ಉತ್ತರ ಪ್ರದೇಶದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಹಾಲ್ ಅವರು ಹದಿಹರೆಯದ ಹುಡುಗನಾಗಿ ಉದ್ದನೆಯ ಕೂದಲ ಬೆಳೆಸುವುದರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಎಂದಿಗೂ ಕತ್ತರಿಸದ ಹದಿಹರೆಯದ ಬಾಲಕನ ಕೂದಲು, 4 ಅಡಿ ಮತ್ತು 9.5 ಇಂಚು ಉದ್ದವಾಗಿದೆ.
ಚಹಾಲ್ ತನ್ನ ಉದ್ದನೆಯ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುವ ಮೂಲಕ ಶ್ರದ್ಧೆಯಿಂದ ಅದನ್ನು ನಿರ್ವಹಿಸುತ್ತಾನೆ, ಪ್ರತಿ ಸಂದರ್ಭದಲ್ಲಿ ಕನಿಷ್ಠ ಒಂದು ಗಂಟೆಯನ್ನು ತನ್ನ ಕೂದಲನ್ನು ತೊಳೆಯುವುದು, ಒಣಗಿಸುವ ಪ್ರಕ್ರಿಯೆಗೆ ಮೀಸಲಿಡುತ್ತಾನೆ. ಅಮ್ಮನ ಸಹಾಯವಿಲ್ಲದಿದ್ದರೆ ಇಡೀ ದಿನ ತೆಗೆದುಕೊಳ್ಳುತ್ತದೆ” ಎಂದು ಆತ ಹೇಳಿದ್ದಾನೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಶ್ರೀ ಚಹಾಲ್ ಸಾಮಾನ್ಯವಾಗಿ ತನ್ನ ಕೂದಲನ್ನು ಬನ್‌ನಲ್ಲಿ ಕಟ್ಟುತ್ತಾನೆ ಮತ್ತು ಸಿಖ್ಖರ ಸಂಪ್ರದಾಯದಂತೆ ಅದನ್ನು ಟರ್ಬನ್ ನಿಂದ ಮುಚ್ಚುತ್ತಾನೆ. ಚಹಾಲ್ ಕುಟುಂಬ ಮತ್ತು ಆತನ ಅನೇಕ ಸ್ನೇಹಿತರು ಸಿಖ್ಖರು; ಆದಾಗ್ಯೂ, ಅವರಲ್ಲಿ ಯಾರೂ ಅವನಷ್ಟು ಉದ್ದವಾದ ಕೂದಲನ್ನು ಹೊಂದಿಲ್ಲ. ಚಹಾಲ್ ತನ್ನ ಕೂದಲು ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ತನ್ನ ಸಂಬಂಧಿಕರಿಗೆ ಹೇಳಿದಾಗ, ಅವರಲ್ಲಿ ಕೆಲವರು ನಂಬಿರಲಿಲ್ಲ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಉಲ್ಲೇಖಿಸಿದೆ.
ಬಾಲ್ಯದ ವರ್ಷಗಳಲ್ಲಿ, ಸಿದಕ್‌ದೀಪ್ ಸಿಂಗ್ ಚಹಾಲ್ ತಮ್ಮ ಕೂದಲನ್ನು ಒಣಗಿಸಲು ಹೊರಗೆ ಇದ್ದಾಗ ಕೆಲವೊಮ್ಮೆ ತನ್ನ ಸ್ನೇಹಿತರು ಕೀಟಲೆ ಮಾಡುತ್ತಿದ್ದರು ಎಂದು ಹೇಳಿದ್ದಾನೆ. “ನನ್ನ ಕೂದಲನ್ನು ಗೇಲಿ ಮಾಡಿರುವುದು ನನಗೆ ಇಷ್ಟವಾಗುತ್ತಿರಲಿಲ್ಲ” ಎಂದು ಆತ ನೆನಪಿಸಿಕೊಳ್ಳುತ್ತಾನೆ.
ಚಹಾಲ್ ತಾನು ದೊಡ್ಡವನಾದಾಗ ಅದನ್ನು ಕತ್ತರಿಸುವುದಾಗಿ ಹೇಳಿದ್ದಾನೆ. ಆದರೆ ಈಗ ಆತ ಅದನ್ನು ತಮ್ಮ ಗುರುತು ಎಂದು ಪರಿಗಣಿಸಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ