ಮಣಿಪುರ ಹಿಂಸಾಚಾರ : ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಆಕೆಯ ಮನೆಯಲ್ಲೇ ಜೀವಂತ ದಹನ ಮಾಡಿದ ದುಷ್ಕರ್ಮಿಗಳು…

ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವು ದಿನಗಳ ನಂತರ ಮಣಿಪುರದಿಂದ ದುಃಖಕರ ಮತ್ತು ಊಹಿಸಲಾಗದ ಭಯಾನಕ ಕಥೆಗಳು ಹೊರಬರುತ್ತಲೇ ಇವೆ. ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಗುಂಪಿನಿಂದ 80 ವರ್ಷದ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಅವರ ಮನೆಯಲ್ಲಿ ಸಜೀವ ದಹನ ಮಾಡಲಾಗಿದೆ ಎಂದು ವರದಿಯಾಗಿದೆ.
ಎನ್‌ಡಿಟಿವಿ ವರದಿಯ ಪ್ರಕಾರ, ಸೆರೋ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ ಮೇ 28 ರಂದು ಕಾಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಶಸ್ತ್ರಸಜ್ಜಿತ ಗುಂಪು ಮಹಿಳೆಯನ್ನು ಅವಳ ಮನೆಯೊಳಗೆ ಕೂಡಿ ಹಾಕಿ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿತ್ತು. ಮಹಿಳೆಯ ದಿವಂಗತ ಪತಿ ಎಸ್ ಚುರಚಂದ್ ಸಿಂಗ್, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಸನ್ಮಾನ ಸ್ವೀಕರಿದವರಾಗಿದ್ದಾರೆ.
ಮೇ 3 ರಂದು ಮೈತೆಯ್‌ ಸಮುದಾಯ ಮತ್ತು ಕುಕಿ ಬುಡಕಟ್ಟು ಜನಾಂಗದ ನಡುವೆ ಮೈತೆಯಿಗಳಿವೆ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸ್ಥಾನಮಾನದ ಬೇಡಿಕೆಯ ಕುರಿತು ಉಂಟಾ ಜನಾಂಗೀಯ ಘರ್ಷಣೆಯ ಸಂದರ್ಭದಲ್ಲಿ ಸೆರೋವ್ ಗ್ರಾಮವು ಹೆಚ್ಚು ಬಾಧಿತ ಹಳ್ಳಿಗಳಲ್ಲಿ ಒಂದಾಗಿದೆ.
ಚುರಾಚಂದ್ ಸಿಂಗ್ ಅವರ ಪತ್ನಿ 80 ವರ್ಷದ ಇಬೆತೊಂಬಿ ಹಾಗೂ ಕುಟುಂಬದ ಮೇಲೆ ದಾಳಿ ನಡೆದಾಗ ಆಕೆ ಮನೆಯೊಳಗಿದ್ದಳು. ಶಸ್ತ್ರಸಜ್ಜಿತ ಗುಂಪು ಹೊರಗಿನಿಂದ ಬೀಗ ಹಾಕಿ ಮನೆಗೆ ಬೆಂಕಿ ಹಚ್ಚಿತು.
“ನಾವು ದಾಳಿಗೆ ಒಳಗಾದಾಗ, ನನ್ನ ಅಜ್ಜಿ ನಮಗೆ ಈಗ ಓಡಿಹೋಗುವಂತೆ ಸೂಚಿಸಿದರು ಮತ್ತು ಸ್ವಲ್ಪ ಸಮಯದ ನಂತರ ತನಗಾಗಿ ಹಿಂತಿರುಗಿ ಎಂದು ಹೇಳಿದಳು. ‘ನನಗಾಗಿ ನೀವು ಹಿಂತಿರುಗಿ ಎಂದು ನಾವು ಹೋಗುವಾಗ ಅವಳು ಹೇಳಿದಳು. ದುರದೃಷ್ಟವಶಾತ್, ಅದು ಅವಳ ಕೊನೆಯ ಮಾತುಗಳಾದವು ”ಎಂದು ಇಬೆತೊಂಬಿ ಅವರ ಮೊಮ್ಮಗ ಪ್ರೇಮಕಾಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement