ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ : ಕಾರ್ಯಸೂಚಿಯಲ್ಲಿ 8 ಮಸೂದೆಗಳು, ನೂತನ ಸಂಸತ್‌ ಕಟ್ಟಡಕ್ಕೆ ಸ್ಥಳಾಂತರ

ನವದೆಹಲಿ: ಇಂದು, ಸೋಮವಾರದಿಂದ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಎಂಟು ಮಸೂದೆಗಳನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ.
ಸಂಸತ್ತಿನ 75 ವರ್ಷಗಳ ಪಯಣ ಮತ್ತು ಹೊಸ ಕಟ್ಟಡಕ್ಕೆ ಸದನದ ನಡಾವಳಿಗಳ ಕುರಿತು ಚರ್ಚೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಮತ್ತೆ ಅಚ್ಚರಿಯ ಮಸೂದೆ, ಕಾಯ್ದೆಯನ್ನು ಮಂಡಿಸಲಾಗುತ್ತದೆಯಾ ಎಂಬ ಕುತೂಹಲವೂ ಇದೆ. ಈ ಹಿಂದೆ ಅಧಿವೇಶನವನ್ನು ಘೋಷಿಸುವಾಗ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಇದನ್ನು “ವಿಶೇಷ ಅಧಿವೇಶನ” ಎಂದು ಬಣ್ಣಿಸಿದ್ದರು. ಆದರೆ ಇದು ಸಾಮಾನ್ಯ ಅಧಿವೇಶನ, ಪ್ರಸ್ತುತ ಲೋಕಸಭೆಯ 13ನೇ ಅಧಿವೇಶನ ಮತ್ತು ರಾಜ್ಯಸಭೆಯ 261ನೇ ಅಧಿವೇಶನ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿತ್ತು.
ಪ್ರಹ್ಲಾದ ಜೋಶಿ ಅವರು ಅಧಿವೇಶನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಒಟ್ಟು ಎಂಟು ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆದೇಶಕ್ಕೆ ಸಂಬಂಧಿಸಿದ ಮೂರು ಮಸೂದೆಯನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ಸದನದ ನಾಯಕರಿಗೆ ತಿಳಿಸಲಾಯಿತು.

ಯಾವುದೇ ಸಂಭವನೀಯ ಹೊಸ ಶಾಸನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ, ಕೆಲವು ವರದಿಗಳು ಕೆಲವು ಮಸೂದೆಗಳನ್ನು ಒಳಗೊಂಡಿವೆ ಎಂದು ಹೇಳಿಕೊಂಡಿವೆ. ಅಂಚೆ ಕಚೇರಿ ಬಿಲ್ 2023, ವಕೀಲರ (ತಿದ್ದುಪಡಿ) ಮಸೂದೆ 2023, ದಿ ಪ್ರೆಸ್ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ 2023, ಹಿರಿಯ ನಾಗರಿಕರ ಕಲ್ಯಾಣ ಮಸೂದೆ 2023 ಮತ್ತು ಸಂವಿಧಾನ (SC/ST) ಆದೇಶ 2023 ಸೇರಿದಂತೆ ಎಂಟು ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲು ಖಾತ್ರಿಪಡಿಸುವ ಮಸೂದೆಯನ್ನು ತರುವ ಸಾಧ್ಯತೆ ಇದೆ.

ಇಂದಿನ ಪ್ರಮುಖ ಸುದ್ದಿ :-   ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ವಿಶ್ವ ದಾಖಲೆ ಮೂಲಕ ಚಿನ್ನ ಗೆದ್ದ ಸಮ್ರಾ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮತ್ತು ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಮಂಡಿಸಬಹುದು ಎಂದು ಊಹಾಪೋಹಗಳಿವೆ. ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್ ಪ್ರಕಾರ, ಮಂಗಳವಾರ ಬೆಳಗ್ಗೆ 9:30ಕ್ಕೆ ಎಲ್ಲಾ ಸಂಸದರನ್ನು ಗುಂಪು ಛಾಯಾಚಿತ್ರಕ್ಕಾಗಿ ಕರೆಯಲಾಗಿದೆ. ಹಳೆಯ ಕಟ್ಟಡದ ಒಳ ಆವರಣದಲ್ಲಿ ಗುಂಪು ಛಾಯಾಚಿತ್ರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೂತನ ಕಟ್ಟಡದಲ್ಲಿ ಸೆಪ್ಟೆಂಬರ್ 20ರಿಂದ ಸರ್ಕಾರದ ಶಾಸಕಾಂಗ ವ್ಯವಹಾರ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರನ್ನು ಗುಂಪು ಛಾಯಾಚಿತ್ರಕ್ಕಾಗಿ ಕರೆಯಲಾಗಿದೆ. ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಭಾನುವಾರ ಬೆಳಿಗ್ಗೆ ಹೊಸ ಸಂಸತ್ ಭವನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು ಮತ್ತು ಜೋಶಿ ಅವರು ಪ್ರಸ್ತುತ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭದ ನಂತರ, ಅಧಿವೇಶನವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಿದರು.

 

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿವಾಸ ನವೀಕರಣ ಪ್ರಕರಣ : ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement