ನವದೆಹಲಿ: ಅಕ್ಟೋಬರ್ 1 ರಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ವಿವಾಹ ನೋಂದಣಿ, ಚಾಲಕರ ಪರವಾನಗಿ, ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ನಾಗರಿಕರಿಗೆ ಜನನ ಪ್ರಮಾಣಪತ್ರಗಳು ಒಂದೇ ದಾಖಲೆಯಾಗಲಿವೆ.
ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ-2023 ಅನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವಾಲಯವು ಹೊಸ ಉಪಕ್ರಮವನ್ನು ‘ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳು ಮತ್ತು ಡಿಜಿಟಲ್ ನೋಂದಣಿಯ ಸಮರ್ಥ ಮತ್ತು ಪಾರದರ್ಶಕ ವಿತರಣೆ ಸಲುವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದೆ.
ಪ್ರಮುಖ ಅಂಶಗಳು:
1. ಈ ಕಾಯಿದೆಯು ಜನನ ಮತ್ತು ಮರಣಗಳ ರಾಷ್ಟ್ರೀಯ ನೋಂದಣಿಯನ್ನು ಮೇಲ್ವಿಚಾರಣೆ ಮಾಡಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ ಅಧಿಕಾರ ನೀಡುತ್ತದೆ. ರಾಜ್ಯದಿಂದ ನೇಮಕಗೊಂಡ ಮುಖ್ಯ ರಿಜಿಸ್ಟ್ರಾರ್‌ಗಳು ಮತ್ತು ರಿಜಿಸ್ಟ್ರಾರ್‌ಗಳು ಈ ರಾಷ್ಟ್ರೀಯ ಡೇಟಾಬೇಸ್‌ಗೆ ಅಂಕಿಅಂಶ ನೀಡುತ್ತಾರೆ. ಮುಖ್ಯ ರಿಜಿಸ್ಟ್ರಾರ್‌ಗಳು ರಾಜ್ಯ ಮಟ್ಟದ ಡೇಟಾಬೇಸ್‌ಗಳನ್ನು ನಿರ್ವಹಿಸುತ್ತಾರೆ.
2. ಈ ಹಿಂದೆ, ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್‌ಗೆ ನಿರ್ದಿಷ್ಟ ವ್ಯಕ್ತಿ ವರದಿ ಮಾಡಬೇಕಾಗಿತ್ತು. ಉದಾಹರಣೆಗೆ, ಮಗುವಿನ ಜನನದ ಆಸ್ಪತ್ರೆಯ ಉಸ್ತುವಾರಿ ವೈದ್ಯಕೀಯ ಅಧಿಕಾರಿಯು ಮಗುವಿನ ಜನ್ಮವನ್ನು ವರದಿ ಮಾಡಬೇಕಿತ್ತು. ಆದರೆ ಹೊಸ ಕಾಯಿದೆಯಲ್ಲಿ ಜನನ ಪ್ರಕರಣಗಳಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಯನ್ನು ಸಹ ಒದಗಿಸಬೇಕಾಗುತ್ತದೆ.
3.ಹೊಸ ಕಾಯಿದೆಯ ಅಡಿಯಲ್ಲಿ, ಇದನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ದತ್ತು ಪಡೆದ ಪೋಷಕರು, ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗು ಮತ್ತು ಒಂಟಿ ಪೋಷಕರಿಗೆ ಅಥವಾ ಅವಿವಾಹಿತ ತಾಯಿ ಮಗುವಿನ ಜನನದ ಸಂದರ್ಭದಲ್ಲಿ ಯಾರು ಪೋಷಕರು ಇರುತ್ತಾರೆ ಅವರ ದಾಖಲೆಗಳನ್ನು ನೀಡಬಹುದು.
4.ಹೊಸ ಶಾಸನವು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟು ಜನಸಂಖ್ಯೆಯ ನೋಂದಣಿಗಳು, ಮತದಾರರ ಪಟ್ಟಿಗಳು ಮತ್ತು ಇತರ ಅಧಿಕೃತ ಪ್ರಾಧಿಕಾರಗಳೊಂದಿಗೆ ರಾಷ್ಟ್ರೀಯ ಡೇಟಾಬೇಸ್ನ್ನು ಹಂಚಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ರಾಜ್ಯದ ಡೇಟಾಬೇಸ್‌ಗಳನ್ನು ರಾಜ್ಯ-ಅನುಮೋದಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.
5.ಕಾಯಿದೆಯ ಪ್ರಕಾರ, ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ರ ಸರಿಯಾಗಿ ಪ್ರಕ್ರಿಯೆ ಅಥವಾ ಮನವಿಯನ್ನು ಸ್ವೀಕರಿಸದಿದ್ದರೆ, ಜಿಲ್ಲಾ ರಿಜಿಸ್ಟ್ರಾರ್ ಅಥವಾ ಮುಖ್ಯ ರಿಜಿಸ್ಟ್ರಾರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಈ ಮನವಿಯನ್ನು 30 ದಿನಗಳಲ್ಲಿ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಮೇಲ್ಮನವಿಯ ದಿನಾಂಕದಿಂದ 90 ದಿನಗಳಲ್ಲಿ ತಮ್ಮ ನಿರ್ಧಾರವನ್ನು ನೀಡಬೇಕಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ