ಅಯೋಧ್ಯೆ ರಾಮಮಂದಿರ ಕುರಿತು ಆಕ್ಷೇಪಾರ್ಹ ಹೇಳಿಕೆ: ಮಣಿಶಂಕರ ಅಯ್ಯರ್ ಪುತ್ರಿ ವಿರುದ್ಧ ದೂರು ದಾಖಲು

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಖಂಡಿಸಿ ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರಾದ ಅಜಯ ಅಗರ್ವಾಲ್ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜನವರಿ 20 ರಂದು ದೇವಸ್ಥಾನದಲ್ಲಿ ರಾಮ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭದ ವಿರುದ್ಧ ಸುರಣ್ಯಾ ಅಯ್ಯರ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ “ಆಕ್ಷೇಪಾರ್ಹ ಟೀಕೆಗಳನ್ನು” ಮಾಡಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದಾರೆ.
“ಸುರಣ್ಯಾ ಅಯ್ಯರ ಅವರು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನವರಿ 20 ಮತ್ತು ಇತರ ದಿನಾಂಕಗಳಲ್ಲಿ ಗಂಭೀರವಾಗಿ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ಈ ಸಂಪೂರ್ಣ ಕ್ಲಿಪ್ ಅನ್ನು ನೋಡಿ ಮತ್ತು ಮತ್ತು 36 ನಿಮಿಷಗಳ ವೀಡಿಯೊವನ್ನು ನೋಡಿದ ನಂತರ ಸೂಕ್ತವೆಂದು ಭಾವಿಸುವ ಐಪಿಸಿ ಸೆಕ್ಷನ್ 153-ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ಅನ್ನು ನೋಂದಾಯಿಸಿ ಎಂದು ಅಗರ್ವಾಲ್ ದೂರಿನಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಜನವರಿ 19 ರಂದು, ಸುರಣ್ಯಾ ಅಯ್ಯರ್ ಅವರು ಫೇಸ್‌ಬುಕ್‌ನಲ್ಲಿ ಜನವರಿ 22 ರಿಂದ ಮೂರು ದಿನಗಳ ಕಾಲ ಉಪವಾಸವನ್ನು ಆಚರಿಸುವುದಾಗಿ ಬರೆದಿದ್ದಾರೆ, ಹಾಗೂ “ಹಿಂದೂ ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಮಾಡಲಾಗುತ್ತಿರುವುದರ ವಿರುದ್ಧ “ಭಾರತದ ಮುಸ್ಲಿಮರನ್ನು ಬೆಂಬಲಿಸುವುದಾಗಿ ಅದರಲ್ಲಿ ಹೇಳಿದ್ದಾರೆ.
ಸುರಣ್ಯಾ ಅವರ ಪೋಸ್ಟ್ ವಿವಾದಕ್ಕೆ ಕಾರಣವಾಯಿತು. ದೆಹಲಿಯ ಜಂಗ್ಪುರದ ನಿವಾಸಿ ಕ್ಷೇಮಾಭಿವೃದ್ಧಿ ಸಂಘವು (RWA) ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಮತ್ತು ಅವರ ಮಗಳಿಗೆ ಶಾಂತಿ ಮತ್ತು ಸೌಹಾರ್ದತೆ ಕದಡುವ ಕಾರಣಕ್ಕಾಗಿ ಕಾಲೋನಿಯಿಂದ ತೊರೆಯುವಂತೆ ಸೂಚಿಸಿ ವಿವರವಾದ ಪತ್ರವನ್ನು ಬರೆದಿದೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಸುರಣ್ಯಾ ಅಯ್ಯರ್ ಅವರು ಫೇಸ್‌ಬುಕ್ ವೀಡಿಯೊದಲ್ಲಿ ಪ್ರಶ್ನೆಯಲ್ಲಿರುವ ದೆಹಲಿಯ ಜಂಗ್ಪುರದ ನಿವಾಸಿ ಕ್ಷೇಮಾಭಿವೃದ್ಧಿ ಸಂಘವು (RWA) ತಾವು ವಾಸಿಸುವ ಕಾಲೋನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.
ಆಕೆಯ ತಂದೆ ಮಣಿಶಂಕರ್ ಅಯ್ಯರ್ ಕೂಡ ರಾಮಮಂದಿರ ಉದ್ಘಾಟನೆಯ ವಿರುದ್ಧ ಮಾತನಾಡಿದ್ದು, ಉದ್ಘಾಟನೆ ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ನಾಲ್ವರು ಶಂಕರಾಚಾರ್ಯರು ಗೈರುಹಾಜರಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ದುಬಾರಿಯಾಗಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement