ವಿಪಕ್ಷಗಳ ಒಕ್ಕೂಟಕ್ಕೆ ʼಇಂಡಿಯಾʼ ಎಂದು ಹೆಸರಿಡಲು ಬಿಹಾರ ಸಿಎಂ ನಿತೀಶಕುಮಾರ ವಿರೋಧಿಸಿದ್ದು ಏಕೆ…?

ಬೆಂಗಳೂರು : ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ‘ಇಂಡಿಯಾ’ (Indian National Developmental Inclusive Alliance) ಎಂದು ಹೆಸರಿಡಲು ಉತ್ಸುಕರಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ಏಕೆಂದರೆ ಅದರಲ್ಲಿ ‘ಎನ್‌ಡಿಎ’ ಇದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ಅನೌಪಚಾರಿಕ ಸಭೆಯಲ್ಲಿ ಈ ಹೆಸರನ್ನು ಮೊದಲು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ. ಎಲ್ಲ ಪಕ್ಷಗಳಿಂದಲೂ ಪ್ರತಿಕ್ರಿಯೆ ಕೇಳಲಾಗಿದ್ದು, ಮಂಗಳವಾರ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ.
ಚರ್ಚೆಯ ವೇಳೆ ನಿತೀಶಕುಮಾರ ವಿರೋಧ ಪಕ್ಷದ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೇಗೆ ಹೆಸರಿಸಬಹುದು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಎಡಪಕ್ಷಗಳ ನಾಯಕರು ಕೂಡ ಈ ಹೆಸರಿಗೆ ಹಿಂಜರಿದರು ಮತ್ತು ವಿಭಿನ್ನ ಪರ್ಯಾಯಗಳನ್ನು ಸೂಚಿಸಿದರು ಎನ್ನಲಾಗಿದೆ. ಬಹುತೇಕ ಪಕ್ಷಗಳು ಈ ಹೆಸರನ್ನು ಅನುಮೋದಿಸುತ್ತಿದ್ದಂತೆ, ನಿತೀಶಕುಮಾರ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಉಳಿದವರು ಯಾರೂ ಆಕ್ಷೇಪ ವ್ಯಕ್ತಪಡಿಸದ ಕಾರಣ, ಬಿಜೆಪಿ ವಿರೋಧಿ ಮೈತ್ರಿಕೂಟದ ಹೆಸರಾಗಿ ʼಇಂಡಿಯಾʼ ಎಂದು ಇಡಲು ನಿತೀಶ ಒಪ್ಪಿಕೊಂಡರು. “ಸರಿ, ನೀವೆಲ್ಲರೂ (ಇಂಡಿಯಾ ಹೆಸರು) ಅದು ಸರಿ ಎಂದರೆ, ಅದು ಸರಿ” ಎಂದು ಬಿಹಾರ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಮೂಲವೊಂದು ಉಲ್ಲೇಖಿಸಿದ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ...! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ...!

ಹೆಸರನ್ನು ಸೂಚಿಸಿದವರು ಯಾರು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಹೆಸರನ್ನು ಸೂಚಿಸಿದ್ದಾರೆ ಎಂದು ಹಲವಾರು ವರದಿಗಳಿವೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ಸೂಚಿಸಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.
ಆದಾಗ್ಯೂ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ವಿದುತಲೈ ಚಿರುತೈಗಲ್ ಕಚ್ಚಿ ಮುಖ್ಯಸ್ಥ ತೋಲ್ ತಿರುಮಾವಳವನ್ ಹೇಳಿದ್ದಾರೆ.
“ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ʼಇಂಡಿಯಾʼ ಹೆಸರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ” ಎಂದು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿದೆ. ಸಭೆಯ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು “ಇಂಡಿಯಾ” ಎಂಬ ಹೆಸರನ್ನು ಆಯ್ಕೆ ಮಾಡಲು ಕಾರಣಗಳನ್ನು ಮುಂದಿಟ್ಟರು ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ಹೇಳಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಭಾಗವಹಿಸಿದ ಸಹಯೋಗದ ಪ್ರಯತ್ನವಾಗಿತ್ತು. ರಾಹುಲ್ ಗಾಂಧಿ ಅವರು ಚರ್ಚೆಗಳನ್ನು ನಡೆಸಿದರು ಮತ್ತು ‘ಇಂಡಿಯಾ’ವನ್ನು ಆಯ್ಕೆ ಮಾಡುವ ಹಿಂದಿನ ತಾರ್ಕಿಕತೆಯನ್ನು ಪ್ರಸ್ತುತಪಡಿಸಿದರು ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಹೆಸರಿನ ಪೂರ್ಣ ರೂಪದ ಬಗ್ಗೆ ಗೊಂದಲವಿತ್ತು. ಇಂಡಿಯಾ ಎಂದರೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ (Indian National Developmental Inclusive Alliance) ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರೆ, ಇಂಡಿಯಾದಲ್ಲಿನ ‘ಡಿ’ ಎಂದರೆ ‘ಡೆಮಾಕ್ರಟಿಕ್’ ಎಂದು ಕೆಲವು ವರದಿಗಳು ಹೇಳಿವೆ. ಬಿಜೆಪಿ ವಿರೋಧಿ ಪಕ್ಷಗಳು ಬೆಂಗಳೂರಿನಲ್ಲಿ ಎರಡು ದಿನಗಳ ಸಭೆ ನಡೆಸಿದ್ದು, ಬಿಜೆಪಿ ತನ್ನ ಶಕ್ತಿ ಪ್ರದರ್ಶನದಲ್ಲಿ ಮಂಗಳವಾರ ಸಂಜೆ ದೆಹಲಿಯಲ್ಲಿ ತನ್ನ 38 ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ : ಬ್ರಹ್ಮೋಸ್ ಕ್ಷಿಪಣಿ ಬಳಸಿ ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಮಾಡಿದ ಭಾರತ; ಪಟ್ಟಿ ಇಲ್ಲಿದೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement