ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತವು 10 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಭಾರತ ದಾಖಲೆಯ 8ನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿತು. ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ಗೆ ಶ್ರೀಲಂಕಾ 50 ರನ್‌ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ನಾಯಕ ದಸುನ್ ಶಾನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಶ್ರೀಲಂಕಾದ ಬ್ಯಾಟರುಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ಗೆ ಪರೇಡ್ ನಡೆಸಿದರು. 7 ಓವರ್‌ಗಳಲ್ಲಿ 21ಕ್ಕೆ 6 ವಿಕೆಟ್‌ಗಳನ್ನು ಕಬಳಿಸಿದ ವೇಗಿ ಸಿರಾಜ್ ಜೀವಮಾನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ಒಂದೇ ಓವರಿನಲ್ಲಿ ಶ್ರೀಲಂಕಾದ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ವಿಕೆಟ್ ಪಡೆದರೆ ನಂತರ ಆರು ವಿಕೆಟ್‌ಗಳನ್ನು ಸಿರಾಜ್ ಪಡೆದರು. ನಂತರದ ಮೂರು ವಿಕೆಟ್‌ಗಳನ್ನು ಆಲ್‌ರೌಂಡರ್ ಹಾರ್ದಿಕ ಪಾಂಡ್ಯಾ ಪಡೆದರು. ಶ್ರೀಲಂಕಾ ತಂಡ ಕೇವಲ 50 ರನ್‌ಗಳಿಗೆ ರೋಹಿತ್ ಶರ್ಮಾ ನೇತೃತ್ವದ ತಂಡ ಆಲೌಟ್ ಮಾಡಿತು. ಎದುರಾಳಿ ನೀಡಿದ ಅಲ್ಪಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ 7.1 ಓವರ್‌ಗಳಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.
ಶ್ರೀಲಂಕಾ ಇನ್ನಿಂಗ್ಸ್…
ಪಾತುಮ್ ನಿಸ್ಸಾಂಕ (2) ಸಿ ರವೀಂದ್ರ ಜಡೇಜಾ ಬಿ ಮೊಹಮ್ಮದ್ ಸಿರಾಜ್
ಕುಸಲ್ ಪೆರೆರಾ ( 0 ) ಸಿ ಕೆ.ಎಲ್. ರಾಹುಲ್ ಬಿ ಜಸ್ಪ್ರೀತ್ ಬುಮ್ರಾ
ಕುಸಾಲ್ ಮೆಂಡಿಸ್ (17) ಬಿ ಮೊಹಮ್ಮದ್ ಸಿರಾಜ್
ಸದೀರ ಸಮರವಿಕ್ರಮ ( 0 ) ಎಲ್ಬಿಡಬ್ಲ್ಯೂ ಬಿ ಮೊಹಮ್ಮದ್ ಸಿರಾಜ್
ಚರಿತ್ ಅಸಲಂಕಾ ( 0 ) ಸಿ ಇಶಾನ್ ಕಿಶನ್ ಬಿ ಮೊಹಮ್ಮದ್ ಸಿರಾಜ್
ಧನಂಜಯ ಡಿ ಸಿಲ್ವ (4) ಸಿ ಕೆ.ಎಲ್. ರಾಹುಲ್ ಬಿ ಮೊಹಮ್ಮದ್ ಸಿರಾಜ್
ದಾಸುನ್ ಶನಕ ( 0 ) ಬಿ ಮೊಹಮ್ಮದ್ ಸಿರಾಜ್
ದುನಿತ್ ವೆಲ್ಲಲಾಗೆ (8) ಸಿ ಕೆ.ಎಲ್. ರಾಹುಲ್ ಬಿ ಹಾರ್ದಿಕ್ ಪಾಂಡ್ಯ
ದುಶನ್ ಹೇಮಂತ (13) ನಾಟ್ ಔಟ್
ಪ್ರಮೋದ್ ಮದುಶನ್ (1) ಸಿ ವಿರಾಟ್ ಕೊಹ್ಲಿ ಬಿ ಹಾರ್ದಿಕ್ ಪಾಂಡ್ಯ
ಮಥೀಶ ಪತಿರಾನ (1) ಸಿ ಇಶಾನ್ ಕಿಶನ್ ಬಿ ಹಾರ್ದಿಕ್ ಪಾಂಡ್ಯ
ಭಾರತದ ಬೌಲಿಂಗ್ O M R W
ಜಸ್ಪ್ರೀತ್ ಬುಮ್ರಾ 5 1 23 1
ಮೊಹಮ್ಮದ್ ಸಿರಾಜ್ 7 1 21 6
ಹಾರ್ದಿಕ್ ಪಾಂಡ್ಯ 2.2 0 03 3
ಕುಲದೀಪ್ ಯಾದವ್ 1 0 01 0
ನಿಮ್ಮ ಕಾಮೆಂಟ್ ಬರೆಯಿರಿ