ವೀಡಿಯೊ…| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ…ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್…!

ನವದೆಹಲಿ : ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸಬೇಕು, ಇಲ್ಲವಾದಲ್ಲಿ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ ನಂತರ ಟೀಕೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನವು ಅಣುಬಾಂಬ್‌ಗಳನ್ನು ಹೊಂದಿದ್ದು, ನಮ್ಮ ಸರ್ಕಾರಗಳು ಅವರನ್ನು ಕೆರಳಿಸಿದರೆ ಅವರು ಭಾರತದ ಮೇಲೆ ಅಣುಬಾಂಬ್‌ ಎಸೆಯಬಹುದು ಎಂದು ಅಯ್ಯರ್ ಹೇಳಿದ್ದಾರೆ.
“ನೀವು ಅವರೊಂದಿಗೆ (ಪಾಕಿಸ್ತಾನದೊಂದಿಗೆ) ಮಾತನಾಡಬೇಕು. ಆದರೆ ಬದಲಿಗೆ, ನಾವು ನಮ್ಮ ಮಿಲಿಟರಿ ಶಕ್ತಿಯನ್ನು ತೋರಿಸುತ್ತಿದ್ದೇವೆ. ಮತ್ತು ಇದು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ. ಮತ್ತು ಅವರ ಬಳಿ ಪರಮಾಣು ಬಾಂಬ್‌ಗಳಿವೆ. ಒಬ್ಬ ‘ಹುಚ್ಚ’ ಬಾಂಬ್‌ಗಳನ್ನು (ಭಾರತದಲ್ಲಿ) ಉಡಾಯಿಸಲು ನಿರ್ಧರಿಸಿದರೆ ಏನಾಗುತ್ತದೆ” ಎಂದು ಅವರು ಹೇಳಿದರು. .
“ನಾವು ಸಹ ಅಣುಬಾಂಬ್‌ ಹೊಂದಿದ್ದೇವೆ, ಆದರೆ ‘ಹುಚ್ಚರು’ ಲಾಹೋರ್ ಮೇಲೆ ಬಾಂಬ್ ಹಾಕಲು ನಿರ್ಧರಿಸಿದರೆ, ವಿಕಿರಣವು ಅಮೃತಸರವನ್ನು ತಲುಪಲು 8 ಸೆಕೆಂಡುಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
ನಾವು ಅವರನ್ನು ಗೌರವಿಸಿದರೆ ಅವರು ಶಾಂತಿಯಿಂದ ಇರುತ್ತಾರೆ, ಧಿಕ್ಕಿರಿಸಿದರೆ ಭಾರತದ ವಿರುದ್ಧ ಅಣುಬಾಂಬ್​ ದಾಳಿ ನಡೆಸುತ್ತಾರೆ. ದ್ವೇಷ ಸಾಧಿಸಿ ಅಥವಾ ಬಂದೂಕು ತೋರಿಸಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನವೂ ಸಾರ್ವಭೌಮ ರಾಷ್ಟ್ರ ಅದಕ್ಕೂ ಗೌರವವಿದೆ ಎಂದರು.

ಪ್ರಧಾನಿ ನರೇಂದ್ರ ಮೋ ವಿರುದ್ಧ ವಾಗ್ದಾಳಿ ನಡೆಸಿದ ಅಯ್ಯರ್, “ವಿಶ್ವಗುರುವಾಗಬೇಕಾದರೆ, ಪಾಕಿಸ್ತಾನದೊಂದಿಗಿನ ನಮ್ಮ ಸಮಸ್ಯೆಗಳು ಎಷ್ಟೇ ಗಂಭೀರವಾಗಿದ್ದರೂ, ಅವುಗಳನ್ನು ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ ಎಂಬುದನ್ನು ತೋರಿಸಬೇಕು. ಆದರೆ ಕಳೆದ 10 ವರ್ಷಗಳಲ್ಲಿ, [ಈ ನಿಟ್ಟಿನಲ್ಲಿ] ಯಾವುದೇ ಗಂಭೀರ ಪ್ರಯತ್ನವಾಗಿಲ್ಲ” ಎಂದು ಹೇಳಿದರು.
ಮಣಿಶಂಕರ ಅಯ್ಯರ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಭಾರತದ ಬಗ್ಗೆ ಕಾಂಗ್ರೆಸ್‌ ಪಕ್ಷದ “ಸಿದ್ಧಾಂತ” ವನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದೆ.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು, ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, “ರಾಹುಲ್ ಅವರ ಕಾಂಗ್ರೆಸ್ ಸಿದ್ಧಾಂತ” ಈ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ಬೆಂಬಲ, ಸಿಯಾಚಿನ್ ಬಿಟ್ಟುಕೊಡುವ ಆಫರ್‌ ಸೇರಿದಂತೆ ಜನರನ್ನು ವಿಭಜಿಸುವುದು, ಸುಳ್ಳು, ನಿಂದನೆ ಮತ್ತು ದುರ್ಬಲ ಹಾಗೂ ಬಡವರನ್ನು ದಾರಿ ತಪ್ಪಿಸುವ ನಕಲಿ ಭರವಸೆಗಳು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಮತ್ತು ಭೋಜ್‌ಪುರಿ ನಟ ರವಿ ಕಿಶನ್ ಅಯ್ಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನವು ಪ್ರಸ್ತುತ ಆಹಾರಕ್ಕಾಗಿ ಹೆಣಗಾಡುತ್ತಿರುವ ಕಾರಣ ಕಾಂಗ್ರೆಸ್ ನಾಯಕನಿಗೆ ಎಲ್ಲಿಯಾದರೂ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
“ಈ ಸಮಯದಲ್ಲಿ ಪಾಕಿಸ್ತಾನ ತನಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಿದೆ. ಅವರು ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ… ಮಣಿಶಂಕರ್ ಅಯ್ಯರ್ ಅವರು ಎಲ್ಲಿಯಾದರೂ ಚಿಕಿತ್ಸೆ ಪಡೆಯಬೇಕು. ಇದು ಕಾಂಗ್ರೆಸ್‌ನ ಭಾರತವಲ್ಲ. ಈಗ ಭಾರತವು ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಪ್ರಧಾನಿಯವರ ಭಾರತ ಮೋದಿ ಎಂದು ರವಿ ಕಿಶನ್ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಒಂದೇ ಮತಗಟ್ಟೆಯಲ್ಲಿ 8 ಸಲ ಮತದಾನ ಮಾಡಿದ ಯುವಕ ; ವೀಡಿಯೋ ವೈರಲ್ ಆದ ನಂತರ ಬಂಧನ

ಯಾವುದೇ ಭಯೋತ್ಪಾದಕರು ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಹೋದರೆ ಅವರನ್ನು ಕೊಲ್ಲಲು ಭಾರತೀಯ ಪಡೆಗಳು ಪಾಕಿಸ್ತಾನವನ್ನು ಪ್ರವೇಶಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವು ಬಿಜೆಪಿ ನಾಯಕರು ಎಚ್ಚರಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕನ ಈ ಹೇಳಿಕೆಗಳು ಬಂದಿವೆ.
ಆಜ್ ಭಾರತ್ ಘರ್ ಮೇ ಘುಸ್ ಕೆ ಮಾರ್ತಾ ಹೈ (ಇಂದು, ಭಾರತ ಭಯೋತ್ಪಾದಕರನ್ನು ಅವರ ತವರು ನೆಲದಲ್ಲಿಯೇ ನಿರ್ಮೂಲನೆ ಮಾಡುತ್ತದೆ” ಎಂದು ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
ಕೆಲ ದಿನಗಳ ಹಿಂದೆ ರಕ್ಷಣಾ ಸಚಿವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ತಾನವೂ ಪರಮಾಣು ಶಕ್ತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೆನಪಿಸಿದರು. “ನೆನಪಿಡಿ, ಅವರೂ (ಪಾಕಿಸ್ತಾನ) ಬಳೆಗಳನ್ನು ಧರಿಸಿಲ್ಲ. ಅವರಲ್ಲಿ ಪರಮಾಣು ಬಾಂಬ್‌ಗಳಿವೆ, ಮತ್ತು ದುರದೃಷ್ಟವಶಾತ್, ಆ ಪರಮಾಣು ಬಾಂಬ್ ನಮ್ಮ ಮೇಲೆ (ಜಮ್ಮು ಮತ್ತು ಕಾಶ್ಮೀರ) ಬೀಳುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement