46,000 ವರ್ಷಗಳ ಕಾಲ ಹೆಪ್ಪುಗಟ್ಟಿದ್ದ ಹುಳುಗಳನ್ನು ಪುನಶ್ಚೇತನಗೊಳಿಸಿದ ವಿಜ್ಞಾನಿಗಳು | ವೀಡಿಯೊ

46,000 ವರ್ಷಗಳ ಹಿಂದೆ ಹೆಪ್ಪುಗಟ್ಟಿದ ಹುಳುಗಳನ್ನು ವಿಜ್ಞಾನಿಗಳು ಪುನರುಜ್ಜೀವನಗೊಳಿಸಿದ್ದಾರೆ.
ಈ ಹಿಂದೆ ಅಪರಿಚಿತ ಜಾತಿಯ ರೌಂಡ್‌ವರ್ಮ್, ಸೈಬೀರಿಯನ್ ಪರ್ಮಾಫ್ರಾಸ್ಟ್‌ನಲ್ಲಿ ಮೇಲ್ಮೈಯಿಂದ 40 ಮೀಟರ್ (131.2 ಅಡಿ) ಕೆಳಗೆ ಕ್ರಿಪ್ಟೋಬಯೋಸಿಸ್ ಎಂದು ಕರೆಯಲ್ಪಡುವ ಸುಪ್ತ ಸ್ಥಿತಿಯಲ್ಲಿತ್ತು ಎಂದು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಸೆಲ್ ಬಯಾಲಜಿ ಮತ್ತು ಜೆನೆಟಿಕ್ಸ್‌ನ ಪ್ರೊಫೆಸರ್ ಎಮೆರಿಟಸ್ ಹಾಗೂ ಡೆಸ್ಡೆನ್‌ನಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿ ಹೇಳಿದ್ದಾರೆ.
ಜೀವಿಗಳು, ಕ್ರಿಪ್ಟೋಬಯೋಟಿಕ್ ಸ್ಥಿತಿಯಲ್ಲಿದ್ದಾಗ, ಅವುಗಳು ನೀರು ಅಥವಾ ಆಮ್ಲಜನಕ ಸಂಪೂರ್ಣವಾಗಿ ಇಲ್ಲದ ಸ್ಥಿತಿಯನ್ನು ಸಹಿಸಿಕೊಳ್ಳಬಲ್ಲವು. ಮತ್ತು ಹೆಚ್ಚಿನ ಉಷ್ಣತೆ ಅಥವಾ ಹೆಪ್ಪುಗಟ್ಟಿಸುವ ತೀವ್ರ ಶೀತದ ತಾಪಮಾನಗಳು ಮತ್ತು ಅತ್ಯಂತ ಉಪ್ಪು ಪ್ರದೇಶದ ಪರಿಸ್ಥಿತಿಗಳಲ್ಲಿಯೂ ಅವುಗಳಿಗೆ ಬದುಕಲು ಸಾಧ್ಯವಾಗುತ್ತದೆ. ಜೀವಿಗಳು “ಸಾವು ಮತ್ತು ಜೀವ ಇದರ ಮಧ್ಯದ” ಸ್ಥಿತಿಯಲ್ಲಿ ಉಳಿಯುತ್ತವೆ ಇದರಲ್ಲಿ ಅವರ ಚಯಾಪಚಯ ದರಗಳಲ್ಲಿ ಕಂಡುಹಿಡಿಯಲಾಗದ ಮಟ್ಟಕ್ಕೆ ಇಳಿಕೆ ಕಂಡುಬರುತ್ತದೆ ಎಂದು ವಿಜ್ಞಾನಿ ಕುರ್ಜ್ಚಾಲಿಯಾ ವಿವರಿಸಿದ್ದಾರೆ.
ಒಂದು ಜೀವಿಯ ಜೀವನ ನಿಲ್ಲಿಸಬಹುದು ಮತ್ತು ನಂತರ ಅದನ್ನು ಮೊದಲಿನಿಂದ ಪ್ರಾರಂಭಿಸಬಹುದು. ಇದು ಒಂದು ಪ್ರಮುಖ ಆವಿಷ್ಕಾರವಾಗಿದೆ” ಎಂದು ಅವರು ಹೇಳಿದರು, ಈ ಸ್ಥಿತಿಯಿಂದ ಹಿಂದೆ ಪುನರುಜ್ಜೀವನಗೊಂಡ ಇತರ ಜೀವಿಗಳು ದಶಕಗಳವರೆಗೆ ಉಳಿದುಕೊಂಡಿವೆ ಎಂದು ಅವರು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಸೈಬೀರಿಯನ್ ಪರ್ಮಾಫ್ರಾಸ್ಟ್‌ನಲ್ಲಿ ಹುಳುಗಳನ್ನು ಕಂಡುಹಿಡಿಯಲಾಯಿತು
ಐದು ವರ್ಷಗಳ ಹಿಂದೆ ರಷ್ಯಾದಲ್ಲಿ ಇನ್ಸ್ಟಿಟ್ಯೂಟ್ ಆಫ್ ಫಿಸಿಕೋಕೆಮಿಕಲ್ ಮತ್ತು ಜೈವಿಕ ಸಮಸ್ಯೆಗಳ ಮಣ್ಣಿನ ವಿಜ್ಞಾನದ (Institute of Physicochemical and Biological Problems in Soil Science) ವಿಜ್ಞಾನಿಗಳು ಸೈಬೀರಿಯನ್ ಪರ್ಮಾಫ್ರಾಸ್ಟ್‌ ನಲ್ಲಿ ಎರಡು ರೌಂಡ್ ವರ್ಮ್ ಜಾತಿ ಹುಳಗಳನ್ನು ಪತ್ತೆ ಮಾಡಿದರು.
ಸಂಸ್ಥೆಯಲ್ಲಿನ ಎರಡು ಹುಳುಗಳನ್ನು ಸರಳವಾಗಿ ನೀರಿನಿಂದ ಪುನರ್ಜಲೀಕರಣ ಮಾಡುವ ಮೂಲಕ ಪುನರುಜ್ಜೀವನಗೊಳಿಸಲು ಸಂಶೋಧಕರಾದ ಅನಸ್ತಾಸಿಯಾ ಶಟಿಲೋವಿಚ್ ಅವರಿಗೆ ಸಾಧ್ಯವಾಯಿತು ಮತ್ತು ನಂತರ ಹೆಚ್ಚಿನ ವಿಶ್ಲೇಷಣೆಗಾಗಿ ಸುಮಾರು 100 ಹುಳುಗಳನ್ನು ತಮ್ಮ ಜೇಬಿನಲ್ಲಿ ಜರ್ಮನಿಯ ಲ್ಯಾಬ್‌ಗಳಿಗೆ ಅವರು ತೆಗೆದುಕೊಂಡು ಹೋದರು.
ಎರಡು ಜೀವಿಗಳು ಟ್ರೆಹಲೋಸ್ ಎಂಬ ಸಕ್ಕರೆಯನ್ನು ಉತ್ಪತ್ತಿ ಮಾಡುತ್ತವೆ, ಇದು ಘನೀಕರಣ ಮತ್ತು ನಿರ್ಜಲೀಕರಣವನ್ನು ಸಹಿಸಿಕೊಳ್ಳಲು ಅವುಗಳಿಗೆ ಅನುವು ಮಾಡಿಕೊಡುತ್ತದೆ.

20, 30 ಕೋಟಿ ವರ್ಷಗಳಷ್ಟು ಹಿಂದಿನ ಜಾತಿಯ ಜೀವಿಗಳು ಅದೇ ಜೀವರಾಸಾಯನಿಕ ವಿಧಾನವನ್ನು ಬಳಸಿವೆಯೇ ಎಂದು ನೋಡಲು, ಇದು ನಿಜವಾಗಿಯೂ ಗಮನಾರ್ಹವಾಗಿದೆ” ಎಂದು ಕಲೋನ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸಂಸ್ಥೆಯ ಸಂಶೋಧನಾ ಗುಂಪಿನ ನಾಯಕ ಫಿಲಿಪ್ ಸ್ಕಿಫರ್ ಹೇಳಿದ್ದಾರೆ. “ಅಂದರೆ ವಿಕಾಸದಲ್ಲಿ ಕೆಲವು ಪ್ರಕ್ರಿಯೆಗಳು ಬಲವಾಗಿ ಸಂರಕ್ಷಿಸಲ್ಪಟ್ಟಿವೆ” ಎಂದು ಅವರು ಹೇಳಿದರು.
“ಈ ಪ್ರಾಣಿಗಳನ್ನು ನೋಡುವ ಮತ್ತು ವಿಶ್ಲೇಷಿಸುವ ಮೂಲಕ, ನಾವು ಸಂರಕ್ಷಣಾ ಜೀವಶಾಸ್ತ್ರವನ್ನು ತಿಳಿಸಬಹುದು, ಅಥವಾ ಇತರ ಜಾತಿಗಳನ್ನು ರಕ್ಷಿಸುವ ಪ್ರಯತ್ನಗಳನ್ನು ಅಭಿವೃದ್ಧಿಪಡಿಸಬಹುದು, ಅಥವಾ ನಾವು ಈಗ ಹೊಂದಿರುವ ಈ ವಿಪರೀತ ಪರಿಸ್ಥಿತಿಗಳಲ್ಲಿ ಅವುಗಳನ್ನು ರಕ್ಷಿಸಲು ಏನು ಮಾಡಬೇಕೆಂದು ಕಲಿಯಬಹುದು ಎಂದು ಫಿಲಿಪ್ ಸ್ಕಿಫರ್ ಸಿಎನ್‌ಎನ್‌ಗೆ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement