ಏಷ್ಯನ್ ಗೇಮ್ಸ್ 2023: ಮೊದಲ ದಿನವೇ 5 ಪದಕ ಗೆದ್ದ ಭಾರತ

ಹ್ಯಾಂಗ್ ಝೂ (ಚೀನಾ) : 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೊದಲ ದಿನವಾದ ಇಂದು, ಭಾನುವಾರ ಭಾರತ ಐದು ಪದಕಗಳನ್ನು ಗೆದ್ದಿದೆ.
ಮಹಿಳೆಯರ 10 ಮೀ ಏರ್ ರೈಫಲ್ ತಂಡ ವಿಭಾಗ, ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ಸ್ ವಿಭಾಗ ಮತ್ತು ಪುರುಷರ-8 ಜೋಡಿ ರೋವಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಜೋಡಿ ರೋವಿಂಗ್ ಮತ್ತು ಮಹಿಳಾ 10 ಮೀ ಏರ್ ರೈಫಲ್ ನಲ್ಲಿ ಕಂಚಿನ ಪದಕ ಒಲಿದಿದೆ.
ರಮಿತಾ, ಆಶಿ ಚೌಕ್ಸೆ ಮತ್ತು ಮೆಹುಲಿ ಘೋಷ್ ಅವರನ್ನೊಳಗೊಂಡ 10 ಮೀ ಏರ್ ರೈಫಲ್ ತಂಡ ರಜತ ಪದಕ ಗೆದ್ದು ಪದಕ ಪಟ್ಟಿಯಲ್ಲಿ ಭಾರತದ ಹೆಸರು ಮೂಡಿಸಿದೆ.
ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಅರವಿಂದ ಸಿಂಗ್ ಮತ್ತು ಅರ್ಜುನ ಜತ್‌ ಲಾಲ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಜೋಡಿ ರೋವಿಂಗ್ ನಲ್ಲಿ ಬಾಬು ಲಾಲ್ ಯಾದವ್ ಮತ್ತು ಲೇಖ್ ರಾಮ್ ಜೋಡಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳಾ 10 ಮೀ ಏರ್ ರೈಫಲ್ ನಲ್ಲಿ ರಮಿತಾ ಅವರಿಗೆ ಕಂಚಿನ ಪದಕ ಒಲಿದಿದೆ.

ಪ್ರಮುಖ ಸುದ್ದಿ :-   ದೆಹಲಿ ಮದ್ಯ ನೀತಿ ಪ್ರಕರಣ : ಅರವಿಂದ ಕೇಜ್ರಿವಾಲಗೆ ದೊಡ್ಡ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement