ಎಐಎಸ್ಎಂಕೆ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ತಮಿಳು ನಟ ಶರತ್ ಕುಮಾರ

ಚೆನ್ನೈ: ಲೋಕಸಭೆ ಚುನಾವಣೆಗೆ ಮುನ್ನ, ತಮಿಳು ಹಿರಿಯ ನಟ ಆರ್. ಶರತಕುಮಾರ ಅವರು ಮಂಗಳವಾರ (ಮಾರ್ಚ್ 12) ತಮ್ಮ ಅಖಿಲ ಭಾರತೀಯ ಸಮತುವ ಮಕ್ಕಳ್ ಕಚ್ಚಿ (AISMK) ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ಎಐಎಸ್‌ಎಂಕೆ (AISMK) ಪದಾಧಿಕಾರಿಗಳು ಮತ್ತು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಸಮ್ಮುಖದಲ್ಲಿ ಶರತಕುಮಾರ ತಮ್ಮ ಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನಗೊಳಿಸಿದರು. … Continued

ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆ: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಶಾಕ್‌ ನೀಡಲಿದೆಯೇ ಬಿಜೆಪಿ..?! ಪುತಿಯಾತಲೈಮುರೈ ಸಮೀಕ್ಷೆ ಹೇಳುವುದೇನು..?

ಯಾವಾಗಲೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಹಣಾಹಣಿ ಏರ್ಪಡುವ ತಮಿಳುನಾಡಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದ್ದು, ರಾಜ್ಯ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಎಂದು ಫೆಡರಲ್-ಪುತಿಯಾತಲೈಮುರೈ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಫೆಡರಲ್-ಪುತಿಯಾತಲೈಮುರೈ ನಡೆಸಿದ 2024 ರ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, … Continued

ಬಿಜೆಪಿ ಜೊತೆ ಮೈತ್ರಿ ಇಲ್ಲ, ಚುನಾವಣೆ ವೇಳೆ ಈ ಬಗ್ಗೆ ನಿರ್ಧಾರ : ಎಐಎಡಿಎಂಕೆ ನಾಯಕ

ಚೆನ್ನೈ: ಬಿಜೆಪಿ ಪಕ್ಷದ ಜೊತೆ ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಮತ್ತು ಚುನಾವಣೆಯ ಸಮಯದಲ್ಲಿ ಮಾತ್ರ ಮೈತ್ರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ. ದ್ರಾವಿಡ ನಾಯಕ ಸಿಎನ್ ಅಣ್ಣಾದೊರೈ ಅವರನ್ನು ಟೀಕಿಸಿದ್ದಕ್ಕೆ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ ಎಐಎಡಿಎಂಕೆಯ ಹಿರಿಯ ನಾಯಕ ಡಿ.ಜಯಕುಮಾರ … Continued

ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವೆ : ಅಣ್ಣಾಮಲೈ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ತನ್ನ ವಿರೋಧವಿದೆ ಎಂದು ಆಂತರಿಕ ಸಭೆಯಲ್ಲಿ ಹೇಳಿದ್ದಾರೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳೂನಾಡಿನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ-ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಶುಕ್ರವಾರ ಚೆನ್ನೈನಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಆಂತರಿಕ ಸಭೆಯಲ್ಲಿ … Continued

ಮೇಕೆದಾಟು ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ತಿರುಗೇಟು

ಬೆಂಗಳೂರು: ತಮಿಳುನಾಡಿನಲ್ಲಿ ಕರ್ನಾಟಕದ ಮೇಕೆದಾಟು ವಿಚಾರವನ್ನು ರಾಜಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕದ ಪಕ್ಷದವರು ಕೂಡ ತಮಿಳುನಾಡು ರಾಜಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆ ಮಾಡುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಕೇಂದ್ರ ನೀರಾವರಿ ಸಚಿವರ … Continued

ನಮ್ಮ ಅನುಮತಿಯಿಲ್ಲದೆ ಮೇಕೆದಾಟು ಜಾರಿ ಸಾಧ್ಯವಿಲ್ಲ: ಕರ್ನಾಟಕಕ್ಕೆ ಅಣ್ಣಾಮಲೈ ಸ್ಪಷ್ಟೋಕ್ತಿ

ಚೆನ್ನೈ: ತಮಿಳುನಾಡಿನ ಸಮ್ಮತಿ ಇಲ್ಲದೇ ಮೇಕೆದಾಟು ಯೋಜನೆ ಜಾರಿಗೆ ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡನ್ನು ಬಿಟ್ಟು ಕೊಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಮಾಧ್ಯಮ ಸಂದರ್ಶನವೊಂದರಲ್ಲಿ‌ ಮಾತನಾಡಿದ್ದು, ಮೇಕದಾಟು ವಿಚಾರದಲ್ಲಿ ತಮಿಳುನಾಡು ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿರುವ ಮಾಜಿ … Continued