“…..ಕಾಂಗ್ರೆಸ್ ಹಿಂದೆ ಸರಿಯಲು ಸಿದ್ಧವಾಗಿರಬೇಕು “: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಬಗ್ಗೆ ಮಣಿಶಂಕರ ಅಯ್ಯರ್ ಮಹತ್ವದ ಹೇಳಿಕೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ನಾಯಕನ ಸ್ಥಾನದ ಪಾತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಾಗಿರಬೇಕು ಎಂದು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಇಂಡಿಯಾ ಬ್ಲಾಕ್‌ ಅನ್ನು ಬೇರೆ ಯಾವುದೇ ಪಕ್ಷ ಮುನ್ನಡೆಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಸೂಕ್ತ … Continued

“ಒಂದೊಮ್ಮೆ ಪ್ರಣವ್ ಮುಖರ್ಜಿ ಪ್ರಧಾನಿಯಾಗಿದ್ದರೆ…”: ಕಾಂಗ್ರೆಸ್ 2014ರ ಹೀನಾಯ ಸೋಲಿನ ಬಗ್ಗೆ ಹಿರಿಯ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ : ಯುಪಿಎ-2 ಸರ್ಕಾರದ ಅವಧಿಯಲ್ಲಿ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಮತ್ತು ಡಾ. ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರೆ, 2014ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವೇ ಬೇರೆಯಾಗುತ್ತಿತ್ತು ಮತ್ತು ಕಾಂಗ್ರೆಸ್‌ ಅಷ್ಟು ಹೀನಾಯ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಮಣಿಶಂಕರ ಅಯ್ಯರ್ ಅವರು, … Continued

ವೀಡಿಯೊ…| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ…ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್…!

ನವದೆಹಲಿ : ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸಬೇಕು, ಇಲ್ಲವಾದಲ್ಲಿ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ ನಂತರ ಟೀಕೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನವು ಅಣುಬಾಂಬ್‌ಗಳನ್ನು ಹೊಂದಿದ್ದು, ನಮ್ಮ ಸರ್ಕಾರಗಳು ಅವರನ್ನು ಕೆರಳಿಸಿದರೆ ಅವರು ಭಾರತದ ಮೇಲೆ ಅಣುಬಾಂಬ್‌ ಎಸೆಯಬಹುದು ಎಂದು ಅಯ್ಯರ್ ಹೇಳಿದ್ದಾರೆ. “ನೀವು ಅವರೊಂದಿಗೆ (ಪಾಕಿಸ್ತಾನದೊಂದಿಗೆ) ಮಾತನಾಡಬೇಕು. … Continued

ಪಾಕಿಸ್ತಾನಿಗಳು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದು ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಅವರಿಗೆ ವಿವಾದ ಹೊಸದೇನಲ್ಲ, ಈಗ ಮಾಜಿ ಕೇಂದ್ರ ಸಚಿವರೂ ಆದ ಮಣಿಶಂಕರ ಅಯ್ಯರ್ ಅವರು ಭಾನುವಾರ ಪಾಕಿಸ್ತಾನಿ ಜನರನ್ನು ಹೊಗಳಿ ಅವರನ್ನು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದಿದ್ದಾರೆ ಎಂದು ಡಾನ್ ವರದಿ ಮಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ದಿನಪತ್ರಿಕೆಯ ಪ್ರಕಾರ, ಅಯ್ಯರ್ ಅವರು … Continued

ಅಯೋಧ್ಯೆ ರಾಮಮಂದಿರ ಕುರಿತು ಆಕ್ಷೇಪಾರ್ಹ ಹೇಳಿಕೆ: ಮಣಿಶಂಕರ ಅಯ್ಯರ್ ಪುತ್ರಿ ವಿರುದ್ಧ ದೂರು ದಾಖಲು

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಖಂಡಿಸಿ ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರಾದ ಅಜಯ ಅಗರ್ವಾಲ್ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ … Continued

“ದಯವಿಟ್ಟು ಬೇರೆ ಕಾಲೋನಿಗೆ ಹೋಗಿ…”: ರಾಮಮಂದಿರ ವಿರೋಧಿ ಪೋಸ್ಟ್‌ ನಂತರ ಮಣಿಶಂಕರ್ ಅಯ್ಯರ್ ಮಗಳಿಗೆ ಮನೆ ತೊರೆಯುವಂತೆ ನೋಟಿಸ್‌

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ತೆರೆಯುವುದನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ದೆಹಲಿಯ ಜಂಗ್‌ಪುರದ ನಿವಾಸಿ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ) ಅವರಿಗೆ ತಮ್ಮ ಮನೆ ಬಿಟ್ಟು ಹೋಗುವಂತೆ ಸೂಚಿಸಿದೆ. ಈ ಕುರಿತು ದೆಹಲಿಯ ಜಂಗ್ಪುರ ವಿಸ್ತರಣೆಯ ನಿವಾಸಿಗಳ ಕಲ್ಯಾಣ ಸಂಘ(RWA)ವು … Continued