‘ಇಂಡಿಯಾ, ಅದು ಭಾರತ’ ಎಂದು ಸಂವಿಧಾನದಲ್ಲಿದೆ : ಜಿ20 ಆಮಂತ್ರಣ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಾಂಪ್ರದಾಯಿಕ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್‌ ಆಫ್‌ ಭಾರತʼ ಎಂದು ಬಣ್ಣಿಸುವ ಜಿ20 ಶೃಂಗಸಭೆಯ ಆಮಂತ್ರಣ ಪತ್ರಗಳ ಕುರಿತು ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು, ಸಂವಿಧಾನವನ್ನು ಓದಲು ಪ್ರತಿಯೊಬ್ಬರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.
ಸಂವಿಧಾನದಲ್ಲಿ ‘ಇಂಡಿಯಾ, ಅದು ಭಾರತ’ ಎಂದು ಇದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರದ ಆಮಂತ್ರಣ ಪತ್ರಿಕೆಗಳು ಮೋದಿ ಸರ್ಕಾರವು ʼಇಂಡಿಯಾʼ ಪದವನ್ನು ಕೈಬಿಡಲು ಮತ್ತು ಕೇವಲ ʼಭಾರತʼವನ್ನು ದೇಶದ ಹೆಸರಾಗಿ ಇರಿಸಲು ಯೋಜಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.
“ಇಂಡಿಯಾ, ಅದು ಭಾರತ – ಅದು ಸಂವಿಧಾನದಲ್ಲಿದೆ. ಅದನ್ನು ಓದಲು ನಾನು ಪ್ರತಿಯೊಬ್ಬರನ್ನು ಆಹ್ವಾನಿಸುತ್ತೇನೆ” ಎಂದು ಜೈಶಂಕರ ಹೇಳಿದರು.

“ನೀವು ʼಭಾರತʼ ಎಂದು ಹೇಳಿದಾಗ, ಅದಕ್ಕೆ ತಿಳುವಳಿಕೆ ಮತ್ತು ಅರ್ಥವು ಬರುತ್ತದೆ. ಹಾಗೂ ಅದು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಜಿ 20 ಗೆ ಸಂಬಂಧಿಸಿದ ಕೆಲವು ದಾಖಲೆಗಳಲ್ಲಿ ʼಭಾರತʼವನ್ನು ದೇಶದ ಹೆಸರಾಗಿ ಬಳಸಲಾಗಿದೆ ಎಂದು ದೃಢಪಡಿಸಿದ ಮೂಲಗಳು ಇದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ತಿಳಿಸಿವೆ.
ಈ ಕ್ರಮವು ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ವಿಷಯವು ಬರಬಹುದು ಎಂಬ ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement