ಕುಟುಂಬದವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವಾಗ ಕಣ್ಣುಬಿಟ್ಟ ಬಿಜೆಪಿ ನಾಯಕ…!

ಆಗ್ರಾ: ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಅವರ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸುತ್ತಿರುವ ವೇಳೆ ಅವರು ಎಚ್ಚರಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಹೇಶ ಬಾಘೇಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು, ಮೊದಲು ಜೀವವಿರುವ ಯಾವುದೇ ಲಕ್ಷಣವನ್ನು ತೋರಿಸದ ಬಾಘೆಲ್ ಅವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಹೀಗಾಗಿ ಕರೆದುಕೊಂಡು ಹೋಗಿ ಎಂದು ಹೇಳಿದರು. ಹೀಗಾಗಿ ಅವರ ಕುಟುಂಬಸ್ಥರು ಅವರನ್ನು ಮನೆಗೆ ಕರೆತಂದು, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಸುಮಾರು ಅರ್ಧ ಗಂಟೆ ಬಳಿಕ ಅವರ ದೇಹದಲ್ಲಿ ಸಣ್ಣನೆ ಚಲನೆ ಇರುವುದನ್ನು ಕೆಲವರು ಗಮನಿಸಿದರು. ಕೂಡಲೇ ಮತ್ತೆ ಆಸ್ಪತ್ರೆಗೆ ಕರೆದೊಯ್ದರು. ಮಹೇಶ ಬಾಘೇಲ್ ಅವರು ಇನ್ನೂ ಜೀವಂತವಾಗಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಯಿತು.

ಸ್ಥಳೀಯ ಆಸ್ಪತ್ರೆ ಮಹೇಶ ಬಾಘೇಲ್ ಅವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೂ ಅವರಿಗೆ ಜೀವ ಇರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರಿಂದ ಅವರ ‘ಶರೀರ’ವನ್ನು ಸರೈ ಕ್ವಾಜಾದಲ್ಲಿನ ಅವರ ನಿವಾಸಕ್ಕೆ ಕರೆ ತರಲಾಗಿತ್ತು. ಅವರನ್ನು ಕಳೆದುಕೊಂಡ ದುಃಖದಲ್ಲಿ ಕುಂಟುಂಬಸ್ಥರು ಹಾಗೂ ಸಂಬಂಧಿಕರು ರೋಧಿಸುತ್ತಿದ್ದರು. ಆದರೆ ಅವರು ಕಣ್ಣು ತೆರೆದರು ಹಾಗೂ ದೇಹದಲ್ಲಿ ಚಲನವಲನ ಕಂಡು ಕುಟುಂಬಸ್ಥರು ಅವಾಕ್ಕಾದರು. ಅವರನ್ನು ತಕ್ಷಣವೇ ನ್ಯೂ ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

ಬಿಜೆಪಿಯ ಮಾಜಿ ಜಿಲ್ಲಾ ಮುಖ್ಯಸ್ಥ ಮಹೇಶ ಬಘೇಲ್ ದಾಖಲಾಗಿರುವ ಸ್ಥಳೀಯ ಆಸ್ಪತ್ರೆಯ ವೈದ್ಯರು ಕುಟುಂಬ ಸದಸ್ಯರಿಗೆ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಮತ್ತು ಅವರನ್ನು ಮನೆಗೆ ಕರೆದೊಯ್ಯುವುದು ಉತ್ತಮ ಎಂದು ಹೇಳಿದ ನಂತರ ಕುಟುಂಬದ ಸದಸ್ಯರು ವೈದ್ಯರ ಸೂಚನೆಗಳನ್ನು ಅನುಸರಿಸಿ, ಅವರು ಜೀವ ಇರುವ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ ಅವರು ಸತ್ತಿದ್ದಾರೆ ಎಂದು ಭಾವಿಸಿದರು. ಕುಟುಂಬದ ಸದಸ್ಯರು ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆ ನಡೆಸಿದರು. ಆದರೆ ಅವರ ದೇಹದಲ್ಲಿ ಕೆಲವು ಚಲನೆ ಕಂಡುಬಂದಿತು ಮತ್ತು ಆದ್ದರಿಂದ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ಅವರ ಸಹೋದರ ಹೇಳಿದರು.
ಅವರಿಗೆ ಎದೆಯ ಸೋಂಕು ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಾಘೇಲ್ ಅವರ ಗಮನಾರ್ಹ ‘ಪುನರುಜ್ಜೀವನ’ ಘಟನೆಯ ನಂತರ, ಅನೇಕ ಸ್ಥಳೀಯ ಬಿಜೆಪಿ ನಾಯಕರು ಆಸ್ಪತ್ರೆಯಲ್ಲಿ ಜಮಾಯಿಸಿದರು ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement