ಹಾಸಿಗೆಯಿಂದ ಬಿದ್ದ 160 ಕೆಜಿ ತೂಕದ ಮಹಿಳೆ ಮೇಲೆತ್ತಲು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಕುಟುಂಬದವರು…!

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಗುರುವಾರ 160 ಕೆಜಿ ತೂಕದ ಅಸ್ವಸ್ಥ ಮಹಿಳೆ ಹಾಸಿಗೆಯಿಂದ ಬಿದ್ದ ನಂತರ ಆಕೆಯ ಕುಟುಂಬಕ್ಕೆ ಆಕೆಯನ್ನು ಮೇಲೆತ್ತಿ ಮಲಗಿಸಲು ಸಾಧ್ಯವಾಗದೆ ಸಹಾಯಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ ವಿದ್ಯಮಾನ ನಡೆದಿದೆ.
62 ವರ್ಷದ ಮಹಿಳೆಗೆ ತನ್ನ ತೂಕ ಹಾಗೂ ಅನಾರೋಗ್ಯದ ಕಾರಣ ಅವರಿಗೆ ಓಡಾಡಲು ಸಮಸ್ಯೆಯಿದೆ. ವಾಘ್ಬಿಲ್ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಅವರು ಹಾಸಿಗೆಯಿಂದ ಬಿದ್ದಿದ್ದಾರೆ. ಆದರೆ, ವಿಪರೀತ ತೂಕವಿದ್ದ ಕಾರಣ ಆಕೆಯ ಕುಟುಂಬ ಸದಸ್ಯರಿಗೆ ಆಕೆಯನ್ನು ಬೆಡ್ ಮೇಲೆ ಎತ್ತಿ ಮಲಗಿಸಲು ಸಾಧ್ಯವಾಗಲಿಲ್ಲ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಅಧಿಕಾರಿ ತಿಳಿಸಿದ್ದಾರೆ.

ಎಷ್ಟೇ ಪ್ರಯತ್ನಿಸಿದರೂ ಮಹಿಳೆಯನ್ನು ಮೇಲೆತ್ತುವುದು ಸಾಧ್ಯವಾಗದ ಕಾರಣ ಅಸಹಾಯಕತೆಯಿಂದ ಕಂಗಾಲಾದ ಕುಟುಂಬದವರು, ಕೊನೆಗೆ ಸಹಾಯಕ್ಕಾಗಿ ಅಗ್ನಿ ಶಾಮಕ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ ಎಂದು ಟಿಎಂಸಿಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ. ನಂತರ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ತಂಡವು ಫ್ಲಾಟ್‌ಗೆ ಧಾವಿಸಿ, ಮಹಿಳೆಯನ್ನು ಮೇಲಕ್ಕೆತ್ತಿ ಹಾಸಿಗೆಯ ಮೇಲೆ ಮಲಗಿಸಿದೆ ಎಂದು ಅವರು ಹೇಳಿದರು. ಬಿದ್ದ ಕಾರಣದಿಂದ ಮಹಿಳೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರ್‌ಡಿಎಂಸಿ (RDMC) ಹಲವಾರು ತುರ್ತು ಕರೆಗಳಿಗೆ ಪ್ರತಿಕ್ರಿಯಿಸುತ್ತದೆ, ಅದರಲ್ಲಿ ಇದು ಅಸಾಮಾನ್ಯವಾದುದು ಎಂದು ಅವರು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ಅಮೆರಿಕಕ್ಕೆ ಭಾರತ ಅಥವಾ ಕೆನಡಾ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕಾಗಿ ಬಂದರೆ ಅದರ ಆಯ್ಕೆ.....: ಮಾಜಿ ಪೆಂಟಗನ್ ಅಧಿಕಾರಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement