ಚೆನ್ನೈ: ಬಿಜೆಪಿ ಪಕ್ಷದ ಜೊತೆ ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಮತ್ತು ಚುನಾವಣೆಯ ಸಮಯದಲ್ಲಿ ಮಾತ್ರ ಮೈತ್ರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ.
ದ್ರಾವಿಡ ನಾಯಕ ಸಿಎನ್ ಅಣ್ಣಾದೊರೈ ಅವರನ್ನು ಟೀಕಿಸಿದ್ದಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ ಎಐಎಡಿಎಂಕೆಯ ಹಿರಿಯ ನಾಯಕ ಡಿ.ಜಯಕುಮಾರ ಅವರು,, ದಿವಂಗತ ಮುಖ್ಯಮಂತ್ರಿಗೆ ಯಾವುದೇ ಅವಮಾನವ ಮಾಡಿದರೂ ತಮ್ಮ ಪಕ್ಷದ ಕಾರ್ಯಕರ್ತರು ಅದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಿವಂಗತ ಜೆ ಜಯಲಲಿತಾ ಸೇರಿದಂತೆ ಎಐಎಡಿಎಂಕೆ ನಾಯಕರ ಬಗ್ಗೆ ಅಣ್ಣಾಮಲೈ ಟೀಕೆ ಟಿಪ್ಪಣಿ ಮಾಡಿದಾಗ ಬಿಜೆಪಿ ನಾಯಕರಿಗೆ ಸಂಯಮದಿಂದ ಇರುವಂತೆ ಪಕ್ಷ ಕೋರಿತ್ತು ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರು ಮೈತ್ರಿ ಬಯಸಿದರೂ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆ ಮೈತ್ರಿ ಬಯಸುವುದಿಲ್ಲ. ನಮ್ಮ ನಾಯಕರ ಈ ಟೀಕೆಗಳನ್ನೆಲ್ಲ ನಾವು ಸಹಿಸಬೇಕೇ? ನಾವೇಕೆ ನಿಮ್ಮನ್ನು ಹೊತ್ತುಕೊಂಡು ಹೋಗಬೇಕು? ಬಿಜೆಪಿ ಇಲ್ಲಿ ಕಾಲಿಡಲು ಸಾಧ್ಯವಿಲ್ಲ. ನಿಮ್ಮ ವೋಟ್ ಬ್ಯಾಂಕ್ ತಿಳಿದಿದೆ. ನಿಮ್ಮ ಮತ ಬ್ಯಾಂಕ್ ಗೊತ್ತಿದೆ. ನಮ್ಮಿಂದಾಗಿ ನೀವು ಹೆಸರು ಇದೆ” ಎಂದು ಬಿಜೆಪಿ ಮತ್ತು ಅದರ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಇನ್ನು (ನಾಯಕರ ಮೇಲಿನ ಟೀಕೆ) ಸಹಿಸುವುದಿಲ್ಲ, ಮೈತ್ರಿಗೆ ಸಂಬಂಧಿಸಿದಂತೆ ಅದು ಇಲ್ಲ, ಬಿಜೆಪಿ ಎಐಎಡಿಎಂಕೆ ಜೊತೆ ಇಲ್ಲ. (ವಿಷಯ) ಚುನಾವಣೆ ಸಮಯದಲ್ಲಿ ಮಾತ್ರ ನಿರ್ಧರಿಸಬಹುದು, ಇದು ನಮ್ಮ ನಿಲುವು” ಎಂದು ಅವರು ಹೇಳಿದರು.
ಇದು ತಮ್ಮ ವೈಯುಕ್ತಿಕ ಅಭಿಪ್ರಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಯಕುಮಾರ್, ನಾನು ನಿಮ್ಮೊಂದಿಗೆ ಎಂದಾದರೂ ಆ ಸ್ಥಾನದಲ್ಲಿ ಮಾತನಾಡಿದ್ದೇನೆಯೇ, ಪಕ್ಷ ಏನು ತೀರ್ಮಾನಿಸುತ್ತದೋ ಅದನ್ನು ಮಾತ್ರ ಮಾತನಾಡುತ್ತೇನೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ