ಅಮೆರಿಕದ ಮೃಗಾಲಯದಲ್ಲಿ ವಿಶಿಷ್ಟ ಜಿರಾಫೆ ಜನನ

ನ್ಯೂಯಾರ್ಕ್: ಅಮೆರಿಕದ ಟೆನ್ನೆಸ್ಸಿಯಲ್ಲಿರುವ ಬ್ರೈಟ್ಸ್ ಮೃಗಾಲಯದಲ್ಲಿ ಅಪರೂಪದ ಜಿರಾಫೆಯೊಂದು ಜನಿಸಿದೆ.
ಸಾಮಾನ್ಯವಾಗಿ ಜಿರಾಫೆ ದೇಹದ ತುಂಬಾ ಆಕರ್ಷಕ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕೆಗಳು ಅಥವಾ ತೇಪೆಗಳನ್ನು ಕಾಣುತ್ತೇವೆ ಆದರೆ ಈ ಜಿರಾಫೆಯು ತನ್ನ ದೇಹದಲ್ಲಿ ಒಂದೇ ಒಂದು ಚುಕ್ಕೆ ಅಥವಾ ತೇಪೆಗಳಿಲ್ಲದೆ ಜನಿಸಿದೆ.
ಜುಲೈ 31 ರಂದು ಜನಿಸಿದ ಜಿರಾಫೆಗೆ ಇನ್ನೂ ಹೆಸರಿಡಲಾಗಿಲ್ಲ. ಇಡೀ ದೇಹ ಒಂದೇ ತೆರನಾದ ಕಂದು ಬಣ್ಣ ಇರುವ ಈ ಹೆಣ್ಣು ಜಿರಾಫೆಯ ದೇಹದಲ್ಲಿ ಯಾವುದೇ ಚುಕ್ಕೆಗಳು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಇಂತಹ ಜಿರಾಫೆಯನ್ನು ನಾವು ನೋಡಿಲ್ಲ ಹಾಗೂ ಈ ಬಗ್ಗೆ ಕೇಳಿಲ್ಲ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಜಿರಾಫೆ ಅಪರೂಪದಲ್ಲಿ ಅಪರೂಪ ಎಂದು ಹೇಳಲಾಗುತ್ತದೆ. ಸದ್ಯ ಈ ಜಿರಾಫೆ ಆರು ಅಡಿ ಎತ್ತರವಿದೆ. ಪ್ರಸ್ತುತ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದೆ.
೨೦೧೮ ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್ ಅನ್ನು ಉಲ್ಲೇಖಿಸಿ, ಯುಎಸ್‌ಎ ಟುಡೆ ಇದು ರೆಟಿಕ್ಯುಲೇಟೆಡ್ ಜಿರಾಫೆ ಮತ್ತು ಅಳಿವಿನಂಚಿನಲ್ಲಿರುವ ಜಾತಿಗೆ ಸೇರಿದೆ ಎಂದು ಹೇಳಿದೆ. ಜಿರಾಫೆಗಳು ವೇಗವಾಗಿ ಕಣ್ಮರೆಯಾಗುತ್ತಿದ್ದು, ಕಳೆದ ಮೂರು ದಶಕಗಳಲ್ಲಿ ಶೇ.40ರಷ್ಟು ಜಿರಾಫೆಗಳು ಕಣ್ಮರೆಯಾಗಿವೆ ಎಂದು ಬ್ರೈಟ್ಸ್ ಮೃಗಾಲಯದ ಸಂಸ್ಥಾಪಕ ಟೋನಿ ಬ್ರೈಟ್ ಹೇಳಿದ್ದಾರೆ. ಹೆಣ್ಣು ಜಿರಾಫೆಗಳು 17 ಅಡಿ ಎತ್ತರಕ್ಕೆ ಬೆಳೆಯುತ್ತವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement