ಕಾಂಗ್ರೆಸ್​​ ಶಾಸಕರ ವಿರುದ್ಧ ವಾಟ್ಸಾಪ್​ ಸ್ಟೇಟಸ್​​ : ಮಹಿಳಾ ಪೇದೆ ಅಮಾನತು

ಚಿಕ್ಕಮಗಳೂರು : ಜಿಲ್ಲೆ ಕಡೂರು ಕ್ಷೇತ್ರ ಕಾಂಗ್ರೆಸ್ ಶಾಸಕ ಆನಂದ ಅವರ​​​ ವಿರುದ್ಧ ಸ್ಟೇಟಸ್​​​ ಹಾಕಿದ ಆರೋಪದ ಮೇಲೆ ಕಡೂರು ಪೊಲೀಸ್ ಠಾಣೆ ಮಹಿಳಾ ಪೇದೆಯನ್ನು ಅಮಾನತು ಮಾಡಲಾಗಿದೆ. ಕಡೂರು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್‌ ಪೇದೆ ಲತಾ ಎಂಬವರು ಅಮಾನತಾಗಿದ್ದಾರೆ ಎಂದು ವರದಿಯಾಗಿದೆ. ಕಡೂರು ಶಾಸಕ ಆನಂದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳಾ ಕಾನ್ಸ್ಟೇಬಲ್‌ … Continued

ಮುನ್ನಾರಿನಲ್ಲಿ ಭೂಮಿಯಡಿಯಿಂದ ಹೊರಬಂದ ʼಮಹಾಬಲಿʼ ಕಪ್ಪೆ : ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ ಈ ಕಪ್ಪೆ….! ಏನಿದರ ವೈಶಿಷ್ಟ್ಯ..?

ಮುನ್ನಾರ್​: ವರ್ಷಕ್ಕೆ ಒಂದು ಬಾರಿ ಮಾತ್ರ ಭೂಮಿಯಿಂದ ಹೊರ ಬಂದು ಕಾಣಿಸಿಕೊಳ್ಳುವ ಮಹಾಬಲಿ ಕಪ್ಪೆ ಈಗ ಕೇರಳದ ಮುನ್ನಾರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ..! ಮಹಾಬಲಿ ಹೆಸರಿನ ಈ ಕಪ್ಪೆಗಳು ವರ್ಷದಲ್ಲಿ 364 ದಿನಗಳ ಕಾಲ ಭೂಮಿಯ ಒಳಗೆ ಇರುತ್ತವೆಯಂತೆ. ವರ್ಷದ ಒಂದು ದಿನ ಮಾತ್ರ ಭೂಮಿಯಿಂದ ಹೊರಬರುವ ಈ ಕಪ್ಪೆಗಳು ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್​ ಪಟ್ಟಣದ … Continued

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ತೆರಳುತ್ತಿದ್ದ 6 ವರ್ಷದ ಬಾಲಕಿಯನ್ನು ಎಳೆದೊಯ್ದು ಕೊಂದು ಹಾಕಿದ ಚಿರತೆ…!

ತಿರುಪತಿ: ಶುಕ್ರವಾರ ರಾತ್ರಿ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ತಿರುಮಲ ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದ ಆರು ವರ್ಷದ ಬಾಲಕಿಯನ್ನು ಚಿರತೆಯೊಂದು ಎಳೆದೊಯ್ದು ಕೊಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ. ಶುಕ್ರವಾರ ರಾತ್ರಿ 7:30 ರಿಂದ 8 ಗಂಟೆಯ ನಡುವೆ ಲಕ್ಷಿತಾ ಎಂಬ ಬಾಲಕಿ ತನ್ನ ಹೆತ್ತವರೊಂದಿಗೆ ನಡೆದುಕೊಂಡು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ … Continued

ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣ : ಪತಿಯನ್ನು ಬಂಧಿಸಿದ ಪೊಲೀಸರು

ನಾಗ್ಪುರ: ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ನಾಪತ್ತೆಯಾದ ಹತ್ತು ದಿನಗಳ ನಂತರ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಕೆಯ ಪತಿ ಅಮಿತ್ ಸಾಹು ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ಸಾಹು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ನಾಗ್ಪುರ ಪೊಲೀಸರ ತಂಡವು ಜಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ಪೊಲೀಸರ ಪ್ರಕಾರ, ಸಾಹು … Continued

ಗೂಂಡಾ ಕಾಯ್ದೆ ಅಡಿ ಪುನೀತ ಕೆರೆಹಳ್ಳಿ ಬಂಧನ

ಬೆಂಗಳೂರು : ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ ಕೆರೆಹಳ್ಳಿ ವಿರುದ್ಥ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ 11 ಪೊಲೀಸ್‌ ಠಾಣೆಗಳಲ್ಲಿ ಪುನೀತ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪುನೀತ ಅಪರಾಧ ಪ್ರಕರಣದಲ್ಲಿ ಪದೇ ಪದೇ ಭಾಗಿಯಾಗುತ್ತಿರುವ ಹಿನ್ನಲೆ ಪುನೀತ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 2013ರಿಂದ 2023ರ ವರೆಗೆ … Continued

ಪ್ರಸ್ತಾವಿತ ಕ್ರಿಮಿನಲ್ ಮಸೂದೆಯಲ್ಲಿ ನಕಲಿ ಸುದ್ದಿಗಳನ್ನು ಹರಡಿದರೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮಸೂದೆ-2023 ಅನ್ನು ಮಂಡಿಸಿದರು. ಪ್ರಸ್ತಾವಿತ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಗಿದೆ, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ‘ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು’ ಹರಡುವವರಿಗೆ ಸೆಕ್ಷನ್ 195 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು … Continued

ಬೆಳಗಾವಿ : ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವು

ಬೆಳಗಾವಿ : ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವು ಬೆಳಗಾವಿ: ವಿದ್ಯುತ್ ತಗುಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸ್ಥಳದಲ್ಲೆ ಮೃತಪಟ್ಟ ಘಟನೆ ಬೆಳಗಾವಿ ಶಾಹುನಗರದಲ್ಲಿ ಇಂದು, ಶನಿವಾರ ಬೆಳಿಗ್ಗೆ ಸಂಭವಿಸಿದೆ. ಬೆಳಗಾವಿಯ‌ ಶಾಹು ನಗರದ 7ನೇ ಕ್ರಾಸ್‌ನ ನಿರ್ಮಾಣ ಹಂತದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಮೃತರನ್ನು ಈರಪ್ಪ ರಾಠೋಡ (53), ಶಾಂತವ್ವ … Continued

ಸಾವಿರ ಕೋಟಿ ರೂ. ಒಡೆಯ ವಿರಾಟ್​ ಕೊಹ್ಲಿ ಒಂದು ಇನ್​ಸ್ಟಾಗ್ರಾಮ್​​ ಪೋಸ್ಟಿಗೆ ಎಷ್ಟು ಹಣ ಪಡೆಯುತ್ತಾರೆ ಗೊತ್ತೆ..?

ಭಾರತದ ಟಾಪ್‌ ಬ್ಯಾಟರ್ ವಿರಾಟ್ ಕೊಹ್ಲಿ ಫೋಟೋ ಮತ್ತು ವೀಡಿಯೊ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಹಣ ಗಳಿಸುವ ಭಾರತೀಯರಾಗಿ ಉಳಿದಿದ್ದಾರೆ. ವರದಿಯ ಪ್ರಕಾರ, ಕೊಹ್ಲಿ ಅವರು 2023 ರ ಪಟ್ಟಿಯಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಹಾಕುವ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೆ 11.45 ಕೋಟಿ ರೂ. ಹಣ ಪಡೆಯುತ್ತಾರೆ. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ … Continued

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ; ಮುಖ್ಯ ಇಂಜಿನಿಯರ್ ಸೇರಿ 9 ಜನರಿಗೆ ಗಾಯ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕೇಂದ್ರ ಕಚೇರಿಯ ಆವರಣದ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, 9ಕ್ಕೂ ಹೆಚ್ಚು ನೌಕರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಸಂಜೆ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್‌ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ … Continued

ಮಗಳನ್ನು ಕೊಂದು ದೇಹವನ್ನು ಬೈಕಿಗೆ ಕಟ್ಟಿ ಎಳೆದೊಯ್ದು ರೈಲ್ವೇ ಹಳಿಗಳ ಮೇಲೆ ಬಿಸಾಡಿದ ಕಾರ್ಮಿಕ…

ಅಮೃತಸರ: ಭೀಕರ ಘಟನೆಯೊಂದರಲ್ಲಿ, ಪಂಜಾಬ್‌ನ ಅಮೃತಸರದ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು, ಆಕೆಯ ದೇಹವನ್ನು ಬೈಕ್‌ಗೆ ಕಟ್ಟಿ, ರೈಲ್ವೇ ಹಳಿಗಳ ಮೇಲೆ ಎಸೆಯುವ ಮೊದಲು ರಸ್ತೆಯ ಮೇಲೆ ಎಳೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅವರು ಕಾರ್ಮಿಕನಾಗಿ ಕೆಲಸ ಮಾಡುವ ನಿಹಾಂಗ್ ಸಿಖ್ ಬಾವು ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬಂಧಿಸಿದ್ದಾರೆ. ತನ್ನ 20 … Continued