ಸ್ವಿಟ್ಜರ್ಲೆಂಡಿನಲ್ಲಿ ಬುರ್ಖಾ, ನಿಖಾಬ್ ನಿಷೇಧ

ಬುಧವಾರ, ಸ್ವಿಟ್ಜರ್ಲೆಂಡ್‌ನ ಸಂಸತ್ತಿನ ಕೆಳಮನೆಯಾದ ನ್ಯಾಶನಲ್ ಕೌನ್ಸಿಲ್ 151-29 ಬಹುಮತದೊಂದಿಗೆ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾಗಳನ್ನು ಒಳಗೊಂಡಂತೆ ಮುಖ ಮುಚ್ಚುವುದನ್ನು ನಿಷೇಧಿಸಲು ಮತ ಚಲಾಯಿಸಿದೆ.
ಸ್ವಿಟ್ಜರ್‌ ಲ್ಯಾಂಡ್‌ ನ ಬಲಪಂಥೀಯ ಆಡಳಿತದ ಪೀಪಲ್ಸ್‌ ಪಕ್ಷವು ಈಗಾಗಲೇ ಪಾರ್ಲಿಮೆಂಟ್‌ ನ ಮೇಲ್ಮನೆಯಲ್ಲಿ ಹಿಜಾಬ್ ನಿಷೇಧದ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಎರಡು ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರವು ಬಂದಿದೆ. ಆ ಸಮಯದಲ್ಲಿ ಸ್ವಿಸ್ ಮತದಾರರು ನಿಖಾಬ್‌ಗಳು, ಬುರ್ಖಾಗಳು, ಸ್ಕೀ ಮಾಸ್ಕ್‌ಗಳ ನಿಷೇಧವನ್ನು ಬೆಂಬಲಿಸಿದರು. ಕೆಳಮನೆಯಲ್ಲಿ ನಿಷೇಧದ ಪರವಾಗಿ ಅನುಮೋದಿನೆಯೊಂದಿಗೆ ಈಗ ನಿಷೇಧ ಫೆಡರಲ್ ಕಾನೂನು ಆಗಿ ಜಾರಿಗೆ ಬರಲಿದೆ.ಅದನ್ನು ಉಲ್ಲಂಘಿಸುವವರಿಗೆ 1,000 ಫ್ರಾಂಕ್‌ಗಳವರೆಗೆ (ಅಂದಾಜು $1,100) ದಂಡ ವಿಧಿಸಲಾಗುತ್ತದೆ.
ನಿಷೇಧವು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕರಿಗೆ ಪ್ರವೇಶ ಇರುವ ಖಾಸಗಿ ಕಟ್ಟಡಗಳಲ್ಲಿ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಚ್ಚವುದಕ್ಕೆ ಅನ್ವಯಿಸುತ್ತದೆ, ಆದಾಗ್ಯೂ ಇದು ಕೆಲವು ವಿನಾಯಿತಿಗಳಿಗೆ ಅವಕಾಶ ನೀಡುತ್ತದೆ. ಗಮನಿಸಬೇಕಾದ ಅಂಶವೆಂದರೆ ಸ್ವಿಟ್ಜರ್ಲೆಂಡ್‌ನಲ್ಲಿ ಅತಿ ಕಡಿಮೆ ಸಂಖ್ಯೆಯ ಮಹಿಳೆಯರು ಮಾತ್ರ ಬುರ್ಖಾಗಳಂತಹ ಸಂಪೂರ್ಣ ಮುಖದ ಹೊದಿಕೆಗಳನ್ನು ಧರಿಸುತ್ತಾರೆ, ಅವರು ಸಾಮಾನ್ಯವಾಗಿ ಅಫ್ಘಾನಿಸ್ತಾನದೊಂದಿಗೆ ಸಂಬಂಧ ಹೊಂದಿದ್ದಾರೆ.

ಪ್ರಮುಖ ಸುದ್ದಿ :-   1,000 ವರ್ಷದ ಹಿಂದಿನ 154 ಅಡಿ ಎತ್ತರದ 'ಒಲವಿನ ಗೋಪುರ' ಕುಸಿತದ ಭೀತಿಯಲ್ಲಿ : ಇಟಲಿ ನಗರದಲ್ಲಿ ಹೈ ಅಲರ್ಟ್‌

4.3 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement