ನಕಾರಾತ್ಮಕ ಗ್ರಹಿಕೆಯಿಂದ ರಚಿಸಲಾದ ಮೈತ್ರಿಕೂಟಗಳು ಯಾವಾಗಲೂ ವಿಫಲಗೊಳ್ಳುತ್ತವೆ : ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ನಕಾರಾತ್ಮಕ ಗ್ರಹಿಕೆಗಳ ಮೇಲೆ ನಿರ್ಮಿಸಲಾದ ಮೈತ್ರಿಗಳು ಯಾವಾಗಲೂ ವಿಫಲಗೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಎದುರಿಸಲು 26 ವಿರೋಧ ಪಕ್ಷಗಳ ನಾಯಕರು ಮಂಗಳವಾರ ಬೆಂಗಳೂರಿನಲ್ಲಿ ಭೇಟಿಯಾಗಿ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ – ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ (INDIA – Indian National Developmental Inclusive Alliance) ಎಂದು ಹೆಸರಿಸಿದ ಬೆನ್ನಲ್ಲೇ ಪ್ರಧಾನಿಯವರ ಈ ಹೇಳಿಕೆಗಳು ಬಂದಿವೆ.
“ಅಧಿಕಾರದ ಆಸೆಯಿಂದ ಮೈತ್ರಿ ಮಾಡಿಕೊಂಡಾಗ, ಭ್ರಷ್ಟಾಚಾರದ ಉದ್ದೇಶದಿಂದ ಮೈತ್ರಿಯಾದಾಗ, ಸ್ವಜನಪಕ್ಷಪಾತ ನೀತಿಯ ಆಧಾರದ ಮೇಲೆ ಮೈತ್ರಿ ಮಾಡಿಕೊಂಡಾಗ, ಜಾತಿ ಮತ್ತು ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಮಾಡಿಕೊಂಡಾಗ, ಆ ಮೈತ್ರಿಯು ದೇಶ ಹಾನಿಕಾರಕವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈಗ ಇಂಡಿಯಾ ಎಂದು ಹೆಸರು ಪಡೆದಿರುವ ಯುಪಿಎ (ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್) ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, 2014 ಕ್ಕಿಂತ ಮೊದಲು ಸಮ್ಮಿಶ್ರ ಸರ್ಕಾರವು ನೀತಿಯು ಪಾರ್ಶ್ವವಾಯು ಬಡಿದಂತೆ ಇತ್ತು ಎಂದು ಹೇಳಿದರು.
“ಪ್ರಧಾನಿ ಮೇಲೆ ಹೈಕಮಾಂಡ್, ಪಾರ್ಶ್ವವಾಯು ಆದ ರೀತಿಯಲ್ಲಿ ನೀತಿ-ನಿರೂಪಣೆಗಳು , ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ, ಅವ್ಯವಸ್ಥೆ ಮತ್ತು ಅಪನಂಬಿಕೆ, ಜಗಳ ಮತ್ತು ಭ್ರಷ್ಟಾಚಾರ, ಲಕ್ಷಾಂತರ ಮೌಲ್ಯದ ಹಗರಣಗಳಿಂದ ಕೂಡಿತ್ತು ಎಂದು ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಆಡಳಿತವನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ನಿವೃತ್ತ ನ್ಯಾಯಮೂರ್ತಿಗಳು

ದೇಶದಲ್ಲಿ ರಾಜಕೀಯ ಒಕ್ಕೂಟಗಳ ಸುದೀರ್ಘ ಇತಿಹಾಸವಿದೆ, ಆದರೆ ನಕಾರಾತ್ಮಕತೆಯ ಮೇಲೆ ನಿರ್ಮಿಸಲಾದ ಯಾವುದೇ ಒಕ್ಕೂಟವು ಎಂದಿಗೂ ಯಶಸ್ವಿಯಾಗಲಿಲ್ಲ ಎಂದು ಪ್ರಧಾನಿ ಹೇಳಿದರು.
ತಮ್ಮ ಭಾಷಣದಲ್ಲಿ ಅವರು, ಕಾಂಗ್ರೆಸ್ ಪಕ್ಷವು ಸರ್ಕಾರಗಳನ್ನು ಉರುಳಿಸಲು ಮೈತ್ರಿಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು.
“90ರ ದಶಕದಲ್ಲಿ ಕಾಂಗ್ರೆಸ್ ದೇಶದಲ್ಲಿ ಅಸ್ಥಿರತೆಯನ್ನು ತರಲು ಮೈತ್ರಿಕೂಟಗಳನ್ನು ಬಳಸಿತು. ಕಾಂಗ್ರೆಸ್ ಸರ್ಕಾರಗಳನ್ನು ರಚಿಸಿತು ಮತ್ತು ಅವುಗಳನ್ನು ಉರುಳಿಸಿತು. 1998 ರಲ್ಲಿ ಅದೇ ಅವಧಿಯಲ್ಲಿ ಎನ್‌ಡಿಎ ರಚನೆಯಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.
ಎನ್‌ಡಿಎ ರಚನೆಯಾಗಿದ್ದು ಯಾರನ್ನಾದರೂ ಅಧಿಕಾರದಿಂದ ಹೊರಹಾಕಲು ಅಲ್ಲ, ಆದರೆ ದೇಶದಲ್ಲಿ ಸ್ಥಿರತೆ ತರಲು ಎನ್‌ಡಿಎ ರಚಿಸಲಾಗಿದೆ. ಯಾರೋ ಒಬ್ಬರನ್ನು ವಿರೋಧಿಸಿ ಎನ್‌ಡಿಎ ರಚನೆಯಾಗಿಲ್ಲ, ಯಾರನ್ನೂ ಅಧಿಕಾರದಿಂದ ಹೊರಹಾಕಲು ರಚನೆ ಮಾಡಿಲ್ಲ, ದೇಶಕ್ಕೆ ಸ್ಥಿರತೆ ತರಲು ರಚಿಸಲಾಗಿದೆ ಎಂದು ಹೇಳಿದ ಪ್ರಧಾನಿ, ದೇಶ ಸ್ಥಿರವಾದಾಗ ಸರ್ಕಾರ ಶಾಶ್ವತ ಹಾಗೂ ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ಪ್ರತಿಪಕ್ಷಗಳ ಮೇಲೆ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧದ ವಾಗ್ದಾಳಿ ನಡೆಸಿದ ಮೋದಿ, ನಾವು ಪ್ರತಿಪಕ್ಷದಲ್ಲಿದ್ದಾಗಲೂ ಸಕಾರಾತ್ಮಕ ರಾಜಕಾರಣ ಮಾಡಿದ್ದೇವೆ. ನಾವು ಎಂದಿಗೂ ಜನಾದೇಶವನ್ನು ಅಗೌರವಿಸಲಿಲ್ಲ ಮತ್ತು ಸರ್ಕಾರಗಳನ್ನು ವಿರೋಧಿಸಲು ವಿದೇಶಿ ಸಹಾಯವನ್ನು ಎಂದಿಗೂ ಕೇಳಲಿಲ್ಲ. ನಾವು ವಿರೋಧ ಪಕ್ಷದಲ್ಲೇ ಇದ್ದೆವು, ಆದರೆ ದೇಶದ ಅಭಿವೃದ್ಧಿಗೆ ಅಡ್ಡಿಯಾಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಎನ್‌ಡಿಎ ದೇಶದ ಜನತೆಗೆ ಬದ್ಧವಾಗಿದೆ. ರಾಷ್ಟ್ರ, ಅದರ ಪ್ರಗತಿ, ಭದ್ರತೆ ಮತ್ತು ಜನರ ಸಬಲೀಕರಣವೇ ಅದರ ಸಿದ್ಧಾಂತ ಮತ್ತು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ...ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್...!

ಜನರ ಸಬಲೀಕರಣಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ, ನೀತಿ ಆಯೋಗದ ವರದಿಯ ಪ್ರಕಾರ 2015-16 ರ ನಂತರ ಸುಮಾರು 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ” ಎಂದು ಅವರು ಹೇಳಿದರು.
ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, “ಸುಮಾರು 40 ಕೋಟಿ ಜನರು ಕಡಿಮೆ ಅವಧಿಯಲ್ಲಿ ಬಡತನವನ್ನು ಹಿಮಮಟ್ಟಿಸಿದ್ದಾರೆ ಅಥವಾ ಸೋಲಿಸಿದ್ದಾರೆ” ಎಂದು ಹೇಳಿದರು. ಐಎಂಎಫ್‌ (IMF) ಪ್ರಕಾರ, ತೀವ್ರ ಬಡತನವು ಭಾರತದಿಂದ ನಿರ್ಮೂಲನೆಯಾಗುವ ಅಂಚಿನಲ್ಲಿದೆ” ಎಂದು ಅವರು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement