ಪಾಕಿಸ್ತಾನದ ಸೀಮಾ ಹೈದರ್ ನಂತರ, ಈಗ ತನ್ನ ಮಗುವಿನೊಂದಿಗೆ ನೋಯ್ಡಾಕ್ಕೆ ಬಂದ ಬಾಂಗ್ಲಾದೇಶದ ಮಹಿಳೆ

ನೋಯ್ಡಾ: ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಸುತ್ತಲಿನ ವಿವಾದ ಬಗೆಹರಿಯುವ ಮುನ್ನವೇ ಬಾಂಗ್ಲಾದೇಶದ ಮತ್ತೊಬ್ಬ ಮಹಿಳೆ ತನ್ನ ಅಪ್ರಾಪ್ತ ಪುತ್ರನೊಂದಿಗೆ ಭಾರತಕ್ಕೆ ಆಗಮಿಸಿದ್ದಾಳೆ ಹಾಗೂ ತನ್ನನ್ನು ತೊರೆದು ಬಂದ ತನ್ನ ಭಾರತೀಯ ಪತಿಯನ್ನು ಹುಡುಕುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರನ್ನು ಸಂಪರ್ಕಿಸಿರುವ ಬಾಂಗ್ಲಾದೇಶದ ಮಹಿಳೆಯೊಬ್ಬರು ನೋಯ್ಡಾದಲ್ಲಿ ವಾಸಿಸುವ ತನ್ನ ಪತಿಯೊಂದಿಗೆ ವಾಸಿಸಲು ಬಯಸುವುದಾಗಿ ಹೇಳಿದ್ದಾಳೆ. ಮಹಿಳೆ ತನ್ನನ್ನು ಢಾಕಾ ನಿವಾಸಿ ಸೋನಿಯಾ ಅಖ್ತರ್ ಎಂದು ಹೇಳಿಕೊಂಡಿದ್ದಾಳೆ ಮತ್ತು ಅವಳ ಪತಿ ಸೌರಭ್ ಕಾಂತ್ ತಿವಾರಿ ಎಂದು ಹೇಳಿದ್ದು, ಆತ ಸುಮಾರು ಮೂರು ವರ್ಷಗಳ ಹಿಂದೆ ಢಾಕಾದಲ್ಲಿ ಮದುವೆಯಾಗಿ ನಂತರ ನನ್ನನ್ನು ತೊರೆದಿರುವುದಾಗಿ ಹೇಳಿದ್ದಾರೆ.
ಅವರು ವಾಪಸ್‌ ಬಾಂಗ್ಲಾದೇಶಕ್ಕೆ ಹಿಂತಿರುಗಲು ವಿಫಲವಾದಾಗ, ತಾನು ಮೊಬೈಲ್ ಫೋನ್‌ಗಳ ಮೂಲಕ ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಿಸಿದೆ, ಆದರೆ ಎಲ್ಲಾ ಸಂಖ್ಯೆಗಳು ನಾಟ್‌ ರೀಚೇಬಲ್‌ ಆಗಿದ್ದವು. ಸೀಮಾ ಹೈದರ್ ಘಟನೆ ನಂತರ ಸೋನಿಯಾ ವೀಸಾದ ಸಹಾಯದಿಂದ ಭಾರತಕ್ಕೆ ಬರಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ.
“ಅವರು ಈಗ ಸೆಂಟ್ರಲ್ ನೋಯ್ಡಾದ ಸೂರಜ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಈಗ ಒಪ್ಪುತ್ತಿಲ್ಲ, ಅವರು ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ. ನಾನು ಬಾಂಗ್ಲಾದೇಶಿ. ನಾವು ಸುಮಾರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ನಾನು ನಮ್ಮ ಮಗುವಿನೊಂದಿಗೆ ನನ್ನ ಪತಿ ಜೊತೆ ಇರಲು ಬಯಸುತ್ತೇನೆ” ಎಂದು ಸೋಮವಾರ ಪೊಲೀಸರ ಬೆಂಗಾವಲಿನೊಂದಿಗೆ ಇದ್ದ ಸೋನಿಯಾ ಅಖ್ತರ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಆಕೆಯ ದೂರಿನ ಆಧಾರದ ಮೇಲೆ ನೋಯ್ಡಾ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆಯು ಇಲ್ಲಿನ ಸೂರಜ್‌ಪುರ ಪ್ರದೇಶದಲ್ಲಿ ವಾಸಿಸುವ ಸೌರಭ್ ಕಾಂತ್ ತಿವಾರಿ ಅವರನ್ನು ವಿವಾಹವಾಗಿರುವುದಾಗಿ ಇಲ್ಲಿನ ಮಹಿಳಾ ಠಾಣೆಗೆ ತಿಳಿಸಿದ್ದಾರೆ. ಮದುವೆಯಾದ ನಂತರ ಅವರು ಮಹಿಳೆಯನ್ನು ತೊರೆದು ಭಾರತಕ್ಕೆ ಮರಳಿದ್ದಾರೆ. ಹಾಗೂ ತಿವಾರಿ ಈಗಾಗಲೇ ಮದುವೆಯಾಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ” ಎಂದು ಹೆಚ್ಚುವರಿ ಡಿಸಿಪಿ (ಸೆಂಟ್ರಲ್ ನೋಯ್ಡಾ) ರಾಜೀವ ದೀಕ್ಷಿತ್ ಹೇಳಿದರು.
ಮಹಿಳೆ ತನ್ನ ಬಾಂಗ್ಲಾದೇಶದ ಪೌರತ್ವ ಕಾರ್ಡ್‌ನೊಂದಿಗೆ ತನ್ನ ಮತ್ತು ತನ್ನ ಮಗುವಿನ ವೀಸಾ, ಪಾಸ್‌ಪೋರ್ಟ್ ವಿವರಗಳನ್ನು ಒದಗಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನೋಯ್ಡಾದ ನಿವಾಸಿ ಸೌರವ್ ಕಾಂತ್ ತಿವಾರಿ ಬಾಂಗ್ಲಾದೇಶದಲ್ಲಿ ತನ್ನನ್ನು ವಿವಾಹವಾದರು. ತಿವಾರಿ, ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪ್ರೀತಿಸಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವುದಾಗಿ ಹೇಳಿದ್ದಾರೆ. ತಾನು ಗರ್ಭಧರಿಸಿದ ನಂತರ, ಕೆಲವು ಪ್ರಮುಖ ಕೆಲಸಗಳನ್ನು ಮುಗಿಸಿ ಹಿಂತಿರುಗುವುದಾಗಿ ಭರವಸೆ ನೀಡಿ ಭಾರತಕ್ಕೆ ತೆರಳಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಪ್ರಾಥಮಿಕವಾಗಿ, ಅವರಿಬ್ಬರೂ ಬಾಂಗ್ಲಾದೇಶದಲ್ಲಿ ವಿವಾಹವಾದರು ಎಂದು ತೋರುತ್ತಿದೆ. ಆದಾಗ್ಯೂ, ತನಿಖೆಯನ್ನು ಎಸಿಪಿ (ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ) ಗೆ ಹಸ್ತಾಂತರಿಸಲಾಗಿದೆ ಆದ್ದರಿಂದ ಪ್ರಕರಣದ ಎಲ್ಲಾ ವಿವರಗಳನ್ನು ನೋಡಲಾಗುತ್ತಿದೆ ಮತ್ತು ಅದರ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದೀಕ್ಷಿತ್ ಹೇಳಿದರು.
ಪೋಲೀಸರ ಪ್ರಕಾರ, ಸೌರಭ್ ಕಾಂತ್ ತಿವಾರಿ ಅವರು ಬಾಂಗ್ಲಾದೇಶದ ಢಾಕಾದಲ್ಲಿ ಜನವರಿ 4, 2017 ರಿಂದ ಡಿಸೆಂಬರ್ 24, 2021 ರವರೆಗೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಅವರು ಏಪ್ರಿಲ್ 14, 2021 ರಂದು ವಿವಾಹವಾದರು, ಅವರು ಈಗಾಗಲೇ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ಗ್ರೇಟರ್ ನೋಯ್ಡಾದಲ್ಲಿ ನೆಲೆಸಿರುವ ತನ್ನ ಪ್ರಿಯಕರನೊಂದಿಗೆ ವಾಸಿಸಲು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ ಒಂದೂವರೆ ತಿಂಗಳ ನಂತರ ಈ ಘಟನೆ ಮುನ್ನೆಲೆಗೆ ಬಂದಿದೆ.
ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದರು – ಎಲ್ಲರೂ ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನವರು – ಮತ್ತು ರಬುಪುರ ಪ್ರದೇಶದಲ್ಲಿ ರಹಸ್ಯವಾಗಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಆಕೆ ಮತ್ತು ಆಕೆಯ ಭಾರತೀಯ ಪ್ರೇಮಿ ಸಚಿನ್ ಮೀನಾ ಅವರನ್ನು ಜುಲೈ 4 ರಂದು ಬಂಧಿಸಲಾಯಿತು, ಆದರೆ ಸ್ಥಳೀಯ ನ್ಯಾಯಾಲಯವು ಜುಲೈ 7 ರಂದು ಅವರಿಗೆ ಜಾಮೀನು ನೀಡಿತು.
ನೋಯ್ಡಾ ಪೋಲಿಸ್ ಮತ್ತು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ಪ್ರಕರಣದ ಪ್ರತ್ಯೇಕ ತನಿಖೆಯನ್ನು ಮುಂದುವರೆಸುತ್ತಿದ್ದು, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement