ಅಯ್ಯೋ ರಾಮಾ….: ಆರ್‌ ಟಿ ಐ ಪ್ರಶ್ನೆಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದ ವ್ಯಕ್ತಿ ; ದಾಖಲೆ ಮನೆಗೆ ಒಯ್ಯಲು ಕಾರನ್ನೇ ತರಬೇಕಾಯ್ತು…!

ಇಂದೋರ್ : ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ…! ಅವರು ಉತ್ತರದ ಪ್ರತಿ ತೆಗೆದುಕೊಳ್ಳಲು ಹೋಗಿ ವಾಪಸ್‌ ಬರುವಾಗ ಅವರ ಎಸ್‌ಯುವಿ ಕಾರ್‌ ಉತ್ತರ ನೀಡಿದ ಪುಟಗಳಿಂದ ತುಂಬಿ ಹೋಗಿತ್ತು ಎಂದು ವರದಿಯಾಗಿದೆ.
ಆರ್‌ ಟಿಐ ಅರ್ಜಿಗೆ ಒಂದು ತಿಂಗಳೊಳಗೆ ಉತ್ತರಿಸದ ಕಾರಣ ಪ್ರತಿ ಪುಟಕ್ಕೆ ನಿಗದಿಪಡಿಸಿದ ₹ 2 ಅನ್ನು ಅರ್ಜಿದಾರರಾದ ಧರ್ಮೇಂದ್ರ ಶುಕ್ಲಾ ಅವರ ಮನವಿಗೆ ಪಾವತಿಸಲಿಲ್ಲ.
ಕೋವಿಡ್‌-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್‌ಗಳು ಮತ್ತು ಬಿಲ್ ಪಾವತಿಗಳ ವಿವರಗಳನ್ನು ಕೋರಿ ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಗೆ ನಾನು ಆರ್‌ಟಿಐ (RTI) ಮನವಿಯನ್ನು ಸಲ್ಲಿಸಿದ್ದೆ” ಎಂದು ಶುಕ್ಲಾ ಶನಿವಾರ ಹೇಳಿದರು.

ತನಗೆ ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣ, ತಾನು ಮೊದಲ ಮೇಲ್ಮನವಿ ಅಧಿಕಾರಿ ಡಾ. ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದೆ., ಅವರು ಮನವಿಯನ್ನು ಸ್ವೀಕರಿಸಿದರು ಮತ್ತು ತನಗೆ ಉಚಿತವಾಗಿ ಮಾಹಿತಿಯನ್ನು ನೀಡುವಂತೆ ಸೂಚಿಸಿದರು ಎಂದು ಶುಕ್ಲಾ ಹೇಳಿದ್ದಾರೆ.
“ನಾನು ದಾಖಲೆಗಳನ್ನು ತರಲು ನನ್ನ ಎಸ್‌ಯುವ ಕಾರ್‌ ವಾಹನದಲ್ಲಿ ಹೋಗಿದ್ದೆ ಮತ್ತು ಇಡೀ ವಾಹನವು ಅವರು ನೀಡಿದ್ದ ಉತ್ತರದ ಪುಟಗಳಿಂದ ತುಂಬಿ ಹೋಗಿತ್ತು. ಚಾಲಕನ ಸೀಟ್ ಮಾತ್ರ ಖಾಲಿ ಇತ್ತು ಎಂದು ಅವರು ಹೇಳಿದರು.
ಮೇಲ್ಮನವಿ ಅಧಿಕಾರಿ ಮತ್ತು ರಾಜ್ಯ ಆರೋಗ್ಯ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ, ಮಾಹಿತಿಯನ್ನು ಉಚಿತವಾಗಿ ನೀಡುವಂತೆ ಆದೇಶಿಸಿದ್ದಾಗಿ ಹೇಳಿದರು.
ಸಕಾಲದಲ್ಲಿ ಮಾಹಿತಿ ನೀಡದ ಕಾರಣ ರಾಜ್ಯದ ಬೊಕ್ಕಸಕ್ಕೆ ₹ 80,000 ನಷ್ಟ ಉಂಟಾದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ಸೂಚಿಸಿರುವುದಾಗಿ ಡಾ.ಗುಪ್ತಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement