ಪಾಕಿಸ್ತಾನಿಗಳು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದು ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಅವರಿಗೆ ವಿವಾದ ಹೊಸದೇನಲ್ಲ, ಈಗ ಮಾಜಿ ಕೇಂದ್ರ ಸಚಿವರೂ ಆದ ಮಣಿಶಂಕರ ಅಯ್ಯರ್ ಅವರು ಭಾನುವಾರ ಪಾಕಿಸ್ತಾನಿ ಜನರನ್ನು ಹೊಗಳಿ ಅವರನ್ನು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದಿದ್ದಾರೆ ಎಂದು ಡಾನ್ ವರದಿ ಮಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಪಾಕಿಸ್ತಾನದ ದಿನಪತ್ರಿಕೆಯ ಪ್ರಕಾರ, ಅಯ್ಯರ್ ಅವರು ಲಾಹೋರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಪಾಕಿಸ್ತಾನದವರು, ನನ್ನ ಅನುಭವದಿಂದ, ಬಹುಶಃ ಇನ್ನೊಂದು ಬದಿಗೆ ಅತಿಯಾಗಿ ಪ್ರತಿಕ್ರಿಯಿಸುವ ಜನರು. ನಾವು ಸ್ನೇಹಪರರಾಗಿದ್ದರೆ, ಅವರು ಅತಿಯಾದ ಸ್ನೇಹಪರರು ಮತ್ತು ನಾವು ದ್ವೇಷಿಗಳಾಗಿದ್ದರೆ, ಅವರು ಅತಿಯಾದ ದ್ವೇಷವನ್ನು ಹೊಂದುತ್ತಾರೆ ಎಂದು ಹೇಳಿದ್ದಾರೆ.
ಲಾಹೋರ್‌ನ ಅಲ್ಹಮ್ರಾದಲ್ಲಿ ನಡೆದ ಫೈಜ್ ಉತ್ಸವದ ಎರಡನೇ ದಿನದಂದು ‘ಹಿಜ್ರ್ ಕಿ ರಖ್, ವಿಸಾಲ್ ಕೇ ಫೂಲ್, ಇಂಡೋ-ಪಾಕ್ ವ್ಯವಹಾರಗಳು’ ಎಂಬ ಅಧಿವೇಶನದಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಪಾಕಿಸ್ತಾನ ಮತ್ತು ಅದರ ಜನರ ಬಗ್ಗೆ ತಮ್ಮ ಪ್ರೀತಿಯನ್ನು ಹಂಚಿಕೊಂಡರು. ಅವರು ಪಾಕಿಸ್ತಾನದಲ್ಲಿದ್ದಂತೆ ತೆರೆದ ತೋಳುಗಳಿಂದ ಸ್ವಾಗತಿಸಲ್ಪಟ್ಟ ದೇಶಕ್ಕೆ ಹೋಗಿರಲಿಲ್ಲ ಎಂದು ಹೇಳಿದ್ದಾರೆ.

ಮಣಿಶಂಕರ ಅಯ್ಯರ್‌ ಅವರು, ಕರಾಚಿಯಲ್ಲಿ ಕನ್ಸುಲೇಟರ್‌ ಜನರಲ್ ಆಗಿ ಪೋಸ್ಟಿಂಗ್ ಮಾಡಿದ್ದನ್ನು ನೆನಪಿಸಿಕೊಂಡರು.
ಅವರು, ಮೆಮೊಯಿರ್ಸ್ ಆಫ್ ಎ ಮೇವರಿಕ್‌ ತಮ್ಮ ಪುಸ್ತಕದಲ್ಲಿ ಹಲವಾರು ಘಟನೆಗಳ ಬಗ್ಗೆ ಬರೆದಿದ್ದಾರೆ. ಇದು ಪಾಕಿಸ್ತಾನವನ್ನು ಭಾರತೀಯರು ಕಲ್ಪಿಸಿಕೊಳ್ಳುವುದಕ್ಕಿಂತ ಸಂಪೂರ್ಣವಾಗಿ ವಿಭಿನ್ನ ದೇಶವೆಂದು ತೋರಿಸುತ್ತದೆ.
ಸದ್ಭಾವನೆ ಬೇಕು ಆದರೆ, ಮೊದಲ ನರೇಂದ್ರ ಮೋದಿ ಸರ್ಕಾರ ರಚನೆಯಾದ ನಂತರ ಕಳೆದ 10 ವರ್ಷಗಳಲ್ಲಿ ಸದ್ಭಾವನೆಗೆ ಬದಲಾಗಿ ಎಲ್ಲವೂ ವಿರುದ್ಧವಾಗಿದೆ ಎಂದು ಅವರು ಹೇಳಿದರು ಎಂದು ಡಾನ್ ವರದಿ ಮಾಡಿದೆ. “ನಾನು (ಪಾಕಿಸ್ತಾನದ) ಜನರಿಗೆ ಕೇಳಿಕೊಳ್ಳುವುದೆಂದರೆ, ಮೋದಿ ಅವರು ಎಂದಿಗೂ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆದಿಲ್ಲ ಆದರೆ ನಮ್ಮ ವ್ಯವಸ್ಥೆಯಲ್ಲಿ ಪಕ್ಷಗಳು ಮೂರನೇ ಒಂದು ಭಾಗದಷ್ಟು ಮತಗಳನ್ನು ಪಡೆದರೆ, ಅವರು ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಮೂರನೇ ಎರಡರಷ್ಟು ಭಾರತೀಯರು ನಿಮ್ಮ ಕಡೆಗೆ (ಪಾಕಿಸ್ತಾನದವರು) ಬರಲು ಸಿದ್ಧರಾಗಿದ್ದಾರೆ ಎಂದು ಡಾನ್ ಪತ್ರಿಕೆಯು ಅಯ್ಯರ್ ಅವರು ಕಾರ್ಯಕ್ರಮದಲ್ಲಿ ಹೇಳಿರುವುದನ್ನು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ತಮ್ಮ ಸ್ನೇಹಿತ, ಪಾಕಿಸ್ತಾನದ ಮಾಜಿ ರಾಯಭಾರಿ ಸತೀಂದರಕುಮಾರ ಲಾಂಬಾ ಅವರನ್ನು ಉಲ್ಲೇಖಿಸಿ ಮಾತನಾಡಿದ ಮಣಿಶಂಕರ ಅಯ್ಯರ್‌ ಅವರು, ಸತೀಂದರಕುಮಾರ ಲಾಂಬಾ ರಾಜತಾಂತ್ರಿಕರಾಗಿ ತಮ್ಮ ವೃತ್ತಿಜೀವನದಲ್ಲಿ ಆರು ವಿಭಿನ್ನ ಪ್ರಧಾನಿಗಳ ಅಡಿಯಲ್ಲಿ ಸಂಬಂಧ ಹದಗೆಟ್ಟ ನೆರೆಹೊರೆಯವರ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧಕ್ಕಾಗಿ ಹೇಗೆ ಸೇವೆ ಸಲ್ಲಿಸಿದರು ಎಂಬುದರ ಕುರಿತು ಪುಸ್ತಕವನ್ನು ಬರೆದಿದ್ದಾರೆ ಎಂದು ಹೇಳಿದರು.
ಉಭಯ ದೇಶಗಳ ನಡುವೆ ಮಾತುಕತೆಯ ಚಾನೆಲ್‌ಗಳನ್ನು ತೆರೆಯಬೇಕು ಎಂದು ಕಾಂಗ್ರೆಸ್ ನಾಯಕ ಪುನರುಚ್ಚರಿಸಿದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಪ್ರಸ್ತುತ ಆಡಳಿತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಿರಾಕರಿಸುವ ಮೂಲಕ ‘ದೊಡ್ಡ ತಪ್ಪು’ ಮಾಡಿದೆ ಎಂದು ಹೇಳಿದರು.

“ಇಸ್ಲಾಮಾಬಾದ್‌ನಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಐವರು ಭಾರತೀಯ ಹೈಕಮಿಷನರ್‌ಗಳು ಇದ್ದರು ಮತ್ತು ಅವರಲ್ಲಿ ಐವರೂ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ ಮತ್ತು ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ದೊಡ್ಡ ತಪ್ಪೆಂದರೆ ಮಾತುಕತೆಗಳನ್ನೇ ನಿರಾಕರಿಸಿರುವುದು. ನಿಮ್ಮ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವ ಧೈರ್ಯ ನಮಗಿದೆ, ಆದರೆ ಮೇಜಿನ ಮೇಲೆ ಕುಳಿತು ಮಾತನಾಡುವ ಧೈರ್ಯ ನಮಗಿಲ್ಲ ಎಂದು ಅಯ್ಯರ್ ಹೇಳಿದರು.

ಭಾರತದಲ್ಲಿ ‘ಹಿಂದುತ್ವ ಆಡಳಿತವು’ ಪಾಕಿಸ್ತಾನದೊಂದಿಗೆ ಮಾತನಾಡಲು ಬಯಸುತ್ತದೆ ಎಂದು ನಿರೀಕ್ಷಿಸುವುದು ‘ಮೂರ್ಖತನ’ ಎಂದು ಅವರು ಹೇಳಿದರು .ಹಿಂದುತ್ವದ ಅಡಿಯಲ್ಲಿ ಅವರು ಇಸ್ಲಾಮಿಕ್ ಗಣರಾಜ್ಯವಾದ ಪಾಕಿಸ್ತಾನವನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಇಸ್ಲಾಮಿಕ್ ಗಣರಾಜ್ಯಕ್ಕೆ ಗಾಂಧಿ-ನೆಹರೂ ಉತ್ತರವಾಗಿದ್ದಾರೆ. ಧರ್ಮದ ಆಧಾರದ ಮೇಲೆ ಗಣರಾಜ್ಯವಾಗುವುದಿಲ್ಲ ಆದರೆ ಎಲ್ಲಾ ಧರ್ಮಗಳ ಆಧಾರದ ಮೇಲೆ ಗಣರಾಜ್ಯವಾಗುತ್ತದೆ. ಆದರೆ 65 ವರ್ಷಗಳ ಕಾಲ ನಡೆದ ಅವರ ತತ್ವವನ್ನು 2014 ರಲ್ಲಿ ಉರುಳಿಸಲಾಯಿತು ಮತ್ತು ಮುಂದಿನ ಐದು ವರ್ಷಗಳ ಕಾಲ ನಾವು ದೆಹಲಿಯಲ್ಲಿ ಅದೇ ಮನಸ್ಥಿತಿಯನ್ನು ಹೊಂದಲಿದ್ದೇವೆ ಎಂಬುದು ಕಡಿಮೆ ಸಂಖ್ಯೆಯ ಜನರ ಅಭಿಪ್ರಾಯವಾಗಿದೆ. ಏಕೆಂದರೆ 63 ಪ್ರತಿಶತ ಭಾರತೀಯರು ಎಂದಿಗೂ ಬಿಜೆಪಿಗೆ ಮತ ಹಾಕಿಲ್ಲ ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು ಡಾನ್ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಉಭಯ ದೇಶಗಳಲ್ಲಿನ ನಾಗರಿಕ ಸಮಾಜವು “ಸರ್ಕಾರಗಳು ಎಚ್ಚರಗೊಳ್ಳುವವರೆಗೆ ಮಾತುಕತೆಯನ್ನು ಮುಂದುವರೆಸಬೇಕು, ಆದರೆ ವೀಸಾ ಸಮಸ್ಯೆಗಳಿವೆ. ಹೀಗಾಗಿ ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಭಾರತ ಮತ್ತು ಪಾಕಿಸ್ತಾನದ ಹೊರಗೆ ಸರ್ಕಾರಗಳನ್ನು ಬೈಪಾಸ್ ಮಾಡುವುದನ್ನು ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಹಿಂದೆ, ವಿದೇಶಾಂಗ ಸಚಿವ ಎಸ್ ಜೈಶಂಕರ, ಪಾಕಿಸ್ತಾನದ ಪ್ರಮುಖ ನೀತಿಯು “ಭಾರತವನ್ನು ಟೇಬಲ್‌ಗೆ ತರಲು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಳಸುತ್ತದೆ” ಎಂದು ಹೇಳಿದ್ದರು. ಭಾರತವು “ಈಗ ಆ ಆಟವನ್ನು ಆಡದೆ” ಆ ನೀತಿಯನ್ನು ಅಪ್ರಸ್ತುತಗೊಳಿಸಿದೆ ಎಂದು ಹೇಳಿದ್ದರು.“ಪಾಕಿಸ್ತಾನವು ಈಗ ಅಲ್ಲ ಆದರೆ ಬಹು ದಶಕಗಳಿಂದಲೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಳಸಿಕೊಂಡು ಭಾರತವನ್ನು ಟೇಬಲ್‌ಗೆ ತರಲು ಪ್ರಯತ್ನಿಸುತ್ತಿದೆ. ಅದು ಮೂಲಭೂತವಾಗಿ ಅದರ ಪ್ರಮುಖ ನೀತಿಯಾಗಿತ್ತು. ಈಗ ಆ ಆಟವನ್ನು ಆಡದೆ ನಾವು ಅದನ್ನು ಅಪ್ರಸ್ತುತಗೊಳಿಸಿದ್ದೇವೆ ಎಂದು ಜೈಶಂಕರ ಹೇಳಿದ್ದರು.
ಎಸ್‌ಸಿಒ ಶೃಂಗಸಭೆಯ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಜೈಶಂಕರ, ಪಾಕಿಸ್ತಾನವನ್ನು ಕಟುವಾಗಿ ಟೀಕಿಸುವ ಮೂಲಕ, “ಭಯೋತ್ಪಾದನೆಯ ಬಲಿಪಶುಗಳು ಮತ್ತು ಅಪರಾಧಿಗಳು ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಪಾಕಿಸ್ತಾನದ ವಿಶ್ವಾಸಾರ್ಹತೆ ಅದರ ವಿದೇಶೀ ವಿನಿಮಯ ರಿಸರ್ವ್‌ಗಿಂತ ವೇಗವಾಗಿ ಕುಸಿಯುತ್ತಿದೆ” ಎಂದು ಹೇಳಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement