ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಭಾರತೀಯರು, ಹಲವೆಡೆ ನೂಕು-ನುಗ್ಗಲು : ಖರೀದಿಗೆ ಮಿತಿ ಹೇರಿಕೆ…!

ಅಮೆರಿಕದ ಅಂಗಡಿಗಳಲ್ಲಿ ಅಕ್ಕಿ ಖರೀದಿಸಲು ಭಾರತೀಯರು ಮುಗಿಬೀಳುತ್ತಿದ್ದಾರೆ. ಅಮೆರಿಕದ ಸೂಪರ್‌ ಮಾರ್ಕೆಟ್‌ಗಳ ಮುಂದೆ ಅನಿವಾಸಿ ಭಾರತೀಯರು ಕ್ಯೂದಲ್ಲಿ ನಿಂತು ಅಕ್ಕಿ ಖರೀದಿಸುತ್ತಿದ್ದಾರೆ. ಕೆಲವು ಕಡೆ ನೂಕು-ನುಗ್ಗಲು ಸಹ ನಡೆದ ವರದಿಯಾಗಿದೆ.
ಭಾರತ ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಅಮೆರಿಕದಲ್ಲಿ ಅಕ್ಕಿ ಅಭಾವ ಉಂಟಾಗಿದೆ. ಹೀಗಾಗಿ ಅಮೆರಿಕದಲ್ಲಿ ಅಕ್ಕಿ ಕೊಳ್ಳಲು ಭಾರತೀಯ ಅಮೆರಿನ್ನರು ಮುಗಿಬೀಳುತ್ತಿದ್ದಾರೆ.
ಭಾರತದೊಳಗೆ ಅಕ್ಕಿ ಬೆಲೆ ನಿಯಂತ್ರಸಲು ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿಷೇಶದ ಹೇರಿದೆ. ಹೀಗಾಗಿ ಸುಮಾರು 80 ಪ್ರತಿಶತದಷ್ಟು ಅಕ್ಕಿ ರಫ್ತು ಕಡಿಮೆಯಾಗಿದೆ. DGFTಯಿಂದ ನಿಷೇಧದ ಅಧಿಸೂಚನೆಯು ಅಂತಾರಾಷ್ಟ್ರೀಯ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳನ್ನು ನಿಷೇಧಿಸುವ ಭಾರತದ ನಿರ್ಧಾರವು ವಿಶ್ವ ಮಾರುಕಟ್ಟೆಯಲ್ಲಿ $1 ಬಿಲಿಯನ್ ಮೌಲ್ಯದ ಸುಮಾರು 20 ಲಕ್ಷ ಮೆಟ್ರಿಕ್ ಟನ್ ಧಾನ್ಯ ರಫ್ತಿನ ಮೇಲೆ ಪರಿಣಾಮ ಬೀರಿದೆ. ವಿಶ್ವದ ಅಕ್ಕಿ ರಫ್ತಿನ 40% ರಷ್ಟನ್ನು ಹೊಂದಿರುವ ಭಾರತವು ಗುರುವಾರ ತನ್ನ ಅತಿದೊಡ್ಡ ಅಕ್ಕಿ ರಫ್ತು ನಿಲ್ಲಿಸಲು ಆದೇಶಿಸಿದೆ..

ಅಕ್ಕಿ ರಫ್ತಿನ ಮೇಲಿನ ಭಾರತ ಸರ್ಕಾರದ ನಿಷೇಧ ಹೇರಿದ ನಂತರ ಸಂಭಾವ್ಯ ಅಕ್ಕಿ ಕೊರತೆಯ ಭೀತಿಯು ಅಮೆರಿಕದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅನೇಕ ಭಾರತೀಯ ಮನೆಗಳಿಗೆ ಅಕ್ಕಿಯೇ ಪ್ರಧಾನ ಆಹಾರವಾಗಿರುವುದರಿಂದ, ಅಕ್ಕಿ ರಫ್ತಿನ ಮೇಲೆ ಭಾರತದ ಹಠಾತ್ ನಿರ್ಬಂಧವು ಅಮೆರಿಕದ ಭಾರತೀಯರಿಗೆ ಅಕ್ಕಿ ಕೊರತೆಗೆ ಕಾರಣವಾಗಿದೆ. ಅಲ್ಲದೆ ಸಂಭಾವ್ಯ ಅಕ್ಕಿ ಕೊರತೆಯ ಭೀತಿಯಿಂದ ಅಮೆರಿಕದ ಭಾರತೀಯರು ಅಕ್ಕಿಯನ್ನು ದಾಸ್ತಾನು ಮಾಡಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬೇಡಿಕೆಯ ಉಲ್ಬಣಗೊಂಡು ಅಕ್ಕಿ ಶೆಲ್ಫ್‌ಗಳು ಖಾಲಿಯಾಗಿವೆ ಅಥವಾ “ನೋ ಸ್ಟಾಕ್” ಬೋರ್ಡ್‌ಗಳನ್ನು ಸೂಪರ್‌ಮಾರ್ಕೆಟ್‌ಗಳ ಮುಂದೆ ಪ್ರದರ್ಶಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಅಕ್ಕಿ ಬೆಲೆ ದಿಢೀರ್‌ ಏರಿಕೆ…
ಅಕ್ಕಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಈಗಾಗಲೇ ಅಮೆರಿಕದಲ್ಲಿ ಏರಿಕೆಯಾಗಲು ಪ್ರಾರಂಭಿಸಿವೆ ಎಂದು ವರದಿಗಳು ಸೂಚಿಸುತ್ತವೆ. ಸಾಮಾನ್ಯವಾಗಿ 25 ಕೆಜಿ ಅಕ್ಕಿ ಮೂಟೆಗೆ 22 ಡಾಲರ್‌ಗಳಿಗಿಂತ ಕಡಿಮೆ ಬೆಲೆ ಇತ್ತು. ಆದರೆ, ಈಗ ಅದರ ಬೆಲೆ 32 ರಿಂದ 47 ಡಾಲರ್‌ವರೆಗೆ ಏರಿಕೆ ಆಗಿದೆ. ಅಲ್ಲದೆ, ದೇಸಿ ಕಿರಾಣಿ ಅಂಗಡಿಗಳು ಒಂದು ಅಕ್ಕಿ ಚೀಲ ಖರೀದಿಸಬೇಕಾದರೆ ಗ್ರಾಹಕರು ಕನಿಷ್ಠ $35-$50ನಷ್ಟು ಇತರ ವಸ್ತುಗಳನ್ನು ಖರೀದುಸುವಂತೆ ಷರತ್ತು ಹಾಕುತ್ತಿರುವ ವರದಿಗಳೂ ಇವೆ. ಈ ಬೆಲೆ ಏರಿಕೆಯು ಎನ್‌ಆರ್‌ಐಗಳು ಎದುರಿಸುತ್ತಿರುವ ಸವಾಲುಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ, ಅವರಲ್ಲಿ ಹಲವರು ಈಗಾಗಲೇ ಜಾಗತಿಕ ಪರಿಸ್ಥಿತಿಯ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.

ಅಕ್ಕಿ ಖರೀದಿ ಮೇಲೆ ಮಿತಿ ಹೇರಿಕೆ…!
ಕೆಲವು ಸೂಪರ್‌ಮಾರ್ಕೆಟ್‌ಗಳು ಪ್ರತಿ ವ್ಯಕ್ತಿಗೆ ಮಾರಾಟ ಮಾಡುವ ಅಕ್ಕಿ ಚೀಲಗಳ ಸಂಖ್ಯೆಯ ಮೇಲೆ ಮಿತಿಗಳನ್ನು ವಿಧಿಸುತ್ತಿದ್ದಾರೆ. ಸಂಭಾವ್ಯ ಅಕ್ಕಿ ಕೊರತೆಯ ಭಯದಲ್ಲಿ ಅಕ್ಕಿ ದಾಸ್ತಾನು ಮಾಡುವುದನ್ನು ತಡೆಯಲು ಹಾಗೂ ಎಲ್ಲರಿಗೂ ನ್ಯಾಯಯುತವಾಗಿ ಅಕ್ಕಿ ವಿತರಣೆ ಖಾತ್ರಿಪಡಿಸಲು ಒಬ್ಬ ವ್ಯಕ್ತಿಗೆ ಹೆಚ್ಚೆಂದರೆ ಐದು ಚೀಲಗಳನ್ನು( ಒಂದ್ಯ ಬ್ಯಾಗ್‌-25 ಕೆಜಿ ಅಕ್ಕಿ) ಮಾತ್ರ ವಿತರಿಸುತ್ತಿದ್ದಾರೆ. ಕೆಲವಡೆ ಕೇವಲ ಒಂದು ಚೀಲದ ಮಿತಿ ಹೇರುತ್ತಿದ್ದಾರೆ.
ಅಕ್ಕಿ ಕೊರತೆಯ ಭಯವು ಅಮೆರಿಕದ ಸೂಪರ್ಮಾರ್ಕೆಟುಗಳಿಗೆ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಸೀಮಿತ ಪೂರೈಕೆಯೊಂದಿಗೆ, ಕೆಲವು ಅಂಗಡಿಗಳು ಅಕ್ಕಿಯ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿ ಲಾಭ ಪಡೆಯುತ್ತಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement