ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ವೈಭವದ ಗಣೇಶೋತ್ಸವ ನಡೆದಿದ್ದು, ಗಣೇಶನ ದೇವಸ್ಥಾನ ನೋಟು ಮತ್ತು ನಾಣ್ಯಗಳಿಂದ ಶೃಂಗಾರಗೊಂಡಿದೆ.
10, 20, 50, ನೂರು ಹಾಗೂ 500 ರೂಪಾಯಿ ನೋಟುಗಳ ಹಾರಗಳನ್ನು ಮಾಡಿ ಸುಂದರವಾಗಿ ಪೋಣಿಸಿ ಅಲಂಕಾರ ಮಾಡಲಾಗಿದೆ. ಜೊತೆಗೆ ನಾಣ್ಯಗಳ ಮೂಲಕವೂ ದೇಗುಲಕ್ಕೆ ಅಲಂಕಾರ ಮಾಡಲಾಗಿದೆ. 10, 20ರ ನಾಣ್ಯಗಳಿಂದ ಬಹುಸುಂದರವಾಗಿ ಅಲಂಕಾರ ಮಾಡಲಾಗಿದೆ.
ಸತ್ಯ ಗಣಪತಿ ಶಿರಾಡಿ ಸಾಯಿಬಾಬಾ ಟ್ರಸ್ಟ್‌ನಿಂದ ಸುಮಾರು ಕೋಟಿ ರೂಪಾಯಿಯೂ ಹೆಚ್ಚು ಮೌಲ್ಯದ ನೋಟು-ನಾಣ್ಯಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಸುಮಾರು 5, 10, 20 ನಾಣ್ಯಗಳು ಹಾಗೂ10, 20, 50, 100, 200, 500, 2000 ನೋಟುಗಳನ್ನು ಸರಮಾಲೆ ರೂಪದಲ್ಲಿ ಪೋಣಿಸಿ ದೇವಸ್ಥಾನಕ್ಕೆ ಅಲಂಕಾರ ಮಾಡಲಾಗಿದೆ.
120ಕ್ಕೂ ಹೆಚ್ಚು ಜನರ ತಂಡ ಹದಿನೈದು ದಿನಗಳ ಕಾಲ ಕೆಲಸ ಮಾಡಿ ಈ ನೋಟುಗಳ ಅಲಾಂಕರವನ್ನು ಮಾಡಿದೆ. ಅಲ್ಲದೆ, ಈ ಸಲ ಭಾರತದ ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ನಂತರ ದೇಶದ ಇಮೇಜ್ ಜಾಗತಿಕವಾಗಿ ಹೆಚ್ಚಾಗಿದ್ದು, ಇದಕ್ಕಾಗಿ ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್, ಮೇರಾ ಭಾರತ್ ಮಹಾನ್ ಮುಂತಾದ ಥೀಮ್ ಅನ್ನು ಇಲ್ಲಿ ಅಳವಡಿಸಲಾಗಿದೆ.
ಇಷ್ಟೆಲ್ಲ ಮಾಡಿದ ನಂತರ ಭದ್ರತೆಗಾಗಿ 15 ಜನಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆಯಂತೆ. ಅಲ್ಲದೆ, 20ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ಸುರಕ್ಷತೆಗೆ ಅಳವಡಿಕೆ ಮಾಡಲಾಗಿದೆಯಂತೆ. ಜೊತೆಗೆ ಅಲಂಕಾರ ಮಾಡಿದ ನೋಟುಗಳನ್ನು ಯಾರೂ ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ.
ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನ ನೋಟು ಮತ್ತು ನಾಣ್ಯಗಳನ್ನು ದೇವಸ್ಥಾನವನ್ನು ಆಲಂಕರಿಸುವ ಮೂಲಕ ದೇಶದ ಗಮನ ಸೆಳೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ