಅಣೆಕಟ್ಟು)’ ಒಡೆದು ನೀರು ವಸತಿ ಪ್ರದೇಶಗಳಿಗೆ ನುಗ್ಗಿದ್ದಕ್ಕೆ ಮಹಿಳೆ ಕೋಪಗೊಂಡಿದ್ದು, ಅದು ಒಡೆದಿರುವುದು ವಸತಿ ಪ್ರದೇಶಕ್ಕೆ ನೀರು ನುಗ್ಗಲು ಕಾರಣವಾಗಿದೆ ಎಂದು ಮಹಿಳೆ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋವೊಂದು ಶಾಸಕರ ಸುತ್ತ ಜನ ಗುಂಪು ಗುಂಪಾಗಿ ನಿಂತಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆಯು ಕೋಪಗೊಂಡಿರುವುದು ಕಂಡುಬರುತ್ತದೆ. ನಂತರ ಮಹಿಳೆ ಮುಂದೆ ಬಂದು ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜೆಜೆಪಿ ಶಾಸಕರು, ಹಳ್ಳಿಯೊಂದರಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಹೋದಾಗ ಜನರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ. JJP ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟದ ಭಾಗವಾಗಿದೆ.
ಸಣ್ಣ ಅಣೆಕಟ್ಟು ಒಡೆದುಹೋಗಬಾರದು ಎಂದು ಮಹಿಳೆ ಭಾವಿಸಿದ್ದಾರೆ. ಇದು ಹಾಗಾಗಿದ್ದಲ್ಲ ಇದು ನೈಸರ್ಗಿಕ ವಿಕೋಪ ಎಂದು ನಾನು ಅವರಿಗೆ ವಿವರಿಸಿದ್ದರೂ ಅದು ಅವರಿಗೆ ತಿಳಿಯಲಿಲ್ಲ. ಮತ್ತು ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದ್ದರಿಂದ ಹೀಗಾಗಿದೆ” ಎಂದು ಅವರು ಹೇಳಿದ್ದಾರೆ.
ನನಗೆ ಕಪಾಳಮೋಕ್ಷ ಮಾಡಿದ ಮಹಿಳೆಯನ್ನು ನಾನು “ಕ್ಷಮಿಸಿದ್ದೇನೆ” ಮತ್ತು ಆಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಶಾಸಕ ಈಶ್ವರ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಘಗ್ಗರ್ ನದಿಯಿಂದ ಪಂಜಾಬ್ ಮತ್ತು ಹರಿಯಾಣದ ಹಲವಾರು ಹಳ್ಳಿಗಳು ಬಾಧಿತವಾಗಿರುವುದರಿಂದ ಪರಿಹಾರ ಕ್ರಮಗಳು ನಡೆಯುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ