ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ತನ್ನ ನಾಲ್ಕು ಕೈಕಾಲುಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ನಡೆದಿದ್ದು, ಈ ವಿನಾಶಕಾರಿ ಘಟನೆಯು ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾದ ಪರಿಣಾಮವಾಗಿದೆ ಎಂದು ಹೇಳಲಾಗಿದೆ.
ಆಕೆಯ ಸ್ನೇಹಿತರ ಖಾತೆಗಳ ಪ್ರಕಾರ, ಇದು ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‌ನಿಂದ ಬಾಧಿತವಾಗಿರುವ ಕಡಿಮೆ ಬೇಯಿಸಿದ ಟಿಲಾಪಿಯಾ ಮೀನಿನ ಸೇವನೆಯಿಂದ ಉಂಟಾಗಿದೆ.40 ವರ್ಷದ ಲಾರಾ ಬರಾಜಾಸ್ ಅವರು ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲದ ನಂತರ ಗುರುವಾರ ಜೀವರಕ್ಷಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದು ಭಯಾನಕವಾಗಿದೆ. ಇದು ನಮ್ಮಲ್ಲಿ ಯಾರಿಗಾದರೂ ಸಂಭವಿಸಬಹುದು” ಎಂದು ಲಾರಾ ಬರಾಜಾಸ್ ಅವರ ಸ್ನೇಹಿತೆ ಅನ್ನಾ ಮೆಸ್ಸಿನಾ ಅವರು ಕ್ರೋನ್ (KRON)ಗೆ ತಿಳಿಸಿದ್ದಾರೆ. ಸ್ಯಾನ್ ಜೋಸ್‌ನ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ ಮತ್ತು ಮನೆಯಲ್ಲಿ ತನಗಾಗಿ ತಯಾರಿಸಿದ ಮೀನುಗಳನ್ನು ತಿಂದ ನಂತರ ಬರಜಾಸ್ ಅಸ್ವಸ್ಥಗೊಂಡಿದ್ದಾಳೆ ಹಾಗೂ ಕೈಕಾಲುಗಳನ್ನು ತೆಗೆಯಬೇಕಾಯಿತು ಎಂದು ಮೆಸ್ಸಿನಾ ಹೇಳಿದರು.
ಅವಳು ಬಹುತೇಕ ತನ್ನ ಜೀವವನ್ನು ಕಳೆದುಕೊಂಡಳು. ಅವಳು ಶ್ವಾಸಯಂತ್ರದ ಮೇಲಿದ್ದಳು ಎಂದು ಅನ್ನಾ ಮೆಸ್ಸಿನಾ ಹೇಳಿದರು.”ವೈದ್ಯರು ಅವಳನ್ನು ವೈದ್ಯಕೀಯವಾಗಿ ಪ್ರೇರಿತ ಕೋಮಾ (medically induced coma)ಕ್ಕೆ ಸೇರಿಸಿದರು. ಅವಳ ಬೆರಳುಗಳು ಕಪ್ಪು, ಅವಳ ಪಾದಗಳು ಕಪ್ಪು, ಮತ್ತು ಅವಳ ಕೆಳಗಿನ ತುಟಿ ಕಪ್ಪಾಗಿವೆ. ಅವಳು ಸಂಪೂರ್ಣ ಸೆಪ್ಸಿಸ್ ಹೊಂದಿದ್ದಳು ಮತ್ತು ಅವಳ ಮೂತ್ರಪಿಂಡಗಳು ವಿಫಲವಾಗಿವೆ ಎಂದು ಅನ್ನಾ ಹೇಳಿದ್ದಾರೆ.
ಸಾಮಾನ್ಯವಾಗಿ ಕಚ್ಚಾ ಸಮುದ್ರಾಹಾರ ಮತ್ತು ಸಮುದ್ರದ ನೀರಿನಲ್ಲಿ ಕಂಡುಬರುವ ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯಂ ವಿಬ್ರಿಯೊ ವಲ್ನಿಫಿಕಸ್ ಸೋಂಕಿಗೆ ಬಾರಾಜಸ್ ಒಳಗಾಗಿದ್ದಾರೆ. ಇಂತಹ ತೀವ್ರತರವಾದ ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಸಮುದ್ರಾಹಾರವನ್ನು ಸರಿಯಾಗಿ ತಯಾರಿಸುವ ಮತ್ತು ನಿರ್ವಹಿಸುವ ನಿರ್ಣಾಯಕ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳುತ್ತದೆ ಎಂದು ಅನ್ನಾ ಮೆಸ್ಸಿನಾ ಹೇಳಿದ್ದಾರೆ.
“ನೀವು ಈ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗುವ ವಿಧಾನಗಳೆಂದರೆ, ಒಂದು, ನೀವು ಕಲುಷಿತವಾಗಿರುವ ಏನನ್ನಾದರೂ ತಿನ್ನುವುದು [ಮತ್ತು] ಹಾಗೂ ಇನ್ನೊಂದು, ಈ ಬ್ಯಾಕ್ಟೀರಿಯಾ ವಾಸಿಸುವ ನೀರಿಗೆ ಶರೀರದ ಕಟ್ ಆದ ಅಥವಾ ಗಾಯಗೊಂಡ ಭಾಗ ಅಥವಾ ಟ್ಯಾಟೂವನ್ನು ಒಡ್ಡಿದರೆ ನೀವು ಸೋಂಕಿಗೆ ಒಳಗಾಗಬಹುದು ಎಂದು UCSF ಸಾಂಕ್ರಾಮಿಕ ರೋಗ ತಜ್ಞ ಡಾ. ನತಾಶಾ ಸ್ಪಾಟ್ಟಿಸ್ವುಡ್ ಅವರು ಕ್ರೋನ್ (KRON)ಗೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ