“ಹೆಮ್ಮೆಯ ಹಿಂದೂ ಎಂದರೆ…”: ದೆಹಲಿ ಅಕ್ಷರಧಾಮ ದೇವಾಲಯ ಭೇಟಿ ನಂತರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮಾರ್ಮಿಕ ಪೋಸ್ಟ್‌

ನವದೆಹಲಿ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇಂದು, ಭಾನುವಾರ (ಸೆಪ್ಟಂಬರ್‌ 10) ತಮ್ಮ G20 ಶೃಂಗಸಭೆಯ ಮಧ್ಯೆ ಸಮಯ ತೆಗೆದುಕೊಂಡು ನವದೆಹಲಿಯ ಪ್ರಖ್ಯಾತ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು.
ಅವರು ದೇವಸ್ಥಾನದಲ್ಲಿ ಪೂಜೆ ಮತ್ತು ಅಭಿಷೇಕ ನೆರವೇರಿಸಿದರು ಹಾಗೂ ಅಲ್ಲಿನ ಸ್ವಾಮಿಗಳೊಂದಿಗೆ ಸಂವಾದ ನಡೆಸಿದರು. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ ಸುರಿದಿದ್ದರೂ ಸಹ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಭಾನುವಾರ ಬೆಳಿಗ್ಗೆ 6:30 ಕ್ಕೆ ದೇವಾಲಯಕ್ಕೆ ಆಗಮಿಸಿದರು. ದೇವಾಲಯದ ಅರ್ಚಕರು ದಂಪತಿಯನ್ನು ಆವರಣದ ಸುತ್ತಲೂ ಕರೆದೊಯ್ದು ಅವರಿಗೆ 100 ಎಕರೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೀರ್ಣವಾದ ಸ್ವಾಮಿನಾರಾಯಣ ಅಕ್ಷರಧಾಮದ ಬಗ್ಗೆ ಅವಲೋಕನ ನೀಡಿದರು.
ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯಲ್ಲಿರುವ ಯುಕೆ ಪ್ರಧಾನಿ ಸುನಕ್‌, ತಮ್ಮ ಭಾರತೀಯ ಬೇರುಗಳು ಮತ್ತು ಭಾರತದೊಂದಿಗೆ ತಮ್ಮ ಸಂಪರ್ಕದ ಬಗ್ಗೆ ಅಪಾರ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ರಿಷಿ ಸುನಕ್ ಅವರು ತಾವು ‘ಹೆಮ್ಮೆಯ ಹಿಂದೂ’ ಎಂದು ಹೇಳಿದ್ದು ಮತ್ತು ಅಂದರೆ ಯಾವಾಗಲೂ ಭಾರತದ ಜನರೊಂದಿಗೆ ಸಂಪರ್ಕ ಹೊಂದಿರುವುದು ಎಂದು ಅದಕ್ಕೆ ವ್ಯಾಖ್ಯಾನ ನೀಡಿದ್ದಾರೆ.
“ನನ್ನ ಭಾರತೀಯ ಬೇರುಗಳು ಮತ್ತು ಭಾರತದೊಂದಿಗಿನ ನನ್ನ ಸಂಪರ್ಕಗಳ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ … ಹೆಮ್ಮೆಯ ಹಿಂದೂ ಎಂದರೆ ನಾನು ಯಾವಾಗಲೂ ಭಾರತ ಮತ್ತು ಭಾರತದ ಜನರೊಂದಿಗೆ ಸಂಪರ್ಕವನ್ನು ಹೊಂದಿರುವುದು” ಎಂದು ಸುನಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತನ್ನನ್ನು ರಕ್ಷಿಸಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ನಾಯಿ ʼಗೋವಾʼ

ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಬ್ರಿಟನ್‌ ಪ್ರಧಾನಿ 43 ವರ್ಷದ ರಿಷಿ ಸುನಕ್‌ 2015 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅವರನ್ನು ಫೆಬ್ರವರಿ 2020 ರಲ್ಲಿ ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಖಜಾನೆಯ ಕುಲಪತಿ (ಹಣಕಾಸು ಮಂತ್ರಿ)ಯನ್ನಾಗಿ ಮಾಡಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅವರು ಮೊದಲ ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿಯಾಗಿ ಇತಿಹಾಸ ನಿರ್ಮಾಣ ಮಾಡಿದರು.
ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದ ಬಿಲಿಯನೇರ್ ಹಾಗೂ ವಿಶ್ವ ವಿಖ್ಯಾತ ಇನ್ಫೋಸಿಸ್‌ ಕಂಪನಿಯ ಸಂಸ್ಥಾಪಕ ಬೆಂಗಳೂರಿನ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಪುತ್ರಿ.

ಪ್ರಮುಖ ಸುದ್ದಿ :-   ಆಹಾರದ ಪ್ಯಾಕೆಟ್‌ಗಳಲ್ಲಿ ತುಂಬಿ ಸಾಗಿಸುತ್ತಿದ್ದ ₹ 2,000 ಕೋಟಿ ಮೌಲ್ಯದ ಕೊಕೇನ್ ದೆಹಲಿಯಲ್ಲಿ ವಶ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement