ರಸ್ತೆ ಮಧ್ಯದಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಚಿರತೆ ಮೇಲೆಯೇ ಪ್ರತಿದಾಳಿ ಮಾಡಿದ ಬಬೂನ್‌(ಮಂಗ)ಗಳು : ಕಂಗಾಲಾಗಿ ಕಾಲ್ಕಿತ್ತ ಚಿರತೆ | ವೀಕ್ಷಿಸಿ

ವನ್ಯಜೀವಿಗಳ ಬೆರಗುಗೊಳಿಸುವ ವೈವಿಧ್ಯತೆಯು ಸಾಮಾನ್ಯವಾಗಿ ನಮ್ಮ ಆಲೋಚನೆಗಳು ಹಾಗೂ ಕಲ್ಪನೆಗಳನ್ನೂ ಮೀರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಸುಮಾರು 50 ಬಬೂನ್‌ಗಳು (ಮಂಗನ ಒಂದು ಪ್ರಭೇದ) ಚಿರತೆಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಈ ವಿದ್ಯಮಾನಕ್ಕೆ ಪುರಾವೆಯನ್ನು ಒದಗಿಸಿದೆ.
ರಸ್ತೆಯ ಮಧ್ಯದಲ್ಲಿ ಸಂಭವಿಸಿದ ಚಿರತೆ-ಬಬೂನ್‌ಗಳ ಸಂಂಘರ್ಷದ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಪೋಸ್ಟ್‌ನ ವಿವರಣೆಯಲ್ಲಿ, ವೀಡಿಯೊವನ್ನು ಆರಂಭದಲ್ಲಿ ರಿಕಿ ಡಾ ಫೋನ್ಸೆಕಾ ಅವರು ಹಂಚಿಕೊಂಡಿದ್ದಾರೆ ಎಂದು ಚಾನಲ್ ಗಮನಿಸಿದೆ.
ಚಿರತೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ, ಪ್ರಾಯಶಃ ಬೇಟೆ ಹುಡುಕುತ್ತ ನಡೆದುಕೊಂಡು ಹೋಗುತ್ತಿದೆ. ಮುಂದಿನ ದೃಶ್ಯದಲ್ಲಿ, ಬಬೂನ್‌ಗಳ ಗುಂಪು ರಸ್ತೆಯ ಮಧ್ಯದಲ್ಲಿ ಓಡಾಡುವುದನ್ನು ಗಮನಿಸಬಹುದು. ಸ್ವಲ್ಪ ಹೊತ್ತಿನ ನಂತರ ಚಿರತೆ ಈ ಗುಂಪಿನ ಕಡೆಗೆ ದಾಳಿ ಮಾಡುತ್ತದೆ, ಬಹುಶಃ ಅದಕ್ಕೆ ತಾನು ಬಬೂನ್ ಪಡೆಗಳನ್ನು ಮೀರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ನಂಬಿಕೆ. ಆದರೆ ಅದಕ್ಕೆ ತನ್ನ ತಪ್ಪಿನ ಅರಿವು ತಕ್ಷಣಕ್ಕೆ ಆಗಿದೆ.
ಸಂಖ್ಯಾ ಬಲ ಹೊಂದಿದ್ದ ಬಬೂನ್‌ಗಳು ಪ್ರತಿದಾಳಿ ನಡೆಸಿದವು. ಚಿರತೆಯ ಮೇಲೆ ಅಕ್ಷರಶಃ ಮುಗಿಬಿದ್ದವು. ಏನಾಗುತ್ತದೆ ಎಂದು ಚಿರತೆ ಅರಿತುಕೊಳ್ಳುವಷ್ಟರಲ್ಲಿಯೇ ಹತ್ತಾರು ಬಬೂನ್‌ಗಳು ಚಿರತೆಯನ್ನು ಹಣ್ಣುಗಾಯಿ-ನೀರುಗಾಯಿ ಮಾಡಿದ್ದವು. ಬಬೂನ್‌ಗಳ ನಿರ್ದಯ ದಾಳಿಗೆ ಬೆದರಿದ ಚಿರತೆ ಬದುಕಿದೆಯಾ ಬಡ ಜೀವವೇ ಎಂಬಂತೆ ಬಬೂನ್‌ಗಳಿಂದ ಹೇಗೋ ತಪ್ಪಿಸಿಕೊಂಡು ಪಲಾಯನ ಮಾಡಿತು.

ಆದರೂ ಬಿಡದ ಬಬೂನ್‌ಗಳು ಸ್ವಲ್ಪದೂರದ ವರೆಗೆ ಚಿರತೆಯನ್ನು ಹಿಂಬಾಲಿಸಿದವು. ಆದರೆ ಅಲ್ಲಿಂದ ಮಂಗಮಾಯವಾಗಿತ್ತು. ಆರಂಭದಲ್ಲಿ ಬೆದರಿದಂತೆ ಕಂಡುಬಂದ ಬಬೂನ್‌ಗಳಲ್ಲಿ ಒಂದು ಬಬೂನ್‌ ಪ್ರತಿದಾಳಿ ಮಾಡಿದ್ದೆ ತಡ, ಎಲ್ಲವೂ ಚಿರತೆ ಮೇಲೆ ಮುಗಿಬಿದ್ದ ಈ ಪೋಸ್ಟ್ ಅನ್ನು ಆಗಸ್ಟ್ 15 ರಂದು ಹಂಚಿಕೊಳ್ಳಲಾಗಿದೆ.. ವನ್ಯಜೀವಿಗಳ ಈ ಅನಿರೀಕ್ಷಿತ ಘಟನೆಯು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪೋಸ್ಟ್ ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement