ವೀಡಿಯೊ…: ಎರಡು ಮನೆಯ ಸಾಕು ನಾಯಿಗಳ ಜಗಳ : ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ, 6 ಜನರಿಗೆ ಗಾಯ

ಇಂದೋರ್‌: ಸಾಕುನಾಯಿಗಳ ನಡುವೆ ನಡೆದ ಕಾದಾಟವು ಅವುಗಳ ಮಾಲೀಕರ ನಡುವಿನ ಜಗಳಕ್ಕೆ ಕಾರಣವಾಗಿ ಇದು ಗುರುವಾರ ಇಬ್ಬರ ಸಾವಿನಲ್ಲಿ ಅಂತ್ಯಗೊಂಡ ಘಟನೆ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ರಾಜಪಾಲ್ ಸಿಂಗ್ ರಜಾವತ್ ಗುರುವಾರ ರಾತ್ರಿ ತನ್ನ ಮನೆಯ ಬಾಲ್ಕನಿಯಿಂದ ಅಕ್ಕಪಕ್ಕದವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.
ರಜಾವತ್ ಮತ್ತು ಅವರ ಪಕ್ಕದ ಮನೆಯ ವಿಮಲ್ ಅಚಲ (35) ಅವರು ಗುರುವಾರ ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ರಸ್ತೆಯಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎರಡು ನಾಯಿಗಳು ಪರಸ್ಪರ ಕಾದಾಟ ನಡೆಸಿದವು. ಇದು ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೋಪಗೊಂಡ ರಜಾವತ್‌   ಮೊದಲ ಮಹಡಿಯ ಮನೆಗೆ ಹೋಗಿ 12-ಬೋರ್ ರೈಫಲ್ ಬಳಸಿ ವಿಮಲ ಅಚಲ್‌ ಮೇಲೆ ಗುಂಡು ಹಾರಿಸಿದ್ದಾನೆ.

ಭೀಕರ ಗುಂಡಿನ ದಾಳಿಯ ವೀಡಿಯೊವು ರಜಾವತ್‌ ಮೊದಲು ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸುವುದನ್ನು ತೋರಿಸುತ್ತದೆ. ನಂತರ ಜನರತ್ತ ಗುಂಡು ಹಾರಿಸಿದ್ದಾನೆ. ನಗರದ ನಿಪಾನಿಯಾ ಪ್ರದೇಶದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಅಚಲ, ಮತ್ತೊಬ್ಬ ನೆರಮನೆಯವನಾದ 27 ವರ್ಷದ ರಾಹುಲ್ ವರ್ಮಾ ಎಂಬಾತ ಹತ್ಯೆಗೀಡಾದವರು. ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಗುಂಡುಹಾರಿಸಿದಾಗ ಬೀದಿಯಲ್ಲಿದ್ದ ಇತರ ಆರು ಮಂದಿಗೂ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಜಾವತ್‌, ಆತನ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಗ್ವಾಲಿಯರ್ ಮೂಲದ ರಜಾವತ್ ಪರವಾನಗಿ ಪಡೆದ 12-ಬೋರ್ ರೈಫಲ್ ಅನ್ನು ಹೊಂದಿದ್ದರಿಂದ ಇಂದೋರ್‌ನಲ್ಲಿ ಖಾಸಗಿ ಸಂಸ್ಥೆಯೊಂರಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement